ಪ್ರಸಾರ ನಿಲ್ಲಿಸಿದ ಕನ್ನಡದ ಮತ್ತೊಂದು ಖ್ಯಾತ ಧಾರಾವಾಹಿ..

ಕಿರುತೆರೆ ಲೋಕದಲ್ಲಿ ತಿಂಗಳಿಗೊಂದು ಹೊಸ ಧಾರಾವಾಹಿ ಬರುತ್ತಲೇ ಇರುತ್ತದೆ.. ಜನಪ್ರಿಯತೆ ಪಡೆದಿದ್ದರೂ ರೇಟಿಂಗ್ ಕಾರಣದಿಂದ ಸಾಕಷ್ಟು ಧಾರಾವಾಹಿಗಳು ಅರ್ಧಕ್ಕೆ ನಿಂತದ್ದೂ ಉಂಟು.. ಇನ್ನು ಇದೀಗ ಕನ್ನಡ ಕಿರುತೆರೆಯಲ್ಲಿ ಜೊತೆಜೊತೆಯಲಿ ಧಾರಾವಾಹಿಯ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿರುವ ಸಮಯದಲ್ಲಿಯೇ ಕನ್ನಡ ಖ್ಯಾತ ಧಾರಾವಾಹಿ ಮುಕ್ತಾಯಗೊಳ್ಳುತ್ತಿದ್ದು ಕೆಲವೊಂದಿಷ್ಟು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರೆ ಮತ್ತಷ್ಟು ಜನ ಈ ಧಾರಾವಾಹಿ ಮುಗಿದದ್ದೇ ಒಳ್ಳೇದಾಯಿತು ಎಂದಿದ್ದಾರೆ..

ಹೌದು ಜೊತೆಜೊತೆಯಲಿ ಧಾರಾವಾಹಿಯಿಂದ ಅನಿರುದ್ದ್ ಅವರನ್ನು ಕೈ ಬಿಟ್ಟ ವಿಚಾರ ದೊಡ್ಡ ಸುದ್ದಿಯಾಗಿ ಅನಿರುದ್ಧ್ ಅವರ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದೂ ಆಯ್ತು.. ಅತ್ತ ವಾಹಿನಿ ಹಾಗೂ ಧಾರಾವಾಹಿ ತಂಡ ಮಾತ್ರ ಅನಿರುದ್ಧ್ ಅವರ ವಿಚಾರಕ್ಕೆ ಕೈ ಮುಗಿದು ಇನ್ನು ಅವರನ್ನು ಮತ್ತೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದಾಯ್ತು.. ಈ ನಡುವೆ ಜೊತೆಜೊತೆಯಲಿ ಧಾರಾವಾಹಿಯನ್ನು ಸಂಪೂರ್ಣವಾಗಿ ಮುಕ್ತಾಯ ಮಾಡಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದ್ದಂತೆ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರ ಎಂಟ್ರಿಯಾಗಿ ಧಾರಾವಾಹಿ ತನ್ನ ಪಾಡಿಗೆ ಮುಂದುವರೆದಿದ್ದೂ ಆಯ್ತು.. ಈ ನಡುವೆ ಕನ್ನಡದ ಮತ್ತೊಂದು ಧಾರಾವಾಹಿಯ ಕುರಿತು ಮುಕ್ತಾಯದ ಮಾತುಗಳು ಕೇಳಿ ಬಂದಿದೆ‌‌.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿ ಸದ್ಯದಲ್ಲೇ ಪ್ರಸಾರ ನಿಲ್ಲಿಸಲಿದೆ ಎಂದು ತಿಳಿದು ಬಂದಿದೆ..

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚಿಗಷ್ಟೆ ದೊರೆಸಾನಿ ಧಾರಾವಾಹಿಯ ಪ್ರಸಾರ ನಿಲ್ಲಿಸಲಾಗಿದೆ. ದೊರೆಸಾನಿ 202 ಸಂಚಿಕಗಳು ಮಾತ್ರ ಪ್ರಸಾರವಾಗಿತ್ತು. ಆದರೆ ಆಗಲೇ ಧಾರಾವಾಹಿ ಪ್ರಸಾರ ದಿಢೀರ್ ನಿಲ್ಲಿಸುವ ಮೂಲಕ ಪ್ರೇಕ್ಷಕರಿಗೆ ಶಾಕ್ ನೀಡಿದರು. ಇದೀಗ ಮತ್ತೊಂದು ಧಾರಾವಾಹಿ ಪ್ರಸಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಕಿರುತೆರೆ ಪ್ರೇಕ್ಷಕರು ಹೆಚ್ಚು ಇಷ್ಟ ಪಟ್ಟಿದ್ದ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ ಕೂಡ ಒಂದು. ಈ ಧಾರಾವಾಹಿ ಇದೇ ತಿಂಗಳು ಮುಕ್ತಾಯ ಆಗಲಿದೆ ಎನ್ನುವ ಮಾಹಿತಿ ಕೇಳಿಬಂದಿದೆ. ಸೆಪ್ಟಂಬರ್ 24ರಂದು ಈ ಧರಾವಾಹಿಯ ಕೊನೆ ಸಂಚಿಕೆ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.

ಅಂದಹಾಗೆ ಸದ್ಯ ಧರಾವಾಹಿಯ ಕ್ಲೈಮ್ಯಾಕ್ಸ್ ಚಿತ್ರೀಕರಣ ಭರದಿಂದ ನಡೆಯುತ್ತಿದೆಯಂತೆ. ಈ ಧಾರಾವಾಹಿ ಪ್ರಸಾರ ನಿಲ್ಲಿಸುವ ಮುಂಚೆ ಒಂದಿಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಲಿದೆ ಎನ್ನಲಾಗಿದೆ. ಧಾರಾವಾಹಿಯಲ್ಲಿ ಪ್ರಮುಖ ತಿರುವು ನೀಡಿ ಮುಕ್ತಾಯ ಮಾಡಲಾಗುತ್ತಿದೆ ಎನ್ನಲಾಗಿದೆ.

ನನ್ನರಸಿ ರಾಧೆ ಧಾರಾವಾಹಿ ಹೆಚ್ಚು ಓದದ ಹುಡುಗಿ ಮತ್ತು ಯುವ ಉದ್ಯಮಿ ನಡುವಿನ ಪ್ರೇಮಕಥೆಯನ್ನು ವಿವರಿಸುವ ಧಾರಾವಾಹಿ. ಧಾರಾವಾಹಿಯ ನಾಯಕ ಅಗಸ್ತ್ಯ ಹೆಚ್ಚು ಓದಿ ತನ್ನದೆ ಕಂಪನಿಯನ್ನು ಹೊಂದಿರುತ್ತಾನೆ. ನಾಯಕಿ ಇಂಚರಾ ಹೆಚ್ಚು ಓದದೆ ಇರುವ ಹುಡುಗಿ. ಆದರೂ ಅಗಸ್ತ್ಯ ಎಂಟರ್ ಪ್ರೈಸಸ್ ಕಂನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾಳೆ. ಅಗಸ್ತ್ಯನಿಗೆ ಇಂಚರಾ ಕಂಡರೆ ಧ್ವೇಷ. ಆದರೆ ಅದೇ ದ್ವೇಷ ಪ್ರೀತಿಗೆ ತಿರುಗಿ ಮದುವೆಯಾಗುತ್ತಾರೆ. ಪ್ರೀತಿ, ದ್ವೇಷದ ನಡುವೆ ಅಗಸ್ತ್ಯ ತನ್ನ ತಾಯಿಯನ್ನು ಹುಡುಕುವ ಭಾವನಾತ್ಮಕ ಕಥೆಯನ್ನು ಸೇರಿಸಲಾಗಿತ್ತು. ಅಗಸ್ತ್ಯ ಕೊನೆಗೂ ತನ್ನ ತಾಯಿನ್ನು ಹುಡುಕುತ್ತಾನೆ. ಸದ್ಯ ಈ ಧಾರಾವಾಹಿಯಲ್ಲಿ ಅಗಸ್ತ್ಯನ ತಾಯಿಯೆ ಮಗ, ಸೊಸೆಯನ್ನು ಬೇರೆ ಮಾಡಿದ್ದಾಳೆ. ಕೊನೆಲ್ಲಿ ಈ ಧಾರಾವಾಹಿಗೆ ಇನ್ನೇನು ಟ್ವಿಸ್ಟ್ ಸಿಗಲಿದೆ, ಇಬ್ಬರು ಒಂದಾಗುತ್ತಾರಾ ಎನ್ನುವುದು ಕ್ಲೈಮ್ಯಾಕ್ಸ್ ನಲ್ಲಿ ಗೊತ್ತಗಾಲಿದೆ.

ಅಂದಹಾಗೆ ಈ ಧಾರಾವಾಹಿ ಇತ್ತೀಚೆಗೆ 600 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಇದರ ಸಂಭ್ರಮವನ್ನು ಧಾರಾವಾಹಿ ತಂಡ ಆಚರಿಸಿತ್ತು. ಸದ್ಯ ಈ ಧಾರಾವಾಹಿ ಮುಕ್ತಾಯವಾಗುತ್ತಿದ್ದು ಪ್ರೇಕ್ಷಕರು ಅಗಸ್ತ್ಯ- ಇಂಚರಾ ಜೋಡಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622