ಮೈಸೂರು ಪ್ರಕರಣ.. ಪೋಲೀಸರು ಮಗನನ್ನು ಕರೆತರುತ್ತಿದ್ದಂತೆ ಆತನ ತಾಯಿ ಮಾಡಿದ್ದೇನು ಗೊತ್ತಾ..

ಮೈಸೂರಿನಲ್ಲಿ ಕಳೆದ ಐದು ದಿನಗಳ ಹಿಂದೆ ನಡೆದ ಎರಡೂ ಪ್ರಕರಣಗಳು ರಾಜ್ಯದ ಜನತೆಯಲ್ಲಿ ಆತಂಕವನ್ನುಂಟು ಮಾಡಿತ್ತು. ಅಷ್ಟೇ ಅಲ್ಲದೇ ಇದು ಪೊಲೀಸರಿಗೆ ಸವಾಲಿನ ವಿಚಾರವೂ ಆಗಿತ್ತು. ಸಾಂಸ್ಕೃತಿಕ ನಗರಿ ಎಂದು ಹೆಸರು ಮಾಡಿರುವ ಮೈಸೂರಿನಲ್ಲಿ ಇಂತಹ ಘಟನೆಗಳು ನಡೆದದ್ದು ನಿಜಕ್ಕೂ ಜನರ ಅಸಮಾಧಾನಕ್ಕೆ ಕಾರಣವಾಯಿತು. ಇಷ್ಟು ದಿನ ಬೇರೆ ಯಾವುದೋ ರಾಜ್ಯದಲ್ಲಿ‌ ಇಂತಹ ಘಟನೆ ನಡೆಯಿತೆಂದು ಸುದ್ದಿ ನೋಡುತ್ತಿದ್ದ ನಮಗೆ ನಮ್ಮದೇ ಮೈಸೂರಿನಲ್ಲಿ ಇಂತಹ ಘಟನೆ ನಡೆದದ್ದು ನಿಜಕ್ಕೂ ಶಾಕ್‌ ಆಗಿತ್ತು.

ಜೊತೆಗೆ ಮೈಸೂರಿನಲ್ಲಿ ಅನೇಕ ಕಡೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೀದಿಗೆ ಬಂದು ಈ ಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಇದೆಲ್ಲದರ ನಡುವೆ ಇಷ್ಟು ದಿನ ತೆರೆ ಮರೆಯಲ್ಲಿದ್ದ ಅನೇಕ‌ರು ಹೊರ ಬಂದು ಪೊಲೀಸರ ಬಗ್ಗೆ ಮಾತನಾಡಿದ್ದೂ ಉಂಟು. ಇಷ್ಟೆಲ್ಲಾ ಒತ್ತಡವಿದ್ದರೂ ಸಹ ಯಾವುದನ್ನೂ ಲೆಕ್ಕಿಸದೇ ಮೈಸೂರಿನ ಪೊಲೀಸರು ತಮ್ಮ ಪಾಡಿಗೆ ತಾವುಗಳು ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು. ಆಭರಣದ ಅಂಗಡಿ ಘಟನೆಗೆ ಐದು ತಂಡ ಯುವತಿ‌ ಪ್ರಕರಣಕ್ಕೆ ಏಳು ತಂಡವನ್ನು ರಚಿಸಿಕೊಂಡು ಕಾರ್ಯಾಚರಣೆ ಶುರು ಮಾಡಿದ್ದರು. ಆಭರಣ ಅಂಗಡಿ ಘಟನೆಗೆ ಸಿಸಿಟಿವಿ ಸಾಕ್ಷಿ ಇದ್ದ ಕಾರಣ ಅವರನ್ನು ಮೂರು ದಿನದ ಹಿಂದೆಯೇ ಎಲ್ಲರನ್ನೂ ಸಹ ಹಿಡಿದಿದ್ದರು.

ಇನ್ನು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ‌ ನಡೆದ ಘಟನೆಗೆ ಯಾವುದೇ ಸಾಕ್ಷಿ ಇಲ್ಲದ ಕಾರಣ ಸಿಕ್ಕ ಆ ಒಂದು ಸಣ್ಣ ಟಿಕೆಟ್ ಒಂದನ್ನು ಇಟ್ಟುಕೊಂಡು ಯಶಸ್ವಿಯಾಗಿ ಕಾರ್ಯಾಚರಣೆ ಮುಗಿಸಿ ಘಟನೆಗೆ ಕಾರಣರಾದ ಎಲ್ಲರನ್ನೂ ತಮಿಳುನಾಡಿನಿಂದ ಎಡೆ ಮುರಿ ಕಟ್ಟಿ ತಂದರು. ಇನ್ನು ಈ ಘಟನೆಗೆ ಪ್ರಮುಖ ಕಾರಣ ಭೂಪತಿ ಎಂಬುವವ ಇವನನ್ನು ಹಿಡಿದಿದ್ದೇ ಒಂದು ರೋಚಕ ಸ್ಟೋರಿ. ಹೌದು ತಮಿಳುನಾಡಿನ ತಿರುಪುರ್ ನಲ್ಲಿರುವ ಈತನ ಮನೆ ತಿಳಿದ ಬಳಿಕ ಇಬ್ಬರು ಪೊಲೀಸರು ಈತನ ಮನೆಯ ಪಕ್ಕದ ಮನೆ ಮುಂದೆ ಸಾಮಾನ್ಯ ಬಟ್ಟೆಯಲ್ಲಿ ನಿಂತಿದ್ದಾರೆ.

ಇನ್ನಿಬ್ಬರು ರಸ್ತೆಯ ಕೊನೆಯಲ್ಲಿ ನಿಂತಿದ್ದಾರೆ. ಮತ್ತಿಬ್ಬರು ಸೀದಾ ಭೂಪತಿಯ ಮನೆ ಒಳಗೆ ತೆರಳಿ ಭೂಪತಿಯನ್ನು ಹಿಡಿದು ಹೊರಗೆ ತಂದಿದ್ದಾರೆ.. ತಕ್ಷಣ ಆತನ ತಾಯಿ ಕಣ್ಣೀರಿಟ್ಟು ಕೂಗಿದ್ದಾರೆ. ಆನಂತರ ತಾವು ಪೊಲೀಸರು ಎಂಬ ವಿಚಾರವನ್ನು ಆಕೆಗೆ ತಿಳಿಸಲಾಗಿ ಆಕೆಯ ತಾಯಿ ಕೂಗುವುದನ್ನು ನಿಲ್ಲಿಸಿದ್ದಾರೆ. ಆದರೆ ಅತ್ತ ಭೂಪತಿಯನ್ನು ಮನೆಯಿಂದ ಕರೆತರುವ ಮುನ್ನ ಅವನ ತಾಯಿಗೆ ಎಲ್ಲಾ ವಿಚಾರವನ್ನು ತಿಳಿಸಿ ನಿಮ್ಮ ಮಗ ಈ ರೀತಿ ಕೆಲಸ ಮಾಡಿದ್ದಾನೆ ಎಂದು ಅರ್ಥ ಮಾಡಿಸಿದ ನಂತರವೇ ಅವನನ್ನು ಅಲ್ಲಿಂದ ಕರೆ ತಂದಿದ್ದಾರೆ. ಆದರೆ ಅವನ ತಾಯಿ ಮಾತ್ರ ನನ್ನ ಮಗ ಈ ರೀತಿ ಮಾಡಿದ್ದಾನೆ ಅಂತ ಹೇಳ್ತಿದ್ದಾರೆ.

ಅವನು ಅಂತ ಕೆಲಸ ಮಾಡೋನಲ್ಲ. ಕೂಲಿ ಮಾಡಿ ನನ್ನನ್ನು ಸಾಕುತ್ತಿದ್ದ. ಇದ್ದಕಿದ್ದ ಹಾಗೆ ಬಂದು ಮಗನನ್ನು ಕರೆದುಕೊಂಡು ಹೊರಟುಹೋದ್ರು ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ವಯಸ್ಸಾದ ಆ ತಾಯಿಯನ್ನು ದುಡಿದು ನೋಡಿಕೊಳ್ಳಬೇಕಾದ ಮಗ ಈ ರೀತಿ ಕೆಲಸ ಮಾಡಿ ಆಕೆಗೆ ನೋವು ಕೊಟ್ಟು ಆತ ತನ್ನ ಜೀವನದಲ್ಲಿ ಸಾಧಿಸಿದ್ದಾದರು ಏನು. ಇನ್ನು ಆತನ ಜೀವನ ಇಷ್ಟೇ ಅದು ಸುಳ್ಳಲ್ಲ. ದಯವಿಟ್ಟು ಯಾರೇ ಆಗಲಿ ಯಾವುದೇ ಕೆಲಸ ಮಾಡುವ ಮುನ್ನ ಆಲೋಚಿಸಿ ನಿಮ್ಮನ್ನು ನಂಬಿಕೊಂಡು ಒಂದು ಕುಟುಂಬ ಇರುತ್ತದೆ. ಇರೋದೊಂದು ಜೀವನ ಹೆತ್ತವರಿಗೆ ನೋವು ಕೊಟ್ಟು ಪಡೆಯೋದೇನಿದೆ. ಆ ಜೀವನಕ್ಕೆ ಏನು ಅರ್ಥವಿದೆ. ಇನ್ನಾದರು ಇಂತಹ ಮನಸ್ಥಿತಿಗಳು ಬದಲಾಗಬೇಕಿದೆ..