ಕ್ಷಮಿಸು ಅಮ್ಮ ನಿನನ್ನು ಕಾಪಾಡಕ್ಕಾಗ್ಲಿಲ್ಲ.. ನೇತ್ರಾವತಿಗೆ ಹಾರಿ ಅಮ್ಮನಿಗಿಂತ ಮೊದಲೇ ಹೊರಟು ಹೋದ ಮಗ.. ಮನಕಲಕುವ ಸುದ್ದಿ..

ಭೂಮಿಯಲ್ಲಿ ಯಾವುದಾದರು ನಿಷ್ಕಲ್ಮಶ ಪ್ರೀತಿ ಎಂಬುದಿದ್ದರೆ ಅದು ಅಮ್ಮನ ಪ್ರೀತಿ ಮಾತ್ರವೇ.. ಹೆತ್ತವಳ ಋಣ ಅದೆಷ್ಟು ಜನ್ಮ ಎತ್ತಿದರೂ ತೀರಿಸಲಾಗದು ಎಂಬ ಮಾತು ನೂರಕ್ಕೆ ನೂರು ಸತ್ಯ.. ಅಮ್ಮನ ಮುಂದೆ ಮತ್ಯಾವುದೂ ದೊಡ್ಡದಲ್ಲ.. ಆದರೆ ಜೀವ ಕೊಟ್ಟ ಅಮ್ಮನೇ ನಮ್ಮ ಕಣ್ಣ ಮುಂದೆ ಕೊನೆ ದಿನಗ್ಳನ್ನು ಕಾಣುವಾಗ ಆಗುವ ನೋವು ಮಾತ್ರ ಯಾವ ಶತ್ರುವಿಗೂ ಬಾರದಿರಲಿ.. ಆ ನೋವು ಅನುಭವಿಸಿದವರಿಗೆ ಮಾತ್ರವೇ ಗೊತ್ತು.. ಅಂತಹುದೇ ನೋವು ಅನುಭವಿಸುತ್ತಿದ್ದ ಯುವಕ ನೇತ್ರಾವತಿಗೆ ಹಾರಿ ಅಮ್ಮನಿಗಿಂತ ಮೊದಲೇ ತನ್ನ ಜೀವನದ ಕೊನೆ ಪಯಣ ಮುಗಿಸಿದ್ದಾನೆ..

ಹೌದು ಅಮ್ಮ ಆಸ್ಪತ್ರೆಯಲ್ಲಿ ಕೊನೆ ದಿನಗಳನ್ನು‌ಲೆಕ್ಕ ಹಾಕುತ್ತಿರುವ ಸಮಯದಲ್ಲಿ ಅಮ್ಮನನ್ನು ನನ್ನಿಂದ ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿದು ಅಮ್ಮನನ್ನು ಕ್ಷಮೆ ಕೇಳಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡು ನಿನಗಿಂತ ಮೊದಲೇ ಹೋಗಿಬಿಡುವೆಂದು ನೇತ್ರಾವತಿಯಲ್ಲಿ ಹಾರಿ ತನ್ನ ಜೀವ ಕಳೆದುಕೊಂಡಿದ್ದಾನೆ..

ಹೌದು ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ.. ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಇಂದು ಮಂಗಳವರ ಆತನನ್ನು ಹೊರಗೆ ಕರೆತರಲಾಗಿದೆ.. ಹೌದು ಆತನ ಹೆಸರು ನೀರಜ್.. ವಯಸ್ಸಿನ್ನು ಮೂವತ್ತು.. ಅನಂತಾಡಿ ಪತ್ಕಂಡದ ನಿವಾಸಿ.. ಆತನ ತಾಯಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಆದರೆ ಅಮ್ಮನನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ವಿಚಾರ ಮಗನಿಗೆ ತಿಳಿದಿದೆ.. ಅದೇ ನೋವಿನಲ್ಲಿ ಕೆಲ ದಿನ ಕಳೆದ ನೀರಜ್.. ಇನ್ನು ಅಮ್ಮನನ್ನು ಕಳೆದುಕೊಳ್ಳುವ ನೋವು ಸಹಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿ.. ಅಮ್ಮನಿಗಿಂತ ಮೊದಲೇ ನಾನು ಹೋಗಬೇಕೆಂದು ಅಮ್ಮನ ಬಳಿ ಕ್ಷಮೆ ಕೇಳಿ ನೇತ್ರಾವತಿಗೆ ಹಾರಿದ್ದಾನೆ..

ಹೌದು ಸೋಮವಾರ ವಾಟ್ಸಪ್ ಸ್ಟೇಟಸ್ ಹಾಕಿರುವ ನೀರಜ್ “ಓ ದೇವರೇ ಅಮ್ಮನಿಗಿಂತ ಮೊದಲೇ ಕರೆದುಕೋ ಒಮ್ಮೆ ನನ್ನ ಎಂದು ಬರೆದಿದ್ದಾರೆ.. ಅಷ್ಟೇ ಅಲ್ಲದೇ ಸಾಲು ಸಾಲು ಸ್ಟೇಟಸ್ ಹಾಕಿ ಅಮ್ಮನ ಬಳಿ‌ ಕ್ಷಮೆ ಕೇಳಿದ್ದಾನೆ.. ಸಾರಿ ಅಮ್ಮ ನಿನ್ನನ್ನು ನನ್ನ ಕೈಲಿ‌ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.. ಕ್ಷಮಿಸಿಬಿಡು ಅಮ್ಮ.. ಎಂದು ಬರೆದಿದ್ದಾನೆ.. ಮಂಗಳವಾರ ಬೆಳಿಗ್ಗೆ ನೀರಜ್ ನದೇ ಹಪತ್ತೆಯಾಗಿದ್ದು ಅತ್ತ ತಾಯಿ ಕೊನೆ ದಿನಗಳ ಎಣಿಸುತ್ತಿರುವ ಸಮಯದಲ್ಲಿ ಮಗ ಇಲ್ಲವಾದ ಸುದ್ದಿ ಕೇಳಿದರೆ ಆ ತಾಯಿಗೆ ಅದೇನಾಗುವುದೋ ತಿಳಿಯದು.. ಇರುವಷ್ಟು ದಿನ ಆ ತಾಯಿಗೆ ಭಗವಂತ ಶಕ್ತಿ ನೀಡಲಿ.. ದುಃಖ ತಡೆಯುವ ಧೈರ್ಯ ನೀಡಲಿ.. ತಾಯಿ ಇಲ್ಲವಾದ ಬಳಿಕ ಬೇರೇನು ಇಲ್ಲವೆಂದು ತಾನೇ ಮೊದಲು ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿ ಈ ರೀತಿ ಮಾಡಿಕೊಂಡ ನೀರಜ್ ನ ಸುದ್ದಿ ಮನಕಲಕುವಂತಿದ್ದು ಸ್ನೇಹಿತರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ..