ನವೀನ್ ಸಜ್ಜು ಅವರ ನೂತನ ಮನೆ ಎಷ್ಟು ಕೋಟಿ ಗೊತ್ತಾ?

ನಮ್ಮಚಂದನವನದಲ್ಲಿ ಕೆಲವು ಒಳ್ಳೆಯ ಘಟನೆಗಳು ಕಲಾವಿದರ ನಿಜ ಜೀವನದಲ್ಲಿ ನಡೆಯುತ್ತಿದ್ದು ಅವುಗಳನ್ನು ನೋಡಿ ಅಭಿಮಾನಿಗಳು ಸಂತೋಷ ಪಡುತ್ತಿದ್ದಾರೆ. ಇದೀಗ ಚಂದನವನದಲ್ಲಿ ಬಹಳ ಖ್ಯಾತಿ ಪಡೆದಿರುವ ಗಾಯಕ, ಸಂಗೀತ ಸಂಯೋಜಕ ಮತ್ತು ಗಾಯಕ ನವೀನ್ ಸಜ್ಜು ಅವರ ಮನೆಯಲ್ಲಿ, ಸಂಭ್ರಮದ ವಾತಾವರಣ ಮನೆಮಾಡಿದೆ. ಕಾರಣ ಏನೆಂದರೆ ನವೀನ್ ಸಜ್ಜು ಅವರು ಹೊಸ ಮನೆ ಕಟ್ಟಿಸಿದ್ದು, ಮನೆಯ ಗೃಹಪ್ರವೇಶ ಅದ್ಧೂರಿಯಾಗಿ ನಡೆದಿದೆ. ಹೊಸ ಮನೆ ಕಟ್ಟಿಸಲು ನವೀನ್ ಸಜ್ಜು ಅವರು ಖರ್ಚು ಮಾಡಿರುವ ಹಣ ಎಷ್ಟು ಗೊತ್ತಾ..

ನವೀನ್ ಸಜ್ಜು ಅವರು ಅಪ್ಪಟ ಮೈಸೂರಿನ ಹುಡುಗ. ಮೈಸೂರಿನಲ್ಲೇ ಹುಟ್ಟಿ ಬೆಳೆದು, ಇಲ್ಲಿಯೇ ರಂಗಭೂಮಿಯಲ್ಲಿ ನಿರತರಾಗಿದ್ದವರು. ನವೀನ್ ಸಜ್ಜು ಅವರಿಗೆ ನಟನೆ ಮತ್ತು ಸಂಗೀತದಲ್ಲಿ ಆಸಕ್ತಿ ಇದ್ದ ಕಾರಣ, ಸಿನಿಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು ನವೀನ್. ಇವರು ನಡೆದು ಬಂದ ಹಾದಿ, ಸುಲಭವಾಗಿ ಇರಲಿಲ್ಲ. ಬಹಳಷ್ಟು ಕಷ್ಟಪಟ್ಟು ಅವಮಾನಗಳನ್ನು ಅನುಭವಿಸಿ ಇಂದು ನವೀನ್ ಸಜ್ಜು ಆಗಿ ಜನಮನ್ನಣೆ ಗಳಿಸಿದ್ದಾರೆ. ನವೀನ್ ಸಜ್ಜು ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ..

ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ನವೀನ್ ಸಜ್ಜು ಅವರು ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು, ಒಳ್ಳೆಯ ಹೆಸರು ಪಡೆದುಕೊಂಡರು. ನಂತರ ಅವರಿಗೆ ಒಳ್ಳೆಯ ಅವಕಾಶಗಳು ಸಹ ಸಿಗಲು ಶುರುವಾದವು. ಇದೀಗ ನವೀನ್ ಸಜ್ಜು ಅವರು ಮೈಸೂರಿನಲ್ಲಿ ಹೊಸ ಮನೆ ಕಟ್ಟಿಸಿ, ತಮ್ಮ ಭವ್ಯವಾದ ಮನೆಗೆ “ಮಾನಸು” ಎಂದು ಹೆಸರು ಇಟ್ಟಿದ್ದಾರೆ. ಇವರ ಮನೆ ಗೃಹಪ್ರವೇಶದ ಫೋಟೋಗಳನ್ನು ಬಿಗ್ ಬಾಸ್ ಸ್ಪರ್ಧಿ ಆಗಿದ್ದ ಅಕ್ಷತಾ ಪಾಂಡವಪುರ ಅವರು ಶೇರ್ ಮಾಡಿಕೊಂಡಿದ್ದಾರೆ. ಅಕ್ಷತಾ ಮತ್ತು ನವೀನ್ ಸಜ್ಜು ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಇದ್ದಾಗಿನಿಂದಲೂ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹ ಇತ್ತು.

ಆ ಸ್ನೇಹ ಈಗಲೂ ಮುಂದುವರೆದಿದ್ದು, ಒಬ್ಬರ ಮನೆಯಲ್ಲಿ ಏನಾದರೂ ಶುಭಕಾರ್ಯ ನಡೆದರೆ, ಮತ್ತೊಬ್ಬರು ಹೋಗಿ ಶುಭ ಹಾರೈಸಿ ಬರುತ್ತಾರೆ. ಅದೇ ರೀತಿ, ನವೀನ್ ಸಜ್ಜು ಅವರ ಮನೆಯ ಗೃಹಪ್ರವೇಶಕ್ಕೆ ಅಕ್ಷತಾ ಅವರು ಹೋಗಿದ್ದು, ಸೋಷಿಯಲ್ ಮೀಡಿಯಾದಲ್ಲಿ, ” ‘ಮಾನಸು’ ಇವತ್ತು ಮೈಸೂರಿನಲ್ಲಿ ನಮ್ಮ ನವೀನನ ಮನೆ ಓಪನಿಂಗ್ ಇತ್ತು….ಚಂದದ ಮನೆ. ಮುಂದಿನ ಎಲ್ಲಾ ದಿನಗಳೂ ಹೀಗೆ ಮನೆಯಷ್ಟೇ ಚಂದವಾಗಿರಲಿ ನವೀನ್ ಸಜ್ಜುಗೆ ಒಳ್ಳೇದಾಗ್ಲಿ ”  ಎಂದು ಬರೆದು ಶುಭ ಕೋರಿದ್ದಾರೆ ಅಕ್ಷತಾ ಪಾಂಡವಪುರ.

ಈ ಸಂತೋಷದ ವಿಷಯ ನೋಡಿ, ನವೀನ್ ಸಜ್ಜು ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಹೊಸ ಮನೆಗೆ ವಿಶ್ ಮಾಡುತ್ತಿದ್ದಾರೆ. ನವೀನ್ ಸಜ್ಜು ಅವರು ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗಾಗಿ ಹಾಡೊಂದನ್ನು ಕಂಪೋಸ್ ಮಾಡಿದ್ದರು, ದೊಡ್ಮನೆ ದೊರೆ ಎಂದು ಶುರುವಾಗುವ ಈ ಹಾಡಿಗೆ, ಜೇಮ್ಸ್ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ಅವರು ಸಾಹಿತ್ಯ ಬರೆದರೆ, ನವೀನ್ ಸಜ್ಜು ಅಬರು ಹಾಡನ್ನು ಕಂಪೋಸ್ ಮಾಡಿ, ಹಾಡಿದ್ದಾರೆ. ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿತ್ತು.