ಮಿಲನಾ ನಾಗರಾಜ್ ಮನೆಯಿಂದ ಹೊರ ಹೋದ ಸಮಯದಲ್ಲಿ ಜೀವ ಕಳೆದುಕೊಳ್ಳಲು ಹೋಗಿದ್ದ ನಟ ಕೃಷ್ಣ.. ನಿಜಕ್ಕೂ ನಡೆದದ್ದೇನು.. ಶಾಕಿಂಗ್

ಲವ್ ಮಾಕ್ಟೇಲ್ ಲವ್ ಸ್ಟೋರಿ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದ ಸಿನಿಮಾ. ಎರಡು ವರ್ಷಗಳ ಹಿಂದೆ ಲಾಕ್ ಡೌನ್ ಶುರುವಾಗುವ ಮೊದಲು ಲವ್ ಮಾಕ್ಟೇಲ್ ಸಿನಿಮಾ ತೆರೆಕಂಡಿತ್ತು. ಓಟಿಟಿಯಲ್ಲಿ ಈ ಸಿನಿಮಾ ಎಷ್ಟರ ಮಟ್ಟಿಗೆ ಜನರನ್ನು ತಲುಪಿತು ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಪ್ರೇಮಿಗಳು ಕೂಡ ಲವ್ ಮಾಕ್ಟೇಲ್ ಸಿನಿಮಾ ನೋಡಿ ಮೆಚ್ಚಿಕೊಂಡರು. ಈ ಸಿನಿಮಾ ಡಾರ್ಲಿಂಗ್ ಕೃಷ್ಣ ಅವರ ಕನಸಿನ ಕೂಸು, ಒಳ್ಳೆಯ ಸಿನಿಮಾ ಮಾಡಿದ್ದರು ಕೂಡ, ಲವ್ ಮಾಕ್ಟೇಲ್ ಸಿನಿಮಾ ಬಿಡುಗಡೆ ಆದ ಆರ್ಥಿಕ ಸಂಕಷ್ಟ ಅನುಭವಿಸಿದ ಡಾರ್ಲಿಂಗ್ ಕೃಷ್ಣ ಅವರು ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿಬಿಟ್ಟಿದ್ದರು. ಆದರೆ ಒಂದು ವಿಷಯ ಅವರ ಕಣ್ಣಮುಂದೆ ಬಂದು ಆ ನಿರ್ಧಾರ ಕೈಬಿಟ್ಟರು. ಅಂದು ನಿಜಕ್ಕೂ ನಡೆದಿದ್ದೇನು ಗೊತ್ತಾ?

ನಟ ಡಾರ್ಲಿಂಗ್ ಕೃಷ್ಣ ಅವರ ನಿಜವಾದ ಹೆಸರು ಸುನೀಲ್ ನಾಗಪ್ಪ. ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಇವರು ಮುನ್ನೆಲೆಗೆ ಬಂದರು. ಅದಕ್ಕಿಂತ ಮೊದಲು ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಹಾಗೆಯೇ ಸಣ್ಣ ಪುಟ್ಟ ಪಾತ್ರಗಳಲ್ಲಿ ಸಹ ನಟಿಸಿದ್ದಾರೆ. ನಂತರ ಕೃಷ್ಣ ರುಕ್ಮಿಣಿ ಸೀರಿಯಲ್ ಇಂದ ಸಕ್ಸಸ್ ಕಂಡ ಕೃಷ್ಣ, ಮದರಂಗಿ ಸಿನಿಮಾ ಮೂಲಕ ಹೀರೋ ಆಗಿ ಸಿನಿಮಾವನ್ನು ತಾವೇ ನಿರ್ಮಾಣ ಮಾಡಿದರು. ಆದರೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿತು. ನಂತರ ಕೃಷ್ಣ ಅಭಿನಯದ ಸಿನಿಮಾಗಳು ತೆರೆಕಂಡವು ಆದರೆ ಎಲ್ಲಾ ಸಿನಿಮಾಗಳು ಸೋತವು. ಒಂದು ಸಕ್ಸಸ್ ನ ಹುಡುಕಾಟದಲ್ಲಿದ್ದರು ಕೃಷ್ಣ.

ಆ ಸಮಯಕ್ಕಾಗಲೇ ಕೃಷ್ಣ ಮತ್ತು ಮಿಲನಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಆದರೆ ಒಂದು ಯಶಸ್ಸು ಸಿಗದೆ ಮದುವೆ ಆಗುವುದು ಒಳ್ಳೆಯದಲ್ಲ ಎನ್ನುವ ನಿರ್ಧಾರ ಕೃಷ್ಣ ಅವರದ್ದಾಗಿತ್ತು. ಮಿಲನಾ ಕೂಡ ಕೃಷ್ಣ ಅವರಿಗೆ ಸಾಥ್ ನೀಡುತ್ತಿದ್ದರು. ಆ ಸಮಯದಲ್ಲಿ ಕೃಷ್ಣ ಅವರು ಒಂದು ಒಳ್ಳೆಯ ಸಿನಿಮಾ ಯಶಸ್ಸು ಪಡೆಯಲೇಬೇಕು ಎಂದು ನಿರ್ಧಾರ ಮಾಡಿ, ತಾವೇ ನಿರ್ದೇಶನ ಮಾಡಿ ನಿರ್ಮಾಣ ಕೂಡ ಮಾಡಬೇಕು ಎಂದು ನಿರ್ಧಾರ ಮಾಡಿ, ಕೆಲವು ಕಥೆಗಳನ್ನು ಬರೆದರು, ಯಾವ ಕಥೆಯು ಇಷ್ಟವಾಗಿದೆ, ಕೊನೆಗೆ ಕೈಗೆತ್ತಿಕೊಂಡ ಕಥೆಯೇ ಲವ್ ಮಾಕ್ಟೇಲ್. ಈ ಸಿನಿಮಾ ಶುರುವಾಗುವ ಸಮಯದಲ್ಲಿ ಕೃಷ್ಣ ಅವರ ಬಳಿ ಸ್ವಲ್ಪವು ಹಣ ಇರಲಿಲ್ಲ. ತಂದೆ ಬಳಿ 4 ಲಕ್ಷ ಹಣ ಪಡೆದು ಸಿನಿಮಾ ಶುರು ಮಾಡಿದಾಡು. ಮಿಲನಾ ಅವರು ಸಿನಿಮಾ ಇಂದ ಮತ್ತು ಜಾಹೀರಾತಿನಿಂದ ಸಂಪಾದನೆ ಮಾಡಿದ್ದ ಹಣವನ್ನೆಲ್ಲಾ ಲವ್ ಮಾಕ್ಟೇಲ್ ನಿರ್ಮಾಣಕ್ಕೆ ನೀಡಿದರು.

40 ಲಕ್ಷ ರೂಪಾಯಿ ಸಾಲ ತಂದು ಸಿನಿಮಾ ಮಾಡಿದರು, ಆದರೆ ಸಿನಿಮಾ ಗೆ ಹೆಚ್ಚು ಖರ್ಚಾಗುತ್ತದೆ ಎಂದು ಸಹಾಯಕ ನಿರ್ದೇಶಕರನ್ನು ಇಟ್ಟುಕೊಂಡಿರಲಿಲ್ಲ, ಮೇಕಪ್ ಮತ್ತು ಬೇರೆ ಎಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಹೀಗೆ ಬಹಳ ಕಷ್ಟಪಟ್ಟು, ಪ್ರೀತಿಯಿಂದ ಒಂದು ಒಳ್ಳೆಯ ಕಥೆಯನ್ನು ಸಿನಿಮಾ ಆಗಿಸಿ, ಸಿನಿಮಾ ಬಿಡುಗಡೆ ಮಾಡಿದರು. ಲವ್ ಮಾಕ್ಟೇಲ್ ಬಿಡುಗಡೆಯಾದ ನಂತರ ಮದುವೆ ಮಾಡಿಕೊಳ್ಳುವ ನಿರ್ಧಾರ ಕೂಡ ಮಾಡಿದರು. ಆದರೆ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದರು ಒಳ್ಳೆಯ ಕಲೆಕ್ಷನ್ ಸಿಗಲಿಲ್ಲ. ಆಗ ಕೃಷ್ಣ ಅವರು ಕುಗ್ಗಿದ್ದರು. ಒಳ್ಳೆ ಸಿನಿಮಾ ಮಾಡಿದ್ದರೂ ಹಿಟ್ ಆಗಲಿಲ್ಲ. ನನ್ನ ಕಥೆ ಹೋಯ್ತು ಎಂದು ಕುಗ್ಗಿದ್ದ ಕೃಷ್ಣ, ಮಿಲನಾ ಅವರು ತಮ್ಮನ್ನು ಮೀಟ್ ಮಾಡಿ ಹೋದ ನಂತರ ಕನ್ನಡಿ ಮುಂದೆ ನಿಂತು ಅಳುತ್ತಿದ್ದರಂತೆ. ಹಾಗೂ ಪ್ರಾಣ ಕಳೆದುಕೊಳ್ಳುವ ನಿರ್ಧಾರ ಕೂಡ ಮಾಡಿದ್ದರಂತೆ..

ಇದರ ಬಗ್ಗೆ ಲವ್ ಮಾಕ್ಟೇಲ್2 ಸಿನಿಮಾ ಪ್ರೆಸ್ ಮೀಟ್ ನಲ್ಲಿ ಕೃಷ್ಣ ಮಾತನಾಡಿದರು.. “ಲವ್ ಮಾಕ್ಟೇಲ್ ಸಿನಿಮಾ ಜನರಿಗೆ ತುಂಬಾ ಇಷ್ಟ ಆಗುತ್ತೆ ಅಂತ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೆ. 40 ಲಕ್ಷ ರೂಪಾಯಿ ಸಾಲ ಮಾಡಿದ್ದೆ. ಸಿನಿಮಾ ಇಂದ ಬರುವ ಹಣದಿಂದಲೇ ಸಾಲ ತೀರಿಸಬೇಕಿತ್ತು. ಮೊದಲ ವಾರ ಸಿನಿಮಾ ಕಲೆಕ್ಷನ್ ಚೆನ್ನಾಗಿ ಆಗದೆ ಹೋದಾಗ, ತುಂಬಾ ಬೇಸರ ಆಗಿತ್ತು. ಒಳ್ಳೆ ಸಿನಿಮಾ ಮಾಡಿದರು ಹೀಗಾಯ್ತು, ನನ್ನ ಕಥೆಯನ್ನು ಜನ ಒಪ್ಪಿಕೊಳ್ಳಲಿಲ್ಲ ಅಂತ ಬೇಸರವಾಗಿ, ಮಿಲನಾ ಹೋದ ನಂತರ ಒಬ್ಬನೆ ಕನ್ನಡಿ ಮುಂದೆ ನಿಂತು ತುಂಬಾ ಅಳುತ್ತಿದ್ದೆ. ಜೀವ ಕಳೆದುಕೊಳ್ಳುವ ನಿರ್ಧಾರಕ್ಕೂ ಬಂದಿದ್ದೆ. ಆದರೆ ಮಿಲನಾ ಮುಖ ನೆನಪಾಗಿ ಸುಮ್ಮನಾಗುತ್ತಿದೆ..”

“ಒಬ್ಬ ವ್ಯಕ್ತಿ ಸೋಲಲಿ ಗೆಲ್ಲಲಿ ಆತನ ಜೊತೆಯೇ ಇಡೀ ಜೀವನ ಎಂದು ಮಿಲನಾ ನಿರ್ಧಾರ ಮಾಡಿದ್ದರು. ಆ ಎಥಿಕ್ಸ್ ನನ್ನ ನಿರ್ಧಾರ ಕೈಬಿಡುವ ಹಾಗೆ ಮಾಡಿತು. ನಂತರ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಒಬ್ಬರಿಂದ ಒಬ್ಬರಿಗೆ ಹರಡಿ, ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಸಿನಿಮಾ ಬಿಡುಗಡೆಯಾದ ಮೂರು ತಿಂಗಳ ನಂತರ ಎಲ್ಲಾ ಸಾಲವನ್ನು ತೀರಿಸಿದೆ. ಓಟಿಟಿ ಇಂದ ಹೆಚ್ಚಿನ ಜನರಿಗೆ ಸಿನಿಮಾ ರೀಚ್ ಆಯಿತು..” ಎಂದಿದ್ದಾರೆ ನಟ ಡಾರ್ಲಿಂಗ್ ಕೃಷ್ಣ. ಲಾಕ್ ಡೌನ್ ಸಮಯದಲ್ಲಿ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ನೋಡಿ, ಲವ್ ಮಾಕ್ಟೇಲ್2 ಸಿನಿಮಾ ಕಥೆಯನ್ನು ರೆಡಿ ಮಾಡಿದರು ಕೃಷ್ಣ. ಇದೀಗ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾ ಕೂಡ ಕೃಷ್ಣ ಅವರಿಗೆ ಯಶಸ್ಸು ತಂದುಕೊಡಲಿ ಎಂದು ಹಾರೈಸೋಣ..