ಹೆಂಡತಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ನಿಖಿಲ್..

ಸ್ಯಾಂಡಲ್ವುಡ್ ನ ಯುವರಾಜ.. ದೊಡ್ಡ ಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ಇಂದು ತಮ್ಮ ಪತ್ನಿ ರೇವತಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ‌ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

ಕಳೆದ ಏಪ್ರಿಲ್ 17 ರಂದು ಲಾಕ್ ಡೌನ್ ಇದ್ದ ಕಾರಣ ಸರಳವಾಗಿ‌ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ರಾಮನಗರದ ಕೇತೋಗನಹಳ್ಳಿಯಲ್ಲಿನ ತೋಟದ ಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಇಂದು ಮತ್ತೊಂದು ಸಂಭ್ರಮಾಚರಣೆ ಮಾಡುತ್ತಿದೆ..

ಮದುವೆಯಾದಾಗಿನಿಂದ ಹೊರಗೆಲ್ಲೂ ಹೋಗದ ಜೋಡಿ ಮೊನ್ನೆ ಮೊನ್ನೆಯಷ್ಟೇ ಕುಟುಂಬದ ಜೊತೆ ಮಡಿಕೇರಿಗೆ ತೆರಳಿದ್ದು, ಎರಡು ದಿನ ಪ್ರವಾಸ ಮುಗಿಸಿ ಮರಳಿದ್ದರು.. ಇದೀಗ ಇಂದು ಜೂನ್ 21 ರಂದು ಪತ್ನಿಯ ಹುಟ್ಟುಹಬ್ಬವನ್ನು ನಿಖಿಲ್ ಅವರು ಸರ್ಪ್ರೈಸ್ ನೀಡುವ ಮೂಲಕ ಆಚರಿಸಿದ್ದಾರೆ.‌

ಹೌದು ರೇವತಿಯವರಿಗೆ ತಿಳಿಯದಂತೆ ಅವರ ತಂದೆ ತಾಯಿಯನ್ನು ಕರೆಸಿ ಪತ್ನಿಗೆ ಸರ್ಪ್ರೈಸ್ ನೀಡಿ ಪತ್ನಿಯನ್ನು ಸಂತೋಷ ಪಡಿಸಿದ್ದಾರೆ.‌. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ನಿಖಿಲ್ ಅವರು ಹುಟ್ಟು ಹಬ್ಬದ ಶುಭಾಶಯಗಳು ಚಿನ್ನ ಎಂದು ಬರೆದು ಮುತ್ತು ಕೊಡುವ ಎಮೋಜಿ ಹಾಕಿ ಶುಭಾಶಯ ತಿಳಿಸಿದ್ದಾರೆ..

ಸದ್ಯ ಅಭಿಮಾನಿಗಳು ರೇವತಿ ಅವರ ಹುಟ್ಟುಹಬ್ಬಕ್ಕೆ ಕಮೆಂಟ್ ಮೂಲಕ ಶುಭಾಶಯ ತಿಳಿಸಿ ಸದಾ ಹೀಗೆ ಸಂತೋಷವಾಗಿರಲೆಂದು ಹಾರೈಸುತ್ತಿದ್ದಾರೆ..