ಮತ ಎಣಿಕೆ ಮುಕ್ತಾಯ.. ಕುಸುಮಾ ಅವರಿಗೆ ಸಿಕ್ಕ ವೋಟ್ ಎಷ್ಟು ಗೊತ್ತಾ?

ರಾಜ್ಯದ ಹೈವೋಲ್ಟೇಜ್ ಕಣ ರಾಜರಾಜೇಶ್ವರಿ‌ ನಗರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗಿನಿಂದಲೇ ಶುರುವಾಗಿದ್ದು ಅದಾಗಲೇ ನಾಲ್ಕು ಹಂತಗಳ ಮತ ಎಣಿಕೆ ಕಾರ್ಯ ಮುಕ್ತಾಯ ಗೊಂಡಿದೆ..

ಎಲ್ಲರಿಗೂ ತಿಳಿದಿರುವಂತೆ ರಾಜರಾಜೇಶ್ವರಿ‌ ನಗರದಲ್ಲಿ ಕಾಂಗ್ರೆಸ್ ನ ಕುಸುಮಾ ಹಾಗೂ ಬಿಜೆಪಿ ಅಭ್ಯಯ್ ಮುನಿರತ್ನ ಅವರಿಗೆ ನೇರ ಹಣಾಹಣಿ ಇದ್ದು ಸದ್ಯ ಜಿದ್ದಾಜಿದ್ದಿನ ಕಣದಲ್ಲಿ ಮುನಿರತ್ನ ಅವರು ಭರ್ಜರಿಯಾಗಿಯೇ ಮುನ್ನಡೆ ಪಡೆದುಕೊಂಡಿದ್ದಾರೆ..

ಅತ್ತ ಕಾಂಗ್ರೆಸ್ ನ ಕುಸುಮಾ ಅವರು ಆರ್ ಆರ್ ನಗರದಲ್ಲಿ ತಾವು ಗೆಲ್ಲುವ ಸಂಪೂರ್ಣ ವಿಶ್ವಾಸ ಹೊಂದಿದ್ದರು.. ಆದರೆ ಇಲ್ಲಿ ಚಿತ್ರಣವೇ ಬದಲಾಗುತ್ತಿದೆ.. ಬೆಳಿಗ್ಗೆಯಿಂದ ನಡೆದ ನಾಲ್ಕು ಹಂತದ ಮತ ಎಣಿಕೆಯಲ್ಲಿಯೂ ಮುನಿರತ್ನ ಅವರೇ ಮುನ್ನಡೆ ಕಾಯ್ದುಕೊಂಡಿದ್ದಾರೆ..

ಅದರಲ್ಲೂ ಮುನಿರತ್ನ ಅವರು ನಾಲ್ಕನೇ ಹಂತದ ಮತ ಎಣಿಕೆ ವೇಳೆಗೆ ಕುಸುಮಾ ಅವರಿಗಿಂತ ಒಂಭತ್ತು ಸಾವಿರ ಮತಗಳ ಮುನ್ನಡೆಯಲ್ಲಿದ್ದಾರೆ.. ಕುಸುಮಾ ಅವರಿಗೆ ಒಟ್ಟು 11,125 ಮತಗಳು ಬಂದಿದ್ದರೆ ಅತ್ತ ಮುನಿರತ್ನ ಅವರಿಗೆ 20128 ಮತಗಳು ಬಂದಿವೆ.. ಜೆಡಿಎಸ್ ನ ಕೃಷ್ಣ ಮೂರ್ತಿ ಅವರಿಗೆ 4350 ಮತಗಳು ಬಂದಿವೆ.. ಇನ್ನು ಎರಡು ಗಂಟೆಗಳಲ್ಲಿ ಸಂಪೂರ್ಣ ಮತ ಎಣಿಕೆ‌ಕಾರ್ಯ ಮುಕ್ತಾಯಗೊಳ್ಳಲಿದ್ದು ರಾಜರಾಜೇಶ್ವರಿ ನಗರದಲ್ಲಿ ವಿಜಯ ಮಾಲೆ ಯಾರಿಗೆ ಎಂಬುದು ತಿಳಿಯಲಿದೆ..