ಮಗನ ಪಾರ್ಥೀವದ ಮುಂದೆ ಎದ್ದೇಳು ಮಗನೇ ಎಂದು ಅಂಗಲಾಚುತ್ತಿರುವ ನಟ ಮೋಹನ್ ಅವರ ತಾಯಿ.. ಮೋಹನ್ ಅವರ ಜೀವನದ ಅಸಲಿ ಕತೆ ಕೇಳಿದರೆ ಕಣ್ಣೀರು ಬರುತ್ತದೆ..

ಕನ್ನಡದ ಖ್ಯಾತ ನಟ ಹಿರಿಯ ನಟ ಮೋಹನ್ ಜುನೇಜ ಅವರು ಇಹಲೋಕ ತ್ಯಜಿಸಿದ್ದು ನಿಜಕ್ಕೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.. ಒಂದು ಕಡೆ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಮಾಡಿ ಈಗ ಬದುಕು ಮುಗಿಸಿದ ನೋವು ಒಂದೆಡೆಯಾದರೆ ಮತ್ತೊಂದು ಕಡೆ ಮೋಹನ್ ಅವರ ನಿಜ ಜೀವನದ ಕತೆ ಕೇಳಿದರೆ ನಿಜಕ್ಕೂ ಕಣ್ಣೀರು ತರಿಸುತ್ತದೆ.. ಹೌದು ಅವರ ಸಿನಿಮಾ ಹಾದಿ ಆ ಮಟ್ಟದ ಕಷ್ಟದ ಹಾದಿಯಾಗಿತ್ತು..

ಸಿನಿಮಾಗಳು ಧಾರಾವಾಹಿಗಳು ಸೇರಿದಂತೆ ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೋಹನ್ ಅವರು ಅಭಿನಯಿಸಿದ್ದರು.. ಮೊನ್ನೆಮೊನ್ನೆಯಷ್ಟೇ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಮೋಹನ್ ಕಾಣಿಸಿಕೊಂಡಿದ್ದು ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ರಂಗಭೂಮಿಯಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು.. ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡುದ್ದ ಮೋಹನ್ ಜುನೇಜಾ ಅವರು ಈ ಚಿತ್ರರಂಗದಲ್ಲಿ ನಡೆದು ಬಂದ ಹಾದಿ ನಿಜಕ್ಕೂ ಸುಲಭದ ಹೂವಿನ ದಾರಿ ಆಗಿರಲಿಲ್ಲ.. ಸ್ಥಿತಿವಂತ ಕುಟುಂಬದಲ್ಲಿ ಬೆಳೆದು ಬಂದರೂ ಸಹ ಮೋಹನ್ ಮಾತ್ರ ಕಷ್ಟದ ಹಾದಿಯನ್ನೇ ಆಯ್ಕೆ ಮಾಡಿಕೊಂಡಿದ್ದರು..

ಹೌದು ಎಲ್ಲಾ ಅಪ್ಪ ಅಮ್ಮನಂತೆ ಮೋಹನ್ ಅವರ ತಂದೆ ತಾಯಿಯೂ ಸಹ ತಮ್ಮ ಮಗ ಇಂಜಿನಿಯರ್ ಆಗಬೇಕೆಂಬ ಕನಸು ಕಂಡಿದ್ದರು.. ಶಾಲಾ ದಿನಗಳಲ್ಲಿ ಒಳ್ಳೆಯ ಅಂಕಗಳನ್ನೇ ಪಡೆಯುತ್ತಿದ್ದರು ಮೋಹನ್ ಜುನೇಜಾ.. ಆದರೆ ಮೋಹನ್ ಜುನೇಜಾ ಅವರು‌ ಮಾತ್ರ ಬೇರೆಯದ್ದೇ ಕನಸು ಕಂಡಿದ್ದರು.. ಶಾಲಾ ಕಾಲೇಜುಗಳ ಹತ್ತಿರದಲ್ಲೇ ಇರುತ್ತಿದ್ದ ಚಿತ್ರಮಂದಿರಗಳಿಗೆ ಸಿನಿಮಾ ನೋಡಲು ಹೋಗುತ್ತಿದ್ದರು. ಮಗನು ತನ್ನ ಕನಸಿನಂತೆ ಇಂಜಿನಿಯರ್ ಆಗಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಅವರ ತಂದೆಯು ಹಣ ಕೊಡುವುದನ್ನೇ ನಿಲ್ಲಿಸಿದ್ದರಂತೆ.. ಹಾಗಾಗಿ ಅವರು ಹಣಕ್ಕಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಲು ಶುರು ಮಾಡಿದರು..

ಮೋಹನ್ ಹಣ ಸಂಪಾದನೆಗಾಗಿ ಕೆಲಸ ಹುಡುಕಿಕೊಂಡು ಗೋವಾಗೂ ಹೋಗಿದ್ದರು.. ಅಲ್ಲಿಯೂ ಕೆಲ ತಿಂಗಳ ಕಾಲ ಸೆಕ್ಯೂರಿಟಿ ಆಗಿಯೂ ಕೆಲಸ ಮಾಡಿದ್ದರು.. ಫೋಟೋಗ್ರಾಫರ್ ಹಾಗೂ ಟ್ರೈಲರ್ ಅಂಗಡಿಯಲ್ಲಿ ಗುಂಡಿ ಹೊಲಿಯುವುದಕ್ಕೂ ಹೋಗಿದ್ದುಂಟು.. ಹಾಗೇಯೇ ರಂಗಭೂಮಿಯತ್ತ ಆಸಕ್ತಿವಹಿಸಿ ಅದರತ್ತ ನಡೆದು ಹೋದರು.. ಬಿ.ಸುರೇಶ ಸೇರಿದಂತೆ ಹಲವು ನಿರ್ದೇಶಕರ ಬಳಿ ನಾಟಕಗಳನ್ನೂ ಮಾಡಿದ್ದಾರೆ..

ಮುಂದೆ ವಠಾರ ಧಾರಾವಾಹಿಯ ಮೂಲಕ ಸೀರಿಯಲ್ ಪ್ರಪಂಚಕ್ಕೂ ಕಾಲಿಟ್ಟರು. ವಠಾರ ಧಾರಾವಾಹಿ ಅವರಿಗೆ ಹೆಸರು ತಂದುಕೊಟ್ಟಿತ್ತು. ಅಲ್ಲಿಂದ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಸಾವಿರಾರು ಕಂತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ನಟಿಸುತ್ತಲೇ ಸಿನಿಮಾ ರಂಗದತ್ತಲೂ ಮುಖ ಮಾಡಿದರು. ವಾಲ್ ಪೋಸ್ಟರ್ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಅವರು ಗಣೇಶ್ ನಟನೆಯ ಚೆಲ್ಲಾಟ ಚಿತ್ರದಿಂದ ಫೇಮಸ್ ಆದರು. ಜೋಗಿ, ಕಬ್ಜ, ಜೇಮ್ಸ್ ಹೀಗೆ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಕೆಜಿಎಫ್ ಚಿತ್ರದಲ್ಲೂ ಅವರು ಒಳ್ಳೆಯ ಪಾತ್ರ ಮಾಡಿದ್ದು ಮಾನ್ಸ್ಟಾರ್ ಡೈಲಾಗ್ ಮೂಲಕ ಮತ್ತಷ್ಟು ಫೇಮಸ್ ಕೂಡ ಆದರು..

ಆದರೆ ಲಿವರ್ ಸಮಸ್ಯೆ ಇಂದ ಬಳಲುತ್ತಿದ್ದ ಮೋಹನ್ ಇಷ್ಟು ಬೇಗ ಬದುಕಿನ ಪಯಣ‌ ಮುಗಿಸಿ ಹೊರಟು ಬಿಟ್ಟರು.. ಮೋಹನ್ ಅವರು ತಾಯಿ ಹೆಂಡತಿ ಹಾಗೂ ಇಬ್ಬರು ಮಕ್ಕಳ ಜೊತೆ ಬೆಂಗಳೂರಿನಲ್ಲಿ ವಾಸವಿದ್ದರು.. ಇದೀಗ ಮಗನ ಪಾರ್ಥೀವದ ಮುಂದೆ ನಿಂತು ಆ ತಾಯಿ “ಮಗನೇ ಮಗನೇ ಎದ್ದೇಳು ಎಂದು ಗೋಳಿಡುತ್ತಿದ್ದದ್ದು ನಿಜಕ್ಕೂ ಕಣ್ಣೀರು ತರಿಸುವಂತಿತ್ತು. ಆ ಕುಟುಂಬಕ್ಕೆ ಈ ನೋವ ತಡೆಯುವ ಧೈರ್ಯ ನೀಡಲಿ ಆ ಭಗವಂತ..