ಮದುವೆಯಾದ ಕೆಲವೇ ದಿನಗಳಲ್ಲಿ‌ ಸಿಹಿ ಸುದ್ದಿ ಹಂಚಿಕೊಂಡ ನಯನತಾರ ವಿಘ್ನೇಶ್ ದಂಪತಿ..

ಸೌತ್ ಸಿನಿಮಾ‌ ಇಂಡಸ್ಟ್ರಿಯ ಸ್ಟಾರ್ ಜೋಡಿಗಳ ಪಟ್ಟಿಗೆ ಇದೀಗ ಹೊಸದಾಗಿ ಸೇರಿರುವ ನಯನತಾರಾ ಹಾಗೂ ವಿಘ್ನೇಶ್ ದಂಪತಿ ಇದೀಗ ಮದುವೆಯಾದ ಕೆಲವೇ ದಿನಗಳಲ್ಲಿ‌ ಅಭಿಮಾನಿಗಳ ಜೊತೆ ಸಂಭ್ರಮದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನತಾರಾ ಹಾಗೂ ವಿಘ್ನೇಶ್ ದಂಪತಿ ಮದುವೆಯಾದ ದಿನದಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಯಾಗುತ್ತಲೇ ಇದ್ದು ಸಧ್ಯ ಇದೀಗ ಸಿಹಿ ಸುದ್ದಿಯೊಂದರ ವಿಚಾರವಾಗಿ ಸಾಮಾಜಿಕ‌ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ..

ಹೌದು ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು ಮದುವೆಯ ನಿರ್ಧಾರವನ್ನು ಮಾಡಿ ಕಳೆದ ತಿಂಗಳು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಮದುವೆಯಾದ ಮರು ದಿನವೇ ತಿರುಪತಿ ಕ್ಷೇತ್ರಕ್ಕೆ ಭೇಟಿ ನೀಡಿದ ದಂಪತಿ ಕಾಂಟ್ರೋವರ್ಸಿಯೊಂದಕ್ಕೆ ಸಿಲುಕಿತ್ತು.. ನಯನತಾರಾ ತಿರುಪತಿಯ ದೇವಸ್ಥಾನದ ಅಂಗಳದಲ್ಲಿ ಚಪ್ಪಲಿ ಧರಿಸಿ ಹೋಗಿದ್ದಾರೆ ಎನ್ನುವ ಸುದ್ದಿ ಹಬ್ಬಿ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಸಾಕಷ್ಟು ಅಸಮಾಧಾನವೂ ಉಂಟಾಗಿತ್ತು.. ಕೊನೆಗೆ ಸ್ಪಷ್ಟನೆ ಕೊಟ್ಟ ಟಿಟಿಡಿ ನಯನತಾರಾ ಚಪ್ಪಲ್ಲಿ ಹಾಕಿ ತಿರುಗಾಡಿದ ಜಾಗದಲ್ಲಿ ಚಪ್ಪಲಿ ಹಾಕಲು ಎಲ್ಲರಿಗೂ ಅವಕಾಶವಿದೆ ಎಂದಿದ್ದರು.. ಆದರೂ ಸಹ ಅತ್ತ ವಿಘ್ನೇಶ್ ಶಿವನ್ ಅವರು ಪತ್ನಿಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಕ್ಷಮೆ ಯಾಚಿಸಿ ಆ ವಿಚಾರವನ್ನು ಅಲ್ಲಿಯೇ ಮುಗಿಸಿದ್ದರು..

ಇನ್ನು ಕಲಾವಿದರುಗಳು ವ್ಯಯಕ್ತಿಕ ಜೀವನದ ಬಗ್ಗೆ ಗಮನ ಹರಿಸುವುದು ಕೊಂಚ ಕಡಿಮೆಯೇ ಎನ್ನುವುದು ಸತ್ಯವೆನ್ನುವಂತೆ ನಯನತಾರಾ ಅವರು ಮದುವೆಯಾದ ಕೆಲ ದಿನಗಳಲ್ಲಿಯೇ ತಮ್ಮ ವೃತ್ತಿ ಬದುಕಿಗೆ ಮರಳಿದ್ದು ಚಿತ್ರೀಕರಣದಲ್ಲಿ ಪಾಲ್ಗೊಂಡರೂ ಸಹ ಸಂಪ್ರದಾಯವನ್ನು‌ ಪಕ್ಕಕ್ಕೆ ಸರಿಸದೇ ತಮ್ಮ ಕೊರಳಲಿದ್ದ ಹರಿಷಿಣದ ದಾರವನ್ನು ತೆಗೆಯದೇ ಹಾಗೆಯೇ ಚಿತ್ರೀಕರಣದಲ್ಲಿ ತೊಡಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಅವರ ನಡೆಗೆ ಮೆಚ್ಚುಗೆಯೂ ಸಹ ವ್ಯಕ್ತವಾಗಿತ್ತು..

ಇನ್ನು ಇದೀಗ ಮದುವೆಯಾದ ಕೆಲವೇ ದಿನಗಳಲ್ಲಿ ಈ ದಂಪತಿಯ ಜೀವನದಲ್ಲಿ ಹೊಸದೊಂದು ಸಂಭ್ರಮ ಎದುರಾಗಿದೆ.. ಹೌದು ನಯನತಾರಾ ಅವರಿಗೆ ರಜನಿಕಾಂತ್ ಅವರೆಂದರೆ ಎಷ್ಟು ಇಷ್ಟವೆಂದು ಎಲ್ಲರಿಗೂ ತಿಳಿದೇ ಇದೆ.. ಈ ವಿಚಾರವನ್ನು ಸಾಕಷ್ಟು ಬಾರಿ ನಯನತಾರಾ ಅವರು ಹೇಳಿಕೊಂಡಿದ್ದರು.. ಅವರನ್ನು ಭೇಟಿಯಾದರೆ ಸಾಕು ಎನ್ನುವಂತಹ ಅಭಿಮಾನಿ ನಾನು..ಅವರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದಿದ್ದರು.. ಇನ್ನು ರಜನಿಕಾಂತ್ ಅವರನ್ನು ನೋಡುವ ಸಲುವಾಗಿಯೇ ಆಗಾಗ ರಜನಿಕಾಂತ್ ಅವರನ್ನು ಭೇಟಿ ಮಾಡೋದು ಉಂಟಂತೆ.. ಪತ್ನಿ ರಜನಿಕಾಂತ್ ಅವರನ್ನು ಇಷ್ಟೊಂದು ಇಷ್ಟ ಪಡುವ ಕಾರಣ ಇದೀಗ ವಿಘ್ನೇಶ್ ಶಿವನ್ ಪತ್ನಿಗೆ ಬಹುದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ.. ಹೌದು ರಜನಿಕಾಂತ್ ಅವರನ್ನು ಸದಾ ನೋಡಲು ಅನುವಾಗಲೆಂದು ವಿಘ್ನೇಶ್ ಶಿವನ್ ಅವರು ಪತ್ನಿ ನಯನತಾರಾಗೆ ರಜನಿಕಾಂತ್ ಅವರ ಮನೆಯ‌ ಪಕ್ಕದ ಮನೆಯನ್ನೇ ಉಡುಗೊರೆಯಾಗಿ ನೀಡಿದ್ದಾರೆ..

ಹೌದು ಇದು ನಯನತಾರಾ ಅವರಿಗೆ ವಿಘ್ನೇಶ್ ಶಿವನ್ ಅವರು ನೀಡುತ್ತಿರುವ ದುಬಾರಿ ಉಡುಗೊರೆಯಾಗಿದ್ದು ನಯನತಾರಾ ಅವರು ಸಂಭ್ರಮದಲ್ಲಿದ್ದಾರೆನ್ನಬಹುದು.. ಮನೆಯೆಂಬುದು ಪ್ರತಿಯೊಬ್ಬರ ಕನಸು.. ಮದುವೆಯಾದ ನಂತರ ಹೊಸ ಮನೆ ಹೊಸ ಜೀವನ ಸಾಮಾನ್ಯವಾಗಿ ಎಲ್ಲಾ ಸೆಲಿಬ್ರೆಟಿಗಳ ಜೀವನದಲ್ಲಿ ಸಾಮಾನ್ಯ.. ಆದರೆ ನಯನತಾರಾ ಅವರ ಜೀವನದಲ್ಲಿ ಈ ವಿಚಾರವನ್ನು ಸಹ ಸಂಭ್ರಮವನ್ನಾಗಿ ಮಾಡಿದ ಪತಿಗೆ ನಯನತಾರಾ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ..

ಒಟ್ಟಿನಲ್ಲಿ ಪತ್ನಿಯ ಆಸೆಗಳನ್ನು ಈಡೇರಿಸುವುದಕ್ಕಿಂತ ಗೌರವಿಸಿ ಅವರದ್ದೇ ಆಸೆ ಕನಸುಗಳಿಗೆ ಜೊತೆಯಾಗಿ ನಿಲ್ಲುವ ಮನಸ್ಸುಳ್ಳ ಪತಿಯನ್ನು ಪಡೆದದ್ದಕ್ಕೆ ನಯನತಾರಾ ಅವರು ಅದೃಷ್ಟವಂತರು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭ ಹಾರೈಸಿ ಈ ಜೋಡಿ ಸದಾ ಕಾಲ ಹೀಗೆ ಇರಲಿ ಎಂದು ಹಾರೈಸಿದ್ದಾರೆ.. ಒಟ್ಟಿನಲ್ಲಿ‌ಮದುವೆಯ ನಂತರ ಸಾಲು‌ಸಾಲು ಸಂಭ್ರಮದಲ್ಲಿರುವ ನಯನತಾರಾ ಅವರು ನೆಚ್ಚಿನ ನಟನ ಮನೆಯ ಪಕ್ಕದ ಮನೆಯಲ್ಲಿಯೇ ವಾಸಕ್ಕೆ ತೆರಳುತ್ತಿದ್ದು ಸಂತೋಷ ಹಂಚಿಕೊಂಡಿದ್ದಾರೆ..