ವಾಟಾಳ್ ನಾಗರಾಜ್ ಅವರ ಪತ್ನಿ ಇನ್ನಿಲ್ಲ.. ಏನಾಗಿತ್ತು ಗೊತ್ತಾ?

ಅದ್ಯಾಕೋ 2020 ಬರಿ ಸಾ’ವಿನ ಸುದ್ದಿಗಳನ್ನೇ ನೋಡುವಂತಾಗಿ ಹೋಗಿದೆ.. ಕೊರೊನಾ ದಿಂದಾಗಿ ನೂರಾರು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ..‌ ಇದೀಗ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಪತ್ನಿ ಅವರು ಸಹ ಇಂದು ಕೊನೆಯುಸಿರೆಳೆದಿದ್ದಾರೆ.‌. ಹೌದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಪತ್ನಿ ಜ್ಞಾನಾಂಭಿಕಾ ಅವರು ಇಂದು ವಿಧಿವಶರಾಗಿದ್ದಾರೆ..

ಜ್ಞಾನಾಂಬಿಕಾ ಅವರಿಗೆ 60 ವರ್ಷ ವಯಸ್ಸಾಗಿತ್ತು.. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.. ಅವರನ್ನು ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತಿತ್ತು‌‌.. ಆದರೆ ಇಂದು ರಾತ್ರಿ 8 ಗಂಟೆಗೆ ಮಲ್ಲಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ..

ಕಳೆದ ಹದಿನೈದು ದಿನಗಳ ಹಿಂದೆ ಜ್ಞಾನಾಂಬಿಕಾ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಅಂದಿನಿಂದಲೂ ಚಿಕಿತ್ಸೆ ನಡೆಯುತಿತ್ತು… ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ..

ಜ್ಞಾನಾಂಬಿಕಾ ಅವರ್ ಪಾರ್ಥಿವ ಶರೀರವನ್ನು ಡಾಲರ್ಸ್ ಕಾಲೋನಿಯಲ್ಲಿರುವ ವಾಟಾಳ್ ನಾಗರಾಜ್ ಅವರ ಮನೆಗೆ ತರಲಾಗಿದ್ದು, ಅಂತಿಮ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ನಾಳೆ ಅಂತಿಮ ಕಾರ್ಯ ನೆರವೇರಲಿದೆ ಎಂದು ತಿಳಿದುಬಂದಿದೆ..