ಮೇಘನಾರ ಒಡಲಲ್ಲಿ ಅವಳಿ ಮಕ್ಕಳು.. ಒಂದು ದುಃಖ ಎರಡು ಸಂತೋಷ..

ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿ ವಾರ ಕಳೆಯಿತು.. ಕುಟುಂಬ ಚಿರು ಇಲ್ಲದ ಜೀವನವನ್ನು ಬೇರೆ ದಾರಿ ಇಲ್ಲದೆ ಅಭ್ಯಾಸ ಮಾಡಿಕೊಳ್ಳಲೇ ಬೇಕಿದೆ.. ಮೇಘನಾರ ಒಡಲಲ್ಲಿನ ಕಂದಮ್ಮ ಆರೋಗ್ಯವಂತವಾಗಿ ಹುಟ್ಟಲು ಪೋಷಿಸಲೇ ಬೇಕಿದೆ.. ಈ ನಡುವೆ ಮೇಘನಾರ ಒಡಲಲ್ಲಿ ಎರಡು ಕಂದಮ್ಮಗಳು ಇರಬಹುದು ಎಂದು ಜಗ್ಗೇಶ್ ಅವರು ಹೇಳಿರುವ ವಿಚಾರ ಕುತೂಹಲ ಮೂಡಿಸಿದೆ..

ಹೌದು ಚಿರಂಜೀವಿ ಸರ್ಜಾ ಹಾಗೂ ಮೇಘನಾರ ಮದುವೆಯಾಗಲು ಜಗ್ಗೇಶ್ ಅವರೆ ಮುಖ್ಯ ಕಾರಣ.. ಅಂದು ಮೇಘನಾರ ತಂದೆ ತಾಯಿಯನ್ನು ಒಪ್ಪಿಸಿ ಅವರಿಬ್ಬರ ಪ್ರೀತಿಯನ್ನು ಒಂದು ಮಾಡಿದ್ದರು.. ಅಷ್ಟೇ ಅಲ್ಲದೆ ಅಂದು ಜಾತಕದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಂಡು ಪ್ರಕಾಶ್ ಅಮ್ಮಣ್ಣಾಯ ಅವರ ಬಳಿಯೂ ತೋರಿಸಿ ಚಿರು ಅವರ ಜಾತಕದಲ್ಲಿದ್ದ ಕುಜ ದೋಷಕ್ಕೆ ಪರಿಹಾರ ಮಾಡಿಕೊಡಿ ಎಂದು ಮನವಿಯನ್ನೂ ಮಾಡಿದ್ದರು..

ಇದೀಗ ಚಿರು ಕಳೆದ ವಾರ ಮೃತಪಟ್ಟಾಗ ಜಗ್ಗೇಶ್ ಅವರು ಮದುವೆ ಸಮಯದಲ್ಲಿ ನಡೆದ ವಿಚಾರಗಳನ್ನು ಹಂಚಿಕೊಂಡು ಬದುಕಿ ಬಾಳಬೇಕಾದವ ಇಷ್ಟು ಬೇಗ ಹೋದದಕ್ಕೆ ಕಂಬನಿ ಮಿಡಿದಿದ್ದರು..

ಇದೀಗ ವಾರದ ಬಳಿಕ ಜಗ್ಗೇಶ್ ಅವರು ಮೇಘಾನಾರ ಒಡಲಲ್ಲಿ ಇರುವ ಕಂದನ ಬಗ್ಗೆ ಕುತೂಹಲಕಾತಿ ವಿಚಾರವೊಂದನ್ನು ತಿಳಿಸಿದ್ದಾರೆ.. ಹೌದು “ಯಾಕೋ ಭೈರವ ಮೇಘನಳ ಉದರದಲ್ಲಿ ಎರಡು ಜೀವ ಬರುತ್ತದೆ ಎಂದು ನುಡಿದುಬಿಟ್ಟ‌.. ನಿಜವಾದರೆ ಚಿರಂಜೀವಿ ಎರಡು ಆತ್ಮವಾಗಿ ಮರುಹುಟ್ಟು.. ಒಂದು ದುಃಖ ಎರಡು ಸಂತೋಷ.. ಸತ್ಯವಾಗಲಿ ಹರಸಿಬಿಡಿ” ಎಂದು ಟ್ವೀಟ್ ಮಾಡಿದ್ದಾರೆ..

ಹೌದು ಜಗ್ಗೇಶ್ ಅವರು ಅತಿಯಾಗು ನಂಬುವ ದೇವರು ಭೈರವನ ಬಳಿ ಪ್ರಶ್ನೆ ಹಾಕಿಸಲಾಗಿ ಈ ಉತ್ತರ ಬಂದಿದೆಯೋ ಏನೋ.. ಒಟ್ಟಿನಲ್ಲಿ ಜಗ್ಗೇಶ್ ಅವರು ಹೇಳಿದ ಮಾತು ಸತ್ಯವಾಗಲಿ ಎಂಬುದೇ ಎಲ್ಲರ ಹಾರೈಕೆ.. ಮೇಘನಾ ಅವರು ತುಂಬು ಗರ್ಭಿಣಿಯಾಗಿದ್ದು ಕೆಲ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.. ಎಲ್ಲರ ಹಾರೈಕೆಯಂತೆ ಮೇಘನಾರ ಒಡಲಲ್ಲಿ ಚಿರು ಮತ್ತೆ ಹುಟ್ಟಿಬರಲಿ..