ದೀಪ ಹಚ್ಚುವಾಗ ಪ್ರತಿಯೊಬ್ಬರು ಇದನ್ನು ಪಾಲಿಸಿ…

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹೇಗಾದರೂ, ಮಾಡಿ ಚೀನಾದ ಒಂದು ಮಹಾ ರೋಗವನ್ನು ಶತಾಯಗತಾಯ ಹೊಡೆದೋಡಿಸಬೇಕು ಎನ್ನುವ ಉದ್ದೇಶದಿಂದ ನಾನಾ ಪ್ರಯತ್ನಗಳನ್ನು ಪಡುತ್ತಿದ್ದಾರೆ. ದೇಶವನ್ನು ಸಂಪೂರ್ಣವಾಗಿ ಬಂದ್ ಮಾಡುವುದಕ್ಕಿಂತ ಮುಂಚೆ ಜನರೆಲ್ಲರನ್ನೂ ಅದಕ್ಕೆ ತಯಾರು ಮಾಡುವ ಉದ್ದೇಶದಿಂದ ಒಂದು ದಿನದ ಸಂಪೂರ್ಣ ಭಾನುವಾರ ಬಂದ್ ಮಾಡಿ ಪೂರ್ವ ತಯಾರಿಯನ್ನು ಮಾಡಿದ್ದರು. ಅನಂತರ ದೇಶದ ಜನರೆಲ್ಲರೂ ಇದಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿ ಯಶಸ್ವಿಗೊಳಿಸಿದ್ದರು.

ಇದಾದ ನಂತರ ದೇಶದಲ್ಲಿ ಈಗ ಇಪ್ಪತ್ತೊಂದು ದಿನಗಳ ಕಾಲ ಜಾರಿಯಲ್ಲಿರುವ ವೇಳೆಯಲ್ಲಿ, ಈ ಮಹಾ ರೋಗವನ್ನು ಮತ್ತಷ್ಟು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಮನೆಯಲ್ಲಿರುವ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಒಂದು ದೀಪವನ್ನು ಹಚ್ಚುವ ಮೂಲಕ ಅಥವಾ ಮೊಬೈಲ್ ಟಾರ್ಚ್ ಲೈಟ್ ಆನ್ ಮಾಡುವ ಮೂಲಕ ಇದರ ವಿರುದ್ಧ ಹೋರಾಡುತ್ತಿರುವ ಡಾಕ್ಟರ್ ಗಳಾಗಿರಬಹುದು, ಪೊಲೀಸರು, ಆರೋಗ್ಯಾಧಿಕಾರಿಗಳು ಹಾಗೂ ಸೇವಕರು ಎಲ್ಲರಿಗೂ ಕೂಡ ಮತ್ತಷ್ಟು ಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಬಳಿ ಕೇಳಿಕೊಂಡಿದ್ದಾರೆ.

ಮೋದಿಯವರು ಹೀಗೆ ಹೇಳುವ ವೇಳೆಯಲ್ಲಿ ದಯವಿಟ್ಟು ದೀಪವನ್ನು ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ ಎಂದು ಸಾಕ್ ಕೇಳಿಕೊಂಡಿದ್ದಾರೆ. ಹೌದು, ಅದು ಏನೆಂದರೆ ಮನೆಯಲ್ಲಿ ದೀಪ ಹಚ್ಚುವ ವೇಳೆಯಲ್ಲಿ ಒಬ್ಬೊಬ್ಬರು ಒಂದೊಂದು ದೀಪವನ್ನು ಹಚ್ಚಬಹುದು ಅಥವಾ ಎಲ್ಲರೂ ಸೇರಿ ಒಂದು ದೀಪವನ್ನು ಹೆಚ್ಚಬಹುದು, ಆದರೆ ಈ ವೇಳೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು ಅಂದರೆ ಒಬ್ಬರಿಗೊಬ್ಬರು ಟಚ್ ಮಾಡಬಾರದು.

ಇನ್ನು ಮೋದಿಯವರು ಯಾವಾಗ ದೀಪ ಹಚ್ಚಿ ಎಂದು ಕರೆ ಕೊಟ್ಟರು ಅದನ್ನೇ ಟ್ರೋಲ್ ಪೇಜ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರೋಲ್ ಮಾಡಲಾಗುತ್ತಿದ್ದು, ಅವರು ಹೇಳಿರುವುದು ಒಂದು ದೀಪವನ್ನು ಹಚ್ಚಲು, ಅದು ಬಿಟ್ಟು ಬೇರೆ ನೀವು ಏನೇನೋ ಮಾಡಲು ಹೋಗಿ ದೊಡ್ಡ ರಾದ್ಧಾಂತವನ್ನು ಮಾಡಬೇಡಿ. ದೀಪ ಹಚ್ಚುತ್ತೇನೆ ಎಂದು ದೊಡ್ಡ ದೊಡ್ಡ ಪಂಜುಗಳನ್ನು ಹಿಡಿದುಕೊಂಡು ಬೀದಿಗೆ ಬಂದು ಬಿಡಬೇಡಿ ಅಥವಾ ಯಾರದ್ದೊ ಮನೆಗೆ ಬೆಂಕಿ ಹಚ್ಚಿ ಬಿಡಬೇಡಿ.

ಜಸ್ಟ್ ಮನೆಯಲ್ಲಿ ಕುಳಿತು ವಿದ್ಯುತ್ ದೀಪಗಳನ್ನು ಆಫ್ ಮಾಡಿ ಸಾಧ್ಯವಾದರೆ ಒಬ್ಬೊಬ್ಬರು ಒಂದೊಂದು ದೀಪವನ್ನು ಹಚ್ಚಿ, ಈ ರೋಗದ ವಿರುದ್ಧ ಹೋರಾಡುತ್ತಿರುವವರಿಗೆ ಬೆಂಬಲವನ್ನು ನೀಡಿ ಎಂಬುದೇ ಅತಿ ಮುಖ್ಯ ವಿಷಯವಾಗಿದೆ. ಮೋದಿ ಅವರು ಕೂಡ ಇದನ್ನು ಸ್ಪಷ್ಟವಾಗಿ ಹೇಳಿದ್ದು, ದೀಪ ಹಚ್ಚುತ್ತೇನೆ ಎಂದು ಎಲ್ಲರೂ ಕೂಡ ಮನೆ ಹೊರಗೆ ಬಂದು ಒಬ್ಬೊಬ್ಬರನ್ನು ಸೇರಿಕೊಂಡು ಗುಂಪಾಗಿ ಈ ರೀತಿ ಕೆಲಸವನ್ನು ಮಾಡಿದರೆ ಪೊಲೀಸರು ಮುಲಾಜಿಲ್ಲದೇ ನಿಮ್ಮನ್ನು ಒಳಗೆ ಹಾಕುತ್ತಾರೆ.

ಅದಕ್ಕಾಗಿ ಮೋದಿ ಅವರು ಕೊಟ್ಟಿರುವ ಕರೆಯನ್ನು ದಯವಿಟ್ಟು ಸರಿಯಾಗಿ ಅರ್ಥ ಮಾಡಿಕೊಂಡು ಮನೆಯ ಒಳಗೆ ಅಥವಾ ಟೆರೇಸ್ ಮೇಲೆ ಬಂದು ದೂರ ದೂರದಲ್ಲಿ ನಿಂತು ಒಬ್ಬೊಬ್ಬರು ಒಂದೊಂದು ದೀಪವನ್ನು ಹಚ್ಚಿ ರೋಗವನ್ನು ಹೊಡೆದೊಡಿಸಲು ಸಹಕರಿಸಿ ಹಾಗೂ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಇದರ ವಿರುದ್ಧ ಹೋರಾಡುತ್ತಿರುವವರಿಗೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.