ಬ್ರೇಕಿಂಗ್ ನ್ಯೂಸ್..‌ ಒಂದೇ ದಿನದಲ್ಲಿ ಕೊರೊನಾ ಸಂಖ್ಯೆ ಎಷ್ಟಾಗಿದೆ ನೋಡಿ..

ಭಾರತದಲ್ಲಿ ಕೊರೊನಾ ಮೊದಮೊದಲು ಮಂದಗತಿಯಲ್ಲಿ ಹರಡಿದರೂ ಇದೀಗ ಲಾಕ್ ಡೌನ್ ಸಡಿಲಿಕೆಯಾದ ನಂತರ ಒಮ್ಮೆಲೆ ದೊಡ್ಡ ದೊಡ್ಡ ಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.. ಹೌದು ಒಂದೇ ದಿನ ಬರೋಬ್ಬರಿ 6,088 ಮಂದಿ ಸೋಂಕಿತರು ಪತ್ತೆಯಾಗಿದ್ದು, ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ 18 ಸಾವಿರದ ಗಡಿ ದಾಟಿದೆ.. ಅದರಲ್ಲೂ ಕಳೆದ 24 ಗಂಟೆಯಲ್ಲಿಯೇ 148 ಮಂದಿ ಸಾವನ್ನಪ್ಪಿರುವುದು ಆತಂಕಕ್ಕೀಡು ಮಾಡಿದೆ…

ಇದುವರೆಗೂ ಒಟ್ಟು ಭಾರತದಲ್ಲಿ 3,583 ಮಂದಿ ಕೊರೊನಾದಿಂದಾಗಿ ಜೀವ ಕಳೆದುಕೊಂಡಿದ್ದಾರೆ.. ಅಲ್ಪ ಸಮಾಧಾನದ ವಿಷಯ ಏನೆಂದರೆ ಇದುವರೆಗೂ 48,533 ಸೋಂಕಿತರು ಕೊರೊನಾಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.. 66,330 ಸೋಂಕಿತರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ..

ಇನ್ನು ನಮ್ಮ ರಾಜ್ಯ ಕರ್ನಾಟಕದಲ್ಲಿ ಇದುವರೆಗೆ 1,605 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 41 ಮಂದಿ ಜೀವ ಕಳೆದುಕೊಂಡಿದ್ದಾರೆ…ಅದರಲ್ಲಿ 571 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ… ನಿನ್ನೆ ಒಂದು ದಿನದಲ್ಲಿ 143 ಪಾಸಿಟಿವ್ ಪತ್ತೆಯಾಗಿದೆ… ಇನ್ನು ಮೊದಲು ಗ್ರೀನ್ ಜೋನ್ ನಲ್ಲಿದ್ದ ಮಂಡ್ಯದಲ್ಲಿ ಇದೀಗ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದ್ದು 201 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ..ಇನ್ನು ಮೊನ್ನೆ ಮೊನ್ನೆಯಷ್ಟೇ 90 ಕೇಸ್ ಗಳನ್ನು ಗುಣಮುಖರನ್ನಾಗಿಸಿ ಮನೆಗೆ ಕಳುಹಿಸಿ ಕೊರೊನಾ ಮುಕ್ತವಾಗಿದ್ದ ಮೈಸೂರಿನಲ್ಲಿ ಮತ್ತೆ 2 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ..ಇನ್ನು ನಮ್ಮ ರಾಜ್ಯ ಕರ್ನಾಟಕದಲ್ಲಿ ಇದುವರೆಗೆ 1,605 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 41 ಮಂದಿ ಜೀವ ಕಳೆದುಕೊಂಡಿದ್ದಾರೆ…ಅದರಲ್ಲಿ 571 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ… ನಿನ್ನೆ ಒಂದು ದಿನದಲ್ಲಿ 143 ಪಾಸಿಟಿವ್ ಪತ್ತೆಯಾಗಿದೆ… ಇನ್ನು ಮೊದಲು ಗ್ರೀನ್ ಜೋನ್ ನಲ್ಲಿದ್ದ ಮಂಡ್ಯದಲ್ಲಿ ಇದೀಗ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದ್ದು 201 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ..

ಭಾರತದಲ್ಲಿ ಇದುವರೆಗೂ ಹೆಚ್ಚು ಸೋಂಕು ಹರಡಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿಯೇ ಇದೆ. ಗುರುವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 2 ಸಾವಿರಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣ ವರದಿಯಾಗಿದೆ. ಈವರೆಗೆ 41,642 ಮಂದಿ ಸೋಂಕಿಗೆ ತುತ್ತಾಗಿದ್ದು, 1,454 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 11,726 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.. ಮುಂಬೈ ಒಂದರಲ್ಲೇ 25 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ಅಲ್ಲಿಂದ ಹೊರಕ್ಕೆ ಬರುತ್ತಿರುವ ಜನರಲ್ಲಿ ಸೋಂಕು ಇರುವುದು ಆತಂಕ ಸೃಷ್ಟಿಸಿದೆ.. ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 13,967 ಮಂದಿಗೆ ಕೊರೊನಾ ತಗುಲಿದೆ… ಗುಜರಾತ್‍ನಲ್ಲಿ 12,910 ಮಂದಿ ಸೋಂಕಿಗೆ ತುತ್ತಾಗಿದ್ದು, 773 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 11,659 ಮಂದಿ ಕೊರೊನಾಗೆ ತುತ್ತಾಗಿದ್ದು, 194 ಮಂದಿ ಮೃತಪಟ್ಟಿದ್ದಾರೆ.

ಸುಮಾರು 5,567 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ. ರಾಜಸ್ಥಾನದಲ್ಲಿ 6,227 ಮಂದಿಗೆ ಸೋಂಕು ತಗುಲಿದ್ದು, 151 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 5,981 ಮಂದಿ ಸೋಂಕಿಗೆ ತುತ್ತಾಗಿದ್ದು, 271 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 5,515ಕ್ಕೆ ಏರಿಕೆಯಾಗಿದ್ದು, 138 ಮಂದಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದಲ್ಲಿ 2,605 ಮಂದಿಗೆ ಸೋಂಕು ತಗುಲಿದ್ದು, 54 ಮಂದಿ ಸಾವನ್ನಪ್ಪಿದ್ದಾರೆ. 1,705 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ತೆಲಂಗಾಣದಲ್ಲಿ 1,699 ಮಂದಿ ಕೊರೊನಾಗೆ ತುತ್ತಾಗಿದ್ದು, 45 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ಕೇರಳದಲ್ಲಿ 691 ಮಂದಿಯಲ್ಲಿ ಈವರೆಗೆ ಸೋಂಕು ಕಾಣಿಸಿಕೊಂಡಿದ್ದು, 4 ಸೋಂಕಿತರು ಮೃತಪಟ್ಟಿದ್ದಾರೆ. 510 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಮೊದಲು ಕೊರೊನಾ ಪತ್ತೆಯಾದ ಕೇರಳ ಇದೀಗ ಹಿಡಿತ ಸಾಧಿಸಿದ್ದು ಮಹರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಕಂಟ್ರೋಲ್ ಗೆ ಬಾರದಂತಾಗಿದೆ..