ಮಂಡ್ಯದ ಕೆರೆ ಕಾಮೇ ಗೌಡರು ಆಸ್ಪತ್ರೆಗೆ ದಾಖಲು..

ಸದ್ಯ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದ್ದ ಸುದ್ದಿ ಎಂದರೆ ಅದು ನಮ್ಮ ಮಂಡ್ಯ ಜಿಲ್ಲೆಯ ಕೆರೆ ಕಾಮೇಗೌಡರ ವಿಚಾರ.. ಆಧುನಿಕ ಭಗೀರತ ಎಂದೇ ಕರೆಯಲ್ಪಡುವ ಮಂಡ್ಯದ ಕೆರೆ ಕಾಮೇ ಗೌಡರ ಆರೋಗ್ಯದಲ್ಲಿ ಏರು ಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಪ್ರಾಣಿ ಪಕ್ಷಿಗಳಿಗಾಗಿ 16 ಕೆರೆ ನಿರ್ಮಿಸಿ ಎರಡು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದ ನಾಡಿಗೆ ಪರಿಚಿತರಾಗಿದ್ದ ಕಾಮೇ ಗೌಡರನ್ನು ಮೊನ್ನೆ ಮೊನ್ನೆಯಷ್ಟೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಅವರು ಪ್ರಶಂಸಿಸಿದ್ದರು.. ಆ ಬಳಿಕ ಮಂಡ್ಯದ ಕಾಮೇಗೌಡರ ಬಗ್ಗೆ ಇಂಡಿಯಾಗೆ ತಿಳಿಯುವಂತಾಗಿತ್ತು.. ಸಾಲು ಸಾಲು ಸುದ್ದಿಗಳು ಸಂದರ್ಶನಗಳು ಅವರ ಕುರಿತು ಪ್ರಸಾರವಾದವು..

ಇದೀಗ ಕಾಮೇಗೌಡರ ಆರೋಗ್ಯದಲ್ಲಿ ಏರು ಪೇರು ಕಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.. ಹೌದು ಕೆರೆ ಕಾಮೇಗೌಡರ ಕಾಲಿಗೆ ತೀವ್ರವಾದ ಗಾಯವಾಗಿದ್ದು.. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಮೇಗೌಡರ ಎರಡು ಕಾಲುಗಳಲ್ಲಿ ತೀವ್ರವಾಗಿ ಊತಕಾಣಿಸಿಕೊಂಡಿದ್ದು ಗುರುವಾರ ಸಂಜೆ ಕಾಮೇಗೌಡರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಈ ಬಗ್ಗೆ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕಾಮೇಗೌಡರ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ..

ಕಾಮೇ ಗೌಡರು ಈ ಹಿಂದಿನಿಂದಲೂ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಇದೀಗ ಕಾಲಿನ ಊತ ಹೆಚ್ಚಾಗಿದೆ.. ಆದಷ್ಟು ಬೇಗ ಕಾಮೇಗೌಡರು ಗುಣಮುಖರಾಗಿ ಮನೆಗೆ ಮರಳುವಂತಾಗಲಿ.. ಸಾವಿರಾರು ಪ್ರಾಣಿ ಪಕ್ಷಿಗಳ ನೀರಿಗೆ ದಾರಿಯಾದ ಈ ಜಲಸಂತ ನೂರಾರು ವರ್ಷ ಆರೋಗ್ಯಯುತವಾಗಿ ಬಾಳಲಿ..

ಕಾಮೇಗೌಡರು ಒಬ್ಬ ಕುರಿಗಾಹಿ.. ಕುರಿ ಸಾಕುವುದು ಅವರ ಕಾಯಕ ವಾಗಿತ್ತು.. ಸುಮಾರು 13 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದರು. ಆ ಸಮಯದಲ್ಲಿ ಕಾಮೇಗೌಡರಿಗೆ ವಿಪರೀತ ದಾಹವಾಗಿ ನೀರಿಗಾಗಿ ಪರದಾಡಿದ್ದರು.. ಆದರೆ ಅಲ್ಲೆಲ್ಲೂ ನೀರು ಸಿಗಲಿಲ್ಲ.. ಆನಂತರ ಸ್ವಲ್ಪ ದೂರ ನಡೆದು ಹೋಗಿ ಹತ್ತಿರದ ಮನೆಗೆ ಹೋಗಿ ನೀರು ಕೇಳಿ ಕುಡಿದರು.. ಆಗಲೇ ಆಲೋಚನೆಯೊಂದು ಬಂತು.. ನಾನೇನೋ ದಾಹ ತೀರಿಸಿಕೊಂಡೆ.. ಆದರೆ ಪ್ರಾಣಿ ಪಕ್ಷಿಗಳ ಪರಿಸ್ಥಿತಿ ಏನು ಎಂದು ಚಿಂತೆ ಅವರಿಗೆ ಕಾಡಿತ್ತು. ತಕ್ಷಣ ಅದೇ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು. ಕಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನ ಕಂಡು ಅನೇಕರು ಗೇಲಿಯನ್ನು ಸಹ ಮಾಡಿದ್ದರು.

ಇವನಿಗೇನೋ ಹುಚ್ಚು ಹಿಡಿದಿದೆ ಎಂದೆಲ್ಲಾ ಟೀಕಿಸಿದರು. ಆದರೆ ಕಾಮೇಗೌಡರು ಮಾತ್ರ ತಮ್ಮ ಹಟ ಬಿಡಲಿಲ್ಲ.. ಪರರ ಮಾತಿಗೆ ತಲೆ ಕೆಡಿಸಿಕೊಳ್ಳದೆ ಕೆರೆ ತೋಡುವ ಕೆಲಸವನ್ನು ಮುಂದುವರಿಸಿದರು.. ಅವರ ಪರಿಶ್ರಮದಿಂದ 16 ಕೆರೆಗಳು ನಿರ್ಮಾಣಗೊಂಡವು.. ಇದೀಗ ದೇಶದ ಪ್ರಧಾನಿಗಳು ಸಹ ಇವರ ಕೆಲಸವನ್ನು ಗುರುತಿಸಿ ಮೆಚ್ಚುಗೆ ಸಲ್ಲಿಸಿದರು.. ಪ್ರಕೃತಿಗೆ ಇಂತಹ ದೊಡ್ಡ ಕೊಡುಗೆ ಕೊಟ್ಟ ಕಾಮೇಗೌಡರು ಆದಷ್ಟು ಬೇಗ ಗುಣಮುಖರಾಗಲೆಂಬುದೇ ನಾಡಿನ ಜನರ ಹಾರೈಕೆ..