ಚಿರುಗಾಗಿ ಮತ್ತೊಂದು ಪತ್ರ ಬರೆದ ಮೇಘನಾ ರಾಜ್..‌ ಕೊನೆಯದಾಗಿ ಹೇಳಿದ್ದೇನು ಗೊತ್ತಾ?

ಚಿರು ಸರ್ಜಾ ದೈಹಿಕವಾಗಿ ಇಲ್ಲವಾಗಿರಬಹುದು.. ಆದರೆ ಆತನ ನಗುಮುಖದ ನೆನಪುಗಳ ಮೂಲಕ ಸದಾ ಜೀವಂತ.. ಚಿರು ಚಿರಕಾಲ ಉಳಿಯುವಂತ ಪ್ರೀತಿ ಹಾಗೂ ನೆನಪುಗಳನ್ನು ಬಿಟ್ಟು ಎಲ್ಲರಿಂದ ದೂರವಾಗಿ‌ ಇಂದಿಗೊಂದು ತಿಂಗಳಾಗಿ ಹೋಯ್ತು.‌. ಯಾರೂ ಊಹಿಸದ ಘಟನೆ ಆ ಕುಟುಂಬಕ್ಕೆ ಬರಸಿಡಿಲು ಬಡಿದಂತೆ ಬಡಿದು ಹೋಯ್ತು.. ಅಗಲಿದ ಚಿರು ನೆನಪಿನಲ್ಲಿಯೇ ಮತ್ತೆ ಹುಟ್ಟಿ ಬರುವನು ಎಂಬ ಭರವಸೆಯೊಂದಿಗೆ ದಿನ ದೂಡುತ್ತಿರುವ ಮೇಘನಾ ಅವರು ಇಂದು ಮತ್ತೊಮ್ಮೆ ಚಿರು ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.. ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ..

ಹೌದು ನಿನ್ನೆಯಷ್ಟೇ ಚಿರು ಅವರ ಕುಟುಂಬದಿಂದ ನೆಲಗೋಳಿಯ ಬೃಂದಾವನ ಫಾರ್ಮ್ ಹೌಸ್ ನಲ್ಲಿನ ಚಿರು ಅವರ ಸಮಾಧಿ ಬಳಿ ತಿಂಗಳ ಪುಣ್ಯ ಕಾರ್ಯವನ್ನು ನೆರವೇರಿಸಲಾಯಿತು.. ಧೃವ ಸರ್ಜಾ, ಮೇಘನಾ ಹಾಗೂ ಕುಟುಂಬದವರು ಚಿರುಗೆ ಪೂಜೆ ಸಲ್ಲಿಸಿ ಕಣ್ಣೀರಿಟ್ಟರು..

ಮೇಘನಾ ಅವರು ಗರ್ಭಿಣಿ ‌ಆಗಿರುವುದರಿಂದ ಇನ್ನು ಅದೆಷ್ಟು ದಿನ ಕಣ್ಣೀರಿಟ್ಟು ಕೊರಗುತ್ತಾರೆಂದು ಆಲೋಚಿಸಿ, ಇವರನ್ನು ವಾಸ್ತವದ ಜೀವನವನ್ನು ಅರ್ಥ ಮಾಡಿಸಬೇಕೆಂಬ ನಿಟ್ಟಿನಲ್ಲಿ‌ ನಿನ್ನೆ ಚಿರು ಅವರ ಅಪ್ತ ಸ್ನೇಹಿತರೆಲ್ಲಾ ಸೇರಿ‌ ಪನ್ನಘ ಭರಣ ಅವರ ಮನೆಯಲ್ಲಿ ಚಿರು ಅವರ ತಿಂಗಳ ಕಾರ್ಯವನ್ನು ಏರ್ಪಡಿಸಿದ್ದರು.. ಚಿರು ಹಾಗೂ ಪನ್ನಘ ಭರಣ ಅತ್ಯಂತ ಆತ್ಮೀಯ ಸ್ನೇಹಿತರು.. ಅಗಲಿದ ಸ್ನೇಹಿತನಿಗಾಗಿ ಪನ್ನಘ ಭರಣ ಅವರು ತಮ್ಮ ಮನೆಯಲ್ಲಿಯೇ ಚಿರು ಇಷ್ಟ ಪಡುತ್ತಿದ್ದ ಜಾಗದಲ್ಲಿಯೇ ಅಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಿ ಮಂಟಪ ನಿರ್ಮಿಸಿ ಅಲ್ಲಿ ಚಿರು ಅವರ ಫೋಟೋ ಇರಿಸಿದ್ದಾರೆ.. ಇನ್ನು ಸದಾ ಚಿರು ಇಲ್ಲೇ ಇರ್ತಾನೆ ಎಂದಿದ್ದಾರೆ..

ಈ ಸಮಯದಲ್ಲಿ ಚಿರು ಅವರ ಎಲ್ಲಾ ಆಪ್ತ ಸ್ನೇಹಿತರು ಸಹ ಭಾಗಿಯಾಗಿ, ಚಿರು ಅವರಿಗೆ ಪೂಜೆ ಸಲ್ಲಿಸಿದ್ದಾರೆ.. ಈ ಸಮಯದಲ್ಲಿ ಚಿರು ಸದಾ ಹೇಳುತ್ತಿದ್ದ ಮಾತನ್ನು ಹೇಳಿ “ಜೀವನ ಬಹಳ ಚಿಕ್ಕದು, ಯಾರನ್ನೂ ದ್ವೇಷಿಸದೇ ಸದಾ ಪ್ರೀತಿಯಿಂದ ಇರಬೇಕು.. ಚಿರು ಯಾರ ಕಣ್ಣಲ್ಲೂ ನೀರು ನೋಡಲು ಬಯಸದವ.. ಅದೇ ಕಾರಣಕ್ಕಾಗಿ ಇನ್ನೆಂದೂ ಕಣ್ಣೀರು ಹಾಕಬಾರದು ಇನ್ನೇನಿದ್ದರೂ ಚಿರು ನಮ್ಮ ಜೊತೆಯಲ್ಲಿಯೇ ನಾವಿರುವವರೆಗೂ ಜೀವಂತವಾಗಿರ್ತಾನೆ.. ನೋ ಮೋರ್ ಟಿಯರ್ಸ್.. ಎಂದು ಮೇಘನಾರ ಬಳಿ ಮಾತು ಪಡೆದಿದ್ದಾರೆ.. ಜೊತೆಗೆ ಇದೇ ಸಂದರ್ಭದಲ್ಲಿ ಚಿರು ಇರುವಂತೆಯೇ ಭಾವಿಸಿ ಅವರ ಫೋಟೋ ಮುಂದೆ ನಿಂತು ಎಲ್ಲರೂ ಚಿರು ಅವರಂತೆಯೇ ನಗುತ್ತಲೇ ಫೋಟೋ ತೆಗೆದುಕೊಂಡಿದ್ದಾರೆ.. ಮೇಘನಾರ ಮುಖದಲ್ಲಿಯೂ ನಗು ತರಿಸಿದ್ದಾರೆ..

ಇದೀಗ ಆ ಫೋಟೋಗಳನ್ನು ಹಂಚಿಕೊಂಡಿರುವ ಮೇಘನಾ ಅವರು ಮತ್ತೊಮ್ಮೆ ಚಿರುಗಾಗಿ ಪತ್ರವೊಂದನ್ನು ಬರೆದಿದ್ದಾರೆ.. “ನನ್ನ ಪ್ರೀತಿಯ ಚಿರು.. ಚಿರು ಎಂದರೆ ಒಂದು ದೊಡ್ಡ ಸಂಭ್ರಮ.. ಇದಕ್ಕಿಂದ ಮತ್ತೊಂದು ರೀತಿಯಲ್ಲಿ ನಿನ್ನನ್ನು ಇಷ್ಟ ಪಡಲು ಸಾಧ್ಯವೇ ಇಲ್ಲ.. ಚಿರು ನಾನು ನಗುತ್ತಲೇ ಇರುವುದಕ್ಕೆ ನೀನೆ ಕಾರಣ.. ನೀನು ಕೊಟ್ಟಿರುವ ಈ ಸುಮಧುರ ಸಂಬಂಧ.. ನಮ್ಮ ಈ ಕುಟುಂಬ.. ನಾವುಗಳು ಮಾತ್ರ ಅದೇನೇ ಆದರೂ ಸದಾ ಒಂದಾಗಿರುತ್ತೇವೆ.. ಪ್ರತಿ ದಿನವೂ ನೀನು ಬಯಸಿದಂತೆಯೇ ಇರುತ್ತೇವೆ.. ಸದಾ ನಗುತ್ತಾ, ಗೇಲಿ‌ ಮಾಡುತ್ತಾ.. ತಮಾಷೆ ಮಾಡುತ್ತಾ.. ಪ್ರೀತಿಸುತ್ತಾ.. ವಿ ಲವ್ ಯು ಬೇಬಿ ಮಾ..” ಎಂದು ಬರೆದು ಚಿರು ಸದಾ ತನ್ನ ಜೊತೆ ಜೀವಂತ ಎಂದಿದ್ದಾರೆ..