ಮೈಸೂರು ಫುಟ್ ಪಾತ್ ನಲ್ಲಿ ಹಸುಗೂಸು ಪತ್ತೆ ಪ್ರಕರಣಕ್ಕೆ ಸ್ಪೋಟಕ ತಿರುವು..‌ ಆ ಮಗು ಯಾರದ್ದು ಗೊತ್ತಾ?

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ ಸಂಜೆ ಅಮಾನವೀಯ ಘಟನೆಯೊಂದು ನಡೆದಿತ್ತು. 8 ತಿಂಗಳ ಪುಟ್ಟ ಕಂದನನ್ನು ಹೆತ್ತ ತಾಯಿಯೇ ಫುಟ್ ಪಾತ್ ಒಂದರಲ್ಲಿ ಬಿಟ್ಟು ಹೋಗಿದ್ದರು..

ಆದರೆ ಈಗ ಆ ಪ್ರಕರಣಕ್ಕೆ ತಿರುವು ಸಿಕ್ಕಿದೆ.. ಹೌದು ನಿನ್ನೆ ಸಂಜೆ 6 ರ ಆಸುಪಾಸಿನ ಸಮಯದಲ್ಲಿ ಮಹಿಳೆ ಒಬ್ಬರು‌ ಮೈಸೂರಿನ ವಿದ್ಯಾರಣ್ಯಪುರಂ ನ ಸ್ಯುಯೇಜ್ ಫಾರಂ ಬಳಿಯ ಫುಟ್ ಪಾತಿನಲ್ಲಿ ತಾನೇ ಹೆತ್ತಿದ್ದ ಪುಟ್ಟ ಕಂದ 8 ತಿಂಗಳ ಹೆಣ್ಣು ಮಗುವನ್ನಿ ಬಿಟ್ಟು ಹೋಗಿದ್ದಳು.. ಆ ಮಗು ಅಲ್ಲಿಂದ ಜಾರಿ ಚರಂಡಿ ನೀರು ಹರಿಯುವ ಜಾಗದಲ್ಲಿ ಬಿದ್ದು ಹೋಗಿತ್ತು..

ಕೆಲ ಸಮಯದ ಬಳಿಕ ಫುಟ್ ಪಾತ್ ಬಳಿ ಮಗು ಅಳುತ್ತಿರುವುದನ್ನು ಗಮನಿಸಿದ ಸ್ಥಳಿಯರು, ಆ ಮಗುವನ್ನು ಎತ್ತಿಕೊಂಡು ಆ ಕಂದನಿಗೆ ಸ್ನಾನ ಮಾಡಿಸಿ ಬೇರೆ ಬಟ್ಟೆ ತೊಡಿಸಿ ಹಾಕು ಕುಡಿಸಿ ನಂತರ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಆ ಮಗುವನ್ನು ರಕ್ಷಿಸಿ ಅದನ್ನು ಚೆಲುವಾಂಬ ಆಸ್ಪತ್ರೆಯ ಸಖಿ ಕೇಂದ್ರದಲ್ಲಿ ದಾಖಲಿಸಿದ್ದಾರೆ..

ಆ ಮಗುವಿಗೆ ಅಲ್ಲಿಯೇ ಪಾಲನೆ ಪೋಷಣೆ ನಡೆದಿತ್ತು.. ಆದರೆ ಇಂದು ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ಚೆಲುವಾಂಬ ಆಸ್ಪತ್ರೆಗೆ ಒಂದು ದಂಪತಿ ಭೇಟಿ ನೀಡಿ ಆ ಮಗು ನಮ್ಮದು ಕೊಡಿ ಎಂದಿದ್ದಾರೆ..‌ ಹೌದು ಆ ಮಗುವನ್ನು ಬಿಟ್ಟು ಹೋದ ತಾಯಿಯೇ ನತ್ತೆ ಆಸ್ಪತ್ರೆಗೆ ಬಂದು ಮಗು ನೀಡುವಂತೆ ಕೇಳಿಕೊಂಡಿದ್ದಾರೆ.. ಅಸಲಿಗೆ ಆ ಹೆಂಗಸು ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗಿದ್ದು, ತನಗೆ ತಿಳಿಯದೆ ಮಗುವನ್ನು ಅಲ್ಲಿ ಬಿಟ್ಟಿದ್ದೆ ಎಂದಿದ್ದಾಳೆ.. ಆಕೆಯ ಪತಿ ಹಾಗೂ ಮಾವನ ಸಮೇತ ಆಸ್ಪತ್ರೆಗೆ ಬಂದು ಮಗುವನ್ನು ಕೇಳಿದ್ದಾರೆ..

ಆನಂತರ ದಾಖಲೆಗಳನ್ನು ಪರಿಶೀಲಿಸಿ ಮಗುವನ್ನು ಕೊಟ್ಟು ಕಳುಹಿಸಿದ್ದಾರೆ.. ಹೆಂಡತಿ ಮಾನಸಿಕ ಅಸ್ವಸ್ಥೆ ಎಂದು ತಿಳಿದಿದ್ದರೂ ಅವರ ಬಳಿ‌ ಮಗು ಕೊಟ್ಟು ಕಳುಹಿಸಿದ್ದೀರಾ ಎಂದು ಆಕೆಯ ಪತಿಯನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಆಸ್ಪತ್ರೆಯ ಆವರಣದಲ್ಲಿ ನಡೆಯಿತು..

Tags: