ರಶ್ಮಿಕಾ ನಂತರ ಇದೀಗ ತೆಲುಗಿನಲ್ಲಿ ಮತ್ತೊಬ್ಬ ಕನ್ನಡ ನಟಿಯ ಭರ್ಜರಿ ಎಂಟ್ರಿ..

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಕನ್ನಡದ ಹೀರೋಯಿನ್ ಗಳ ದರ್ಬಾರ್ ಎನ್ನುವಂತಾಗಿದೆ.. ಆಲ್ ಟೈಮ್ ಫೇವರಿಟ್ ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿದರೂ ಸಹ ಅಚ್ಚ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ.. ಇನ್ನು ಒಂದು ಕಾಲದ ಸ್ಟೇಟ್ ಕ್ರಶ್ ಎನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಕೂಡ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೀಗ ಅಲ್ಲು ಅರ್ಜುನ್ ಜೊತೆಗೆ ಪುಷ್ಪಾ ಸಿನಿಮಾಗೆ ಸಹಿ ಮಾಡಿದ್ದು ಕೊರೊನಾ ಕಗ್ಗಂಟಿನ ನಂತರ ಸಿನಿಮಾ ಶೂಟಿಂಗ್ ಶುರುವಾಗಲಿದೆ..

ಇನ್ನು ತೆಲುಗಿನಲ್ಲಿ ಮಿಂಚುತ್ತಿರುವ ಮತ್ತೊಬ್ಬ ಸ್ಟಾರ್ ಹೀರೋಯಿನ್ ಪೂಜಾ ಹೆಗ್ಡೆ ಅವರೂ ಸಹ ಮೂಲತಃ ಮಂಗಳೂರಿನವರೇ ಆಗಿದ್ದು, ತೆಲುಗಿನ ಸಿನಿಮಾಗಳಲ್ಲಿ ಬಹುಪಾಲು ಕನ್ನಡತಿಯರೇ ಕಾಣಿಸಿಕೊಳ್ಳುತ್ತಿದ್ದು, ಇದೀಗ ಈ ಸಾಲಿಗೆ ಮತ್ತೊಬ್ಬ ಕನ್ನಡದ ಹೀರೋಯಿನ್ ಸೇರ್ಪಡೆಗೊಂಡಿದ್ದಾರೆ..

ಹೌದು ರಶ್ಮಿಕಾ ಬಳಿಕ ಇದೀಗ ಕನ್ನಡದ ಮತ್ತೊಬ್ಬ ಹೀರೋಯಿನ್ ತೆಲುಗಿನ ಸ್ಟಾರ್ ನಟನ ಜೊತೆ ಅಭಿನಯಿಸುತ್ತಿದ್ದು ಸ್ಟಾರ್ ಹೀರೋಯಿನ್ ಪಟ್ಟ ಗಳಿಸುವಲ್ಲಿ ಹೆಜ್ಜೆ ಇಟ್ಟಿದ್ದಾರೆ.. ಹೌದು ಆ ನಟಿ‌ ಮತ್ಯಾರೂ ಅಲ್ಲ.. ಶಿವಣ್ಣನ ಜೊತೆ ವಜ್ರಕಾಯ ಸಿನಿಮಾದಲ್ಲಿ‌ ಅಭಿನಯಿಸಿದ್ದ ನಭಾ ನಟೇಶ್.. ಹೌದು ಸದ್ಯ ಜೂನಿಯರ್ ಎನ್ ಟಿ ಆರ್ ಸಿನಿಮಾದಲ್ಲಿ ನಭಾ ನಟೇಶ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ..

ವಜ್ರಕಾಯ ಸಿನಿಮಾದಲ್ಲಿ ಪಟಾಕ ಪಾರ್ವತಿಯಾಗಿ ಜನರ ಮಮಗೆದ್ದರೂ ಸಹ ಕನ್ನಡದಲ್ಲಿ ಹೇಳಿಕೊಳ್ಳುವ ಅವಕಾಶ ಸಿಗಲಿಲ್ಲ.. ಆ ಬಳಿಕ ತೆಲುಗಿಗೆ ಕಾಲಿಟ್ಟ ನಭಾ ನಟೇಶ್ ಈಗಾಗಲೇ ನನ್ನು ದೋಚುಕೊಂಡುವತೆ, ಅಧುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜ ಸಿನಿಮಾದಲ್ಲಿ‌ ನಟಿಸಿದ್ದು ಸೈ ಎನಿಸಿಕೊಂಡಿದ್ದಾರೆ..

ಅಷ್ಟೇ ಅಲ್ಲದೇ ಸೋಲೋ ಬದುಕೇ ಸೋ ಬೆಟರ್ ಹಾಗೂ ಅಲ್ಲುಡು ಅದರ್ಸ್ ಸಿನಿಮಾಗೂ ಸಹಿ ಮಾಡಿದ್ದು ಚಿತ್ರೀಕರಣ ನಡೆಯುತ್ತಿದೆ.. ಇದೆಲ್ಲದರ ಜೊತೆಗೆ ಇದೀಗ ಜೂನಿಯರ್ ಎನ್ ಟಿ ಆರ್ ನ 30 ನೇ ಸಿನಿಮಾದಲ್ಲಿ‌ನಭಾ ನಟೇಶ್ ಅಭಿನಯಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ರಶ್ಮಿಕಾ ನಂತರ ನಭಾ ನಟೇಶ್ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಎನಿಸಿಕೊಳ್ಳೋದು ಬಹುತೇಕ ಖಚಿತವಾಗಿದೆ..