ಯಶ್ ಮನೆಗೆ ಮತ್ತೊಂದು ಗಂಡು ಮಗು ಆಗಮನ.. ಸಂಭ್ರಮದಲ್ಲಿ ಕುಟುಂಬ..

ಕರೊನಾದ ಆತಂಕದ ನಡುವೆಯೂ ಯಶ್ ಕುಟುಂಬದಲ್ಲಿ ಸಂಭ್ರಮವೊಂದು ಮನೆ ಮಾಡಿದೆ.. ಹೌದು ಯಶ್ ಮನೆಗೆ ಮತ್ತೊಂದು ಕಂದನ ಆಗಮನವಾಗಿದೆ.. ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಗೆ ಅದಾಗಲೇ ಎರಡು ಮಕ್ಕಳಿದ್ದು ನೂತನವಾಗಿ ಆಗಮಿಸಿರುವ ಈ ಪುಟಾಣಿ ಕಂದ ಯಾರೆಂಬ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ..

ಹೌದು ಯಶ್ ಮನೆಯಲ್ಲಿ ಅದಾಗಲೇ ಐರಾ ಹಾಗೂ ಜೂನಿಯರ್ ಯಶ್ ಬಂದಾಗಿದೆ.‌ ಈಗ ಬಂದ ನೂತನ ಸದಸ್ಯ ಮತ್ಯಾರೂ ಅಲ್ಲ ಯಶ್ ಅವರ ತಂಗಿ ನಂದಿನಿ ಅವರು ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.‌ ಯಶ್ ತಂಗಿ ತಾನು ತಾಯಿಯಾಗಿರುವ ವಿಷಯವನ್ನು ತಿಳಿಸಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ರಾಕಿಂಗ್ ಸ್ಟಾರ್ ಯಶ್ ಅವರ ಪ್ರೀತಿಯ ತಂಗಿ ನಂದಿನಿ ಇದೀಗ ಇನ್ನೊಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ನಂದಿನಿ ಅವರಿಗೆ ಅದಾಗಲೇ ಚಿರಾಗ್ ಎಂಬ ಮುದ್ದಾದ ಮಗುವಿದ್ದು ಈಗ ಇನ್ನೊಂದು ಗಂಡು ಮಗು ಅವರ ಮಡಿಲು ತುಂಬಿದೆ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ತನ್ನ ಅಣ್ಣ ಯಶ್ ಬಗ್ಗೆ ನಂದಿನಿ ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅಣ್ಣನ ಬಗ್ಗೆ ಅಭಿಮಾನದ ಮಾತನಾಡಿದ್ದರು.. ಅಣ್ಣನಿಗೆ ತಾನೆಂದರೆ ಎಷ್ಟು ಪ್ರೀತಿ ಎಂಬುದನ್ನು ಹೇಳಿಕೊಂದಿದ್ದರು.. ಅಷ್ಟೇ ಅಲ್ಲದೇ ಯಶ್ ನಂದಿನಿ ಅವರ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟಿದ್ದಾಗಿ ನಂದಿನಿ ಹೇಳಿಕೊಂಡಿದ್ದರು.

ನಂದಿನಿ ಅವರ ಮದುವೆಯಾಗಿ 8 ವರ್ಷಗಳು ಕಳೆದಿವೆ. ಇದೀಗ ನಂದಿನಿಯ ಇನ್ನೊಂದು ಮುದ್ದಾದ ಮಗು ಯಶ್ ಕುಟುಂಬದ ಖುಷಿಗೆ ಕಾರಣವಾಗಿದೆ. ರಾಕಿ ಬಾಯ್ ಮತ್ತೊಮ್ಮೆ ಮಾವನಾದ ಸಂಭ್ರಮದಲ್ಲಿದ್ದಾರೆ..