ಜಗ್ಗೇಶ್ ಅವರಿಗಿಂತ ದೊಡ್ಡ ಕಲಾವಿದೆ ಆದ್ರಾ ನಯಾನಾ? ಯಾಕಮ್ಮಾ ತಾಯಿ ಬೆಳೆದು ಬಂದ ಹಾದಿ ಮರ್ತೋಯ್ತಾ?

ದಶಕಗಳ ಕಾಲ ಚಿತ್ರರಂಗದಲ್ಲಿ ರಾರಾಜಿಸಿದರೂ ಕೂಡ ಕನ್ನಡಿಗರನ್ನು ದೇವರಂದು ಅವರಿಗೆ ತಲೆ ಬಾಗಿದ ಹೆಮ್ಮೆಯ ನಟರುಗಳು ಇರುವ ಸ್ಯಾಂಡಲ್ವುಡ್ ನಮ್ಮದು.. ಆದರೆ ಇತ್ತೀಚೆಗೆ ಕೆಲವರು ಬೆಳೆಯೋವರೆಗೆ ಕನ್ನಡ ಬೇಕು.. ಕನ್ನಡ ಪ್ರೇಕ್ಷಕರೇ ಇವರನ್ನು ಬೆಳೆಸಬೇಕು. ಆದರೆ ಬೆಳೆದ ನಂತರ ಬರುವ ಅಹಂ ಇದೆಯಲ್ಲಾ ನಿಜಕ್ಕೂ ಅದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲಾ.. ಇದೀಗ ಕಾಮಿಡಿ ಕಿಲಾಡಿ ಮೂಲಕ ಹೆಸರು ಮಾಡಿದ ನಯನ ದೊಡ್ಡ ಯಡವಟ್ಟೊಂದನ್ನು ಮಾಡಿಕೊಂಡಿದ್ದಾರೆ..

ಹೌದು ಎಲ್ಲರಿಗೂ ತಿಳಿದಿರುವಂತೆ ನಯನಾ ಎಂದರೆ ಯಾರೂ ಅಂತಾನೆ ಗೊತ್ತಿರದ ಕಾಲದಲ್ಲಿ ಕಾಮಿಡಿ ಕಿಲಾಡಿ ಎಂಬ ಕನ್ನಡದ ಶೋವೊಂದು ಅನೇಕ ಕಲಾವಿದರನ್ನು ಬೆಳಕಿಗೆ ತಂದಿತು.. ನಯನಾ ಶಿವರಾಜ್ ಕೆ ಆರ್ ಪೇಟೆ ಇನ್ನು ಅನೇಕ ಕಲಾವಿದರು ಸಿನಿಮಾಗಳಲ್ಲಿಯೂ ಸಹ ಅವಕಾಶ ಪಡೆದರು..

ಆದರೆ ಅವರಿಗೆ ಬದುಕು ಕೊಟ್ಟ ಕನ್ನಡವನ್ನು ಬಳಸಿ ಎಂದ ವ್ಯಕ್ತಿಗೆ ನಯನಾ ಬಳಸಿರುವ ಭಾಷೆ ನಿಜಕ್ಕೂ ಆಕೆ ಕಲಾವಿದೆ ಅನ್ನೋದಕ್ಕೆ ಅಪವಾದ ಎಂಬಂತಿದೆ.. ಹೌದು ನಿನ್ನೆ ನಯನಾ ಅವರು ತಮ್ಮ ಫೋಟೋವೊಂದನ್ನು ಹಾಕಿ ಅದಕ್ಕೆ ಇಂಗ್ಲೀಷಿನಲ್ಲಿ ಬರೆದು ಪೋಸ್ಟ್ ಮಾಡಿದ್ದರು..

ಇದಕ್ಕೆ ವ್ಯಕ್ತಿಯೊಬ್ಬರು “ಫೇಮಸ್ ಆಗೋವರೆಗೆ ಕನ್ನಡ ಬೇಕು.. ಆದ್ಮೇಲೆ ಇಂಗ್ಲೀಶ್..” ‌ಎಂದು ಕಮೆಂಟ್ ಹಾಕಿದ್ದರು.. ಅದಕ್ಕೆ ಉತ್ತರಿಸಿದ ನಯನಾ “ಅಪ್ಪಾ ಕನ್ನಡದ ಭಕ್ತ.. ಮುಚ್ಕೊಂಡ್ ನಿನ್ ಕೆಲಸ ನೋಡ್ಕೋ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.. ನಯನಾ ಅವರ ಮಾತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಕನ್ನಡದ ಭಕ್ತರನ್ನು ಈ ರೀತಿ ಕೆಟ್ಟ ಪದ ಬಳಸೋದು ಎಷ್ಟು ಸರಿ.. ಈ ಕೂಡಲೆ ನಯನಾ ಕ್ಷಮೆ ಕೇಳಬೇಕು ಎನ್ನುತ್ತಿದ್ದಾರೆ..

ಅಲ್ರಮ್ಮಾ ನಿಮ್ಮ ಶೋ ಸಕ್ಸಸ್ ಆಗಲು ಪ್ರಮುಖ ಕಾರಣ ಜಗ್ಗೇಶ್ ಅವರು.. ಅಂತಹ ದೊಡ್ಡ ನಟನೇ ಅಚ್ಚ ಕನ್ನಡದಲ್ಲಿ ಪೋಸ್ಟ್ ಹಾಕ್ತಾರೆ.. ಅವರಿಗೇ ಇಲ್ಲದ ಅಹಂಕಾರ ನಿಮಗ್ಯಾಕೆ.. ಇರಲಿ ಯಾವ ಭಾಷೆಯಲ್ಲಾದರೂ ಪೋಸ್ಟ್ ಹಾಕಿಕೊಳ್ಳಿ.. ಕಮೆಂಟ್ ಮಾಡಿದಾತನಿಗೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಬಹುದಾಗಿತ್ತು.

ಅಥವಾ ನಿಮ್ಮ ಪಾಡಿಗೆ ನೀವು ಸುಮ್ಮನಿರಬಹುದಿತ್ತು.. ಅದನ್ನು ಬಿಟ್ಟು ಕನ್ನಡದ ಭಕ್ತ ಎಂದು ಅದರಲ್ಲೂ ಕೆಟ್ಟ ಭಾಷೆ ಬಳಸೋ ಅಗತ್ಯ ಏನಿತ್ತು? ಇದು ನಿಮ್ಮ ಕೀಳುತನವನ್ನು ತೋರುತ್ತದೆ.. ಒಬ್ಬ ಕಲಾವಿದನಿಗೆ ಇರಬೇಕಾದ ಕನಿಷ್ಠ ಅರ್ಹತೆಯೂ ತಮಗಿಲ್ಲದಾಗಿ ಹೋಯ್ತು.. ಎಂದು ನೆಟ್ಟಿಗರು ಅವರ ಪೋಸ್ಟ್ ಕೆಳಗೆಯೇ ಕಮೆಂಟ್ ಮೂಲಕ ಛೀಮಾರಿ ಹಾಕುತ್ತಿದ್ದಾರೆ..