ಗಂಡನನ್ನು ಉಳಿಸಿಕೊಳ್ಳಲು ತಿರುಪತಿಗೆ ಕೂದಲು ಕೊಟ್ಟ ಖ್ಯಾತ ನಟನ ಪತ್ನಿ..

ಮದುವೆ ಎನ್ನುವುದು ಎರಡು ಮನಸ್ಸುಗಳ ಮಿಲನ ಎಂದು ದೊಡ್ಡವರು ಸುಮ್ಮನೆ ಹೇಳಿಲ್ಲ. ಗಂಡ ಹೆಂಡತಿ ಇಬ್ಬರೂ ಒಬ್ಬರನ್ನು ಒಬ್ಬರು ಎಷ್ಟು ಪ್ರೀತಿಸುತ್ತಾರೋ, ಅದೇ ಇಬ್ಬರಲ್ಲಿ ಯಾರಾದರೂ ಒಬ್ಬರಿಗೆ ಕಷ್ಟ ಬಂದರೂ ಸಹ ಇಬ್ಬರಿಗೂ ಸಹ ದುಃಖವಾಗುತ್ತದೆ. ಇನ್ನು ನಾವು ಅದೆಷ್ಟೋ ಬಾರಿ ಕೇಳಿದ್ದೇವೆ ತನ್ನ ಪತಿಗಾಗಿ ಅದೆಷ್ಟೋ ಪತ್ನಿಯರು ಯಾರು ಊಹಿಸದ ಕೆಲಸಗಳನ್ನು ಮಾಡಿದ್ದಾರೆ. ಈ ರೀತಿ ನಮ್ಮ ಮನಸ್ಸಿಗೆ ಮೊದಲ ಬರುವ ಹೆಸರು ಸತಿ ಸಾವಿತ್ರಿ. ತನ್ನ ಪತಿಯ ಪ್ರಾಣವನ್ನು ಉಳಿಸಿಕೊಳ್ಳಲು ಯಮನನ್ನೇ ಜಯಿಸಿದ್ದಳು ಸತಿ ಸಾವಿತ್ರಿ. ಇಂದಿಗೂ ಸಹ ಆಕೆಯ ಹೆಸರನ್ನು ಸಾಕಷ್ಟು ಉದಾಹರಣೆಗಳಾಗಿ ನೀಡುತ್ತಾರೆ. ಇನ್ನು ಇದೀಗ ಈ ನಟಿ ಮಾಡಿರುವ ಕೆಲಸ ನೋಡಿ ನಿಜಕ್ಕೂ ಮನ ಕುಲುಕುತ್ತದೆ. ಹಾಗಾದರೆ ಈ ನಟಿ ಯಾರು? ಏನು ಮಾಡಿದ್ದಾರೆ ಈ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ…

ಈಗಿನ ಕಾಲದಲ್ಲಿ ಪ್ರೀತಿ, ಮದುವೆ ಈ ಯಾವುದೇ ಪದಕ್ಕೂ ಅರ್ಥಗಳು ಇಲ್ಲ. ಕೆಲವರು ಮದುವೆಯನ್ನು ಹಾಸ್ಯ ಮಾಡಿಬಿಟ್ಟಿದ್ದಾರೆ. ಇನ್ನು ಕೆಲವರಿಗೆ ಮದುವೆಯ ಬಗ್ಗೆ ನಂಬಿಕೆಯೇ ಹೊರಟುಹೋಗಿದೆ. ಈ ಆಧುನಿಕ ಕಾಲದಲ್ಲಿ ಮದುವೆ, ಪ್ರೀತಿ, ಸ್ನೇಹ ಈ ಯಾವುದೇ ಪದಗಳಿಗೂ ಅರ್ಥವೇ ಇಲ್ಲ. ಈ ಕಾಲದಲ್ಲಿ ಸಂಬಂಧಗಳು ಕೆಲವ ಒಂದು ಆಟದ ವಸ್ತುವಾಗಿ ಬಿಟ್ಟಿದೆ. ಆದರೆ ಇದೀಗ ಈ ಖ್ಯಾತ ನಟಿ ಮಾಡಿರುವ ಕೆಲಸ ನೋಡಿದರೆ ಇನ್ನು ಈ ರೀತಿಯ ಜನ ಇದ್ದಾರಾ ಎನ್ನುವ ಪ್ರಶ್ನೆ ಕಾಡುತ್ತದೆ. ಹೌದು ತನ್ನ ಪತಿಯ ಆರೋಗ್ಯ ಚೇತರಿಕೆಗಾಗಿ ತನ್ನ ಇಡೀ ತಲೆ ಕೂದಲನ್ನು ಮುಡಿ ಕೊಟ್ಟಿದ್ದಾರೆ ಈ ನಟಿ. ಈ ನಟಿ ಯಾರು..

ಹಿಂದಿ ಕಿರುತೆರೆಯ ಖ್ಯಾತ ನಟ ಸೂರಜ್ ಧಾಪರ್, ತಮ್ಮ ಅಪ್ರತಿಮಾ ನಟನೆಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದೀಗ ನಟ ಸೂರಜ್ ಥಾಪರ್ ಅವರ ಹೆಂಡತಿ ತಮ್ಮ ತಲೆ ಕೂದಲನ್ನು ಮುಡಿ ಕೊಟ್ಟು, ಒಂದು ದೊಡ್ಡ ಶಾಕ್ ನೀಡಿದ್ದಾರೆ. ಹೌದು ಕಳೆದ ವರ್ಷ ಕೊರೋನ ವೈರಸ್ ಕಾರಣದಿಂದ ಸಾಕಷ್ಟು ಜನ ಗಂಭೀರ ಸ್ಥಿತಿಯಲ್ಲಿದ್ದರು. ಈ ವೇಳೆ ನಟ ಸೂರಜ್ ಥಾಪರ್ ಅವರಿಗೂ ಕೂಡ ಕೊರೋನ ವೈರಸ್ ಸೋಂಕು ತಗುಲಿತ್ತು. ದಿನದಿಂದ ದಿನಕ್ಕೆ ಅವರ ಆರೋಗ್ಯದಲ್ಲಿ ಏರು ಪೇರು ಹೆಚ್ಚಾಗಲು ಶುರುವಾಗಿತ್ತು. ಅದೆಷ್ಟೋ ಆಸ್ಪತ್ರೆಗಳು ಅಲೆದಾಡಿದರು ಕೂಡ ಏನು ಪ್ರಯೋಜನವಾಗಲಿಲ್ಲ. ಈ ವೇಳೆ ಸೂರಜ್ ಥಾಪರ್ ಪತ್ನಿ ದೀಪ್ತಿ ದ್ಯಾನಿ ಅವರು ದೇವರ ಮೊರೆ ಹೋಗಿದ್ದರು.

ಸೂರಜ್ ಅವರ ಆರೋಗ್ಯ ಪರಿಸ್ಥಿತಿ ಅದಗೆಟ್ಟ ಕಾರಣ, ಪತ್ನಿ ದೀಪ್ತಿ ಅವರು ಸೂರಜ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡರೆ ತಾನು ತನ್ನ ಇಡೀ ಕೂದಲನ್ನು ಮುಡಿಯಾಗಿ ತಿರುಪತಿಗೆ ಅರ್ಪಿಸುವುದಾಗಿ ಹರಕೆ ಮಾಡಿಕೊಂಡಿದ್ದರಂತೆ. ಕೆಲ ದಿನಗಳ ನಂತರ ಸೂರಜ್ ಅವರು ಕೋವಿಡ್ ಸೋಂಕಿನಿಂದ ಮುಕ್ತರಾಗಿ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಇಂತುರಿದರು. ನಂತರ ಲಾಕ್ ಡೌನ್ ಹಾಗೂ ಇನ್ನಿತರ ಕಾರಣಗಳಿಂದ ಅವರ ಹರಕೆ ಮುಂದೂಡಿಕೆಯಾಗಿತ್ತು. ಇದೀಗ ದೀಪ್ತಿ ದ್ಯಾನಿ ಅವರು ತಮ್ಮ ಹರಕೆ ಪೂರೈಸಿದ್ದಾರೆ. ತಿರುಪತಿಗೆ ಭೇಟಿ ನೀಡಿ ತಮ್ಮ ತಲೆ ಕೂದಲನ್ನು ಮುಡಿಯಾಗಿ ಅರ್ಪಿಸಿದ್ದಾರೆ. ನನ್ನ ಹೆಂಡತಿಯನ್ನು ಈ ರೀತಿ ನೋಡಿ ಒಂದು ಕ್ಷಣ ನಾನು ಶಾಕ್ ಆದೇ ಎಂದಿದ್ದಾರೆ ನಟ ಸೂರಜ್ ಥಾಪರ್.

ತಲೆ ಕೂದಲನ್ನು ಮುಡಿಯಾಗಿ ಅರ್ಪಿಸಿ ಪತ್ನಿ ದೀಪ್ತಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ನಿಮಗಾಗಿ ಸೂರಜ್ ಎಂದು ದೀಪ್ತಿ ಅವರು ಬರೆದುಕೊಂಡಿದ್ದಾರೆ. ನನಗೆ ನನ್ನ ಪತ್ನಿ ಈ ವಿಷಯದ ಬಗ್ಗೆ ಹೇಳಿದಾಗ ನನಗೆ ತುಂಬಾ ಆಶ್ಚರ್ಯವಾಯಿತ್ತು. ನಾನು ಅವಳಿಗೆ ಸಾಕಷ್ಟು ಬಾರಿ ಕೇಳಿದೆ ನೀನು ನಿನ್ನ ಸಂಪೂರ್ಣ ಕೂದಲನ್ನು ಕೊಡುತ್ತಿಯಾ ಎಂದು ಅದಕ್ಕೆ ಅವಳು, ನನ್ನ ಕೂದಲಿಗಿಂತ ಜೀವನ ಮುಖ್ಯ ಎಂದು ಹೇಳಿದಳು. ಇದನ್ನು ಕೇಳಿ ನನ್ನ ಮನಸ್ಸಿಗೆ ತುಂಬಾ ಸಂತೋಷವಾಯಿತು ಎಂದು ನಟ ಸೂರಜ್ ತಮ್ಮ ಪತ್ನಿ ಮುಡಿಕೊಟ್ಟ ವಿಚಾರದ ಬಗ್ಗೆ ಮಾತನಾಡುವಾಗ ಹೇಳಿದ್ದಾರೆ. ಇದೀಗ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.