ಮದುವೆಯಾದ ಒಂದೇ ದಿನಕ್ಕೆ ನಯನತಾರಾಗೆ ಏನಾಗಿ ಹೋಯ್ತು ನೋಡಿ..

ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಗೆ ಬರುತ್ತಲೇ ಇರುತ್ತಾರೆ.. ಸಧ್ಯ ತಮ್ಮ ಮದುವೆ ವಿಚಾರವಾಗಿ‌ ಕಳೆದ ಸಾಕಷ್ಟು ತಿಂಗಳುಗಳಿಂದ ಸುದ್ದಿಯಲ್ಲಿದ್ದ ನಯನತಾರಾ ಅವರ ವಿವಾಹ ಮೊನ್ನೆ ಅದ್ಧೂರಿಯಾಗಿ ನೆರವೇರಿದೆ.‌ ಹೌದು ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆ ಗುರುವಾರ ದಾಂಪತ್ಯ ಜೀವನಕ್ಕೆ ನಯನತಾರಾ ಕಾಲಿಟ್ಟಿದ್ದಾರೆ.. ಆದರೆ ಮದುವೆಯಾದ ಒಂದೇ ದಿನಕ್ಕೆ ದೊಡ್ಡ ಯಡವಟ್ಟು ಮಾಡಿಕೊಂಡಿದ್ದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ದೊಡ್ಡ ದೊಡ್ಡ ಅಧಿಕಾರಿಗಳೇ ಮಧ್ಯ ಬರುವಂತಾಯ್ತು..

ಹೌದು ನಯನತಾರಾ ಅವರ ಮದುವೆ ವಿಚಾರ ಈ ಹಿಂದೆ ಸಾಕಷ್ಟು ಬಾರಿ ಸದ್ದು ಮಾಡಿತ್ತು.. ನಟ ಪ್ರಭುದೇವ್ ಸೇರಿದಂತೆ ಸಾಕಷ್ಟು ನಟರುಗಖ ಜೊತೆ ನಯನತಾರಾ ಅವರ ಹೆಸರು ಕೇಳಿ ಬಂದರೂ ಸಹ ಮದುವೆ ವಿಚಾರ ಸತ್ಯವಾಗಿರಲಿಲ್ಲ.. ಸಾಕಷ್ಟು ಬ್ರೇಕಪ್ ಗಳಿಂದ ನಯನತಾರ ನೊಂದಿದ್ದೂ ಉಂಟು.. ಆದರೆ ನಂತರದಲ್ಲಿ ಸ್ಟಾರ್ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆ ಡೇಟಿಂಗ್ ಶುರು ಮಾಡಿದ ನಯನತಾರಾ ಅವರು ಇಬ್ಬರ ನಡುವೆ ಪ್ರೀತಿ ಇರುವ ವಿಚಾರವನ್ನು ಹಂಚಿಕೊಂಡಿದ್ದರು..

ಇನ್ನು ಕೆಲ ತಿಂಗಳ ಹಿಂದೆ ಮದುವೆಯ ನಿರ್ಧಾರ ಮಾಡಿದ ಈ ಜೋಡಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದರು.. ಅಂದುಕೊಂಡಂತೆ ಗುರುವಾರ ಸಂಪ್ರದಾಯ ಬದ್ಧವಾಗಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮರು ದಿನವೇ ಯಡವಟ್ಟೊಂದು ನಡೆದು ಹೋಗಿತ್ತು..

ಹೌದು ಮದುವೆಯಾದ ಮರುದಿನ ತಿರುಪತಿಗೆ ತೆರಳಿದ ನೂತನ ಜೋಡಿ.. ತಿಮ್ಮಪೊಅನ ದರ್ಶನ ಪಡೆಯಲು ಮುಂದಾದರು.. ಆದರೆ ಅಲ್ಲಿ ನಯನತಾರಾ ಯಡವಟ್ಟು‌‌ ಮಾಡಿಕೊಂಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟಿಯ ಬಗ್ಗೆ ಜನರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.. ಸಧ್ಯ ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಖುದ್ದು ಟಿಟಿಡಿ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿದ್ದು ಮಾತನಾಡಿದ್ದಾರೆ..

ಹೌದು ಮೊನ್ನೆ ಮದುವೆಯ ನಂತರ ನಿನ್ನೆ ಪತಿ ವಿಘ್ನೇಶ್ ಶಿವನ್ ಜೊತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ನಯನತಾರಾ. ಈ ಜೋಡಿ ಸಾಂಪ್ರದಾಯಿಕ ಉಡುಪಿನಲ್ಲೇ ದೇವಸ್ಥಾನ ಆವರಣಕ್ಕೆ ಪ್ರವೇಶ ಮಾಡಿದರು. ಹಳದಿ ಬಣ್ಣದ ಸೀರೆಯಲ್ಲಿ ನಯನತಾರಾ ಕಂಗೊಳಿಸುತ್ತಿದ್ದರೆ, ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ತೊಟ್ಟಿದ್ದರು ವಿಘ್ನೇಶ್. ಆದರೆ, ನಯನತಾರಾ ದೇವಸ್ಥಾನದ ಆವರಣದ ಒಳಗೆ ಚಪ್ಪಲಿ ಧರಿಸಿದ್ದರು ಎನ್ನುವುದೇ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ…

ಪತಿ ವಿಘ್ನೇಶ್ ಬರಿಗಾಲಲ್ಲಿ ನಡೆದುಕೊಂಡು ಬಂದರೆ, ನಯನತಾರಾ ಚಪ್ಪಲಿ ಧರಿಸಿದ್ದರಂತೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಯನತಾರಾ ವಿರುದ್ಧ ಭಕ್ತರು ಮುಗಿಬಿದ್ದಿದ್ದರು. ವಿವಾದ ಸೃಷ್ಟಿ ಆಗುತ್ತಿದ್ದಂತೆಯೇ ತಿರುಮಲ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.. ಆದರೆ ಜನರು ಮಾತ್ರ ಸ್ಟಾರ್ ಗಳಿಗೆ ಒಂದು ಸಾಮಾನ್ಯರಿಗೆ ಒಂದು ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.. ಮದುವೆಯಾದ ಒಂದೇ ದಿನಕ್ಕೆ ದೊಡ್ಡ ಮುಜುಗರ ಎದುರಿಸುವಂತಾಗಿದ್ದು ಇದೆಲ್ಲಾ ಬೇಕಿತ್ತಾ ಎನ್ನುತ್ತಿದ್ದಾರೆ ಜನರು..