ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಜಡ್ಜ್ ಆಗಿರುವ ಮೇಘನಾ ರಾಜ್ ಕೊಡುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ

ಮೇಘನಾ ರಾಜ್ ಕನ್ನಡ ಚಿತ್ರರಂಗದಲ್ಲಿ ಆಡಿ ಬೆಳೆದ ಹುಡುಗಿ. ತಂದೆ ತಾಯಿ ಇಬ್ಬರು ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾಗಿದ್ದ ಕಾರಣ ಮೇಘನಾ ಅವರಿಗೆ ಹಿರಿಯ ಕಲಾವಿದರು ಹೊಸಬರಲ್ಲ. ಎಲ್ಲ ಮೆಚ್ಚಿನ ಮಗುವಾಗಿದ್ದರು ಮೇಘನಾ ರಾಜ್. ಎಲ್ಲರ ಮುದ್ದಿನ ಕೂಸಿನಂತಿದ್ದ ಮೇಘನಾ ಅವರು ಚಿಕ್ಕ ವಯಸ್ಸಿಗೆ ಅಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ ಎಂದು ಯಾರು ಊಹಿಸಿರಲಿಲ್ಲ. ಮೇಘನಾ ಅವರನ್ನು ನೋಡಿ ಇಂತಹ ಪರಿಸ್ಥಿತಿ ಯಾವ ಹೆಣ್ಣಿಗೂ ಬಾರದಿರಲಿ ಮೇಘನಾ ರಾಜ್ ಅವರಿಗೆ ಶಾಂತಿ ನೆಮ್ಮದಿ ಸಿಗಲಿ ಎಂದು ಹೆಂಗಸರು ಹಾರೈಸಿದ್ದರು. ಮೇಘನಾ ರಾಜ್ ಅವರು ಈಗ ಸಹಜ ಜೀವನಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಚಿರು ನೆನಪಲ್ಲೆ ಎಲ್ಲಾ ಕೆಲಸಗಳನ್ನು ಮಾಡುತ್ತಾ, ಬಣ್ಣದ ಲೋಕಕ್ಕೆ ಮರಳಿ ಬಂದಿದ್ದಾರೆ ಮೇಘನಾ. ಪ್ರಸ್ತುತ ಮೇಘನಾ ರಾಜ್ ಅವರು ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋಗೆ ಜಡ್ಜ್ ಆಗಿ ಬಂದಿದ್ದಾರೆ. ಮೇಘನಾ ರಾಜ್ ಅವರು ಈ ಶೋಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಮೇಘನಾ ರಾಜ್ ಅವರು ಚಿಕ್ಕ ವಯಸ್ಸಿನಲ್ಲೇ ಬಾಲನಟಿಯಾಗಿ ಜೋಕುಮಾರಸ್ವಾಮಿ ಸಿನಿಮಾದಲ್ಲಿ ನಟಿಸಿದ್ದರು. ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡ ಮೇಘನಾ ರಾಜ್ ಅವರು ಸೈಕಾಲಜಿ ವಿಷಯದಲ್ಲಿ ಪದವಿ ಪಡೆದು, ನಟನೆಗೆ ವಾಪಸ್ ಬಂದರು. ಕನ್ನಡದಲ್ಲಿ ಪುಂಡ ಸಿನಿಮಾ ಮೂಲಕ ಹೀರೋಯಿನ್ ಆದ ಮೇಘನಾ ರಾಜ್, ನಂತರದ ದಿನಗಳಲ್ಲಿ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಕೂಡ ಬ್ಯುಸಿ ಆದರು. ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಬೆಳೆದರು ಮೇಘನಾ. ಆದರೆ ಕನ್ನಡ ಭಾಷೆಯನ್ನು ಮರೆಯದೇ, ರಾಜಾಹುಲಿ ಸಿನಿಮಾ ಮೂಲಕ ಕನ್ನಡಕ್ಕೆ ಕಂಬ್ಯಾಕ್ ಮಾಡಿದರು. ಕನ್ನಡದಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿದರು ಮೇಘನಾ.

ಮೇಘನಾ ಅವರು ಹಲವು ವರ್ಷಗಳ ಕಾಲ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸ್ಯಾಂಡಲ್ ವುಡ್ ನ ಕ್ಯೂಟ್ ದಂಪತಿಗಳಾಗಿದ್ದ ಮೇಘನಾ ಚಿರುವಿನ ಸುಂದರವಾದ ಜೀವನದ ಮೇಲೆ ಯಾರ ಕಣ್ಣು ಬಿದ್ದಿತೋ, ಚಿರು ಅವರ ದಿಢೀರ್ ಅಗಲಿಕೆಯಿಂದ ಎರಡೇ ವರ್ಷಕ್ಕೆ ಈ ಮುದ್ದಾದ ದಾಂಪತ್ಯ ಜೀವನ ಅಂತ್ಯವಾಯಿತು. ಅದಾದ ನಂತರ ಮೇಘನಾ ಅವರ ಜೊತೆಯಲ್ಲಿ ಇದ್ದಿದ್ದು, ಹೊಟ್ಟೆಯಲ್ಲಿದ್ದ ರಾಯನ್ ಮಾತ್ರ. ಮಗುವಿಗಾಗಿ ಎಷ್ಟೇ ನೋವಾದರೂ ಸಹಿಸಿ ಮುಂದಕ್ಕೆ ಸಾಗಿದರು ಮೇಘನಾ. 2020ರ ಅಕ್ಟೋಬರ್ ತಿಂಗಳಿನಲ್ಲಿ ರಾಯಾನ್ ರಾಜ್ ಸರ್ಜಾ ಜನಿಸಿದರು. ಮಗು ಹುಟ್ಟಿದ ನಂತರ ಮೇಘನಾ ಅವರ ಜೀವನಕ್ಕೆ ಹೊಸ ಹುಮ್ಮಸ್ಸು ಬಂದಿತು.

ಮಗುವಿನ ಪಾಲನೆ ಪೋಷಣೆಯಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು ಮೇಘನಾ ರಾಜ್. ಆರೆಂಟು ತಿಂಗಳ ಕಾಲ ಹೊರಗಡೆ ಎಲ್ಲಿಯೂ ಕಾಣಿಸಿಕೊಳ್ಳದೆ, ಮಾಧ್ಯಮದ ಎದುರು ಬರದೆ ಮಗುವನ್ನು ನೋಡಿಕೊಳ್ಳುವಲ್ಲಿ ಬ್ಯುಸಿ ಆಗಿದ್ದರು. ರಾಯನ್ ಮೊದಲ ವರ್ಷದ ಹುಟ್ಟುಹಬ್ಬ ನಡೆದ ಬಳಿಕ ಆಗಾಗ ಹೊರಗಡೆ ಕಾಣಿಸಿಕೊಳ್ಳುತ್ತಿದ್ದರು ಮೇಘನಾ ರಾಜ್. ಪನ್ನಗ ಭರಣ ನಿರ್ಮಾಣ ಮಾಡುತ್ತರುವ ಸಿನಿಮಾ ಮೂಲಕ ಮೇಘನಾ ಅವರು ನಟನೆಗೆ ಕಂಬ್ಯಾಕ್ ಮಾಡುತ್ತಿರುವಾ ಗುಡ್ ನ್ಯೂಸ್ ಕೊಟ್ಟರು. ನಂತರ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಗೆ ಜಡ್ಜ್ ಆಗಿ ಬರುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮೇಘನಾ, ಇಂದು ಎಲ್ಲರೂ ಇಷ್ಟಪಡುವ ಜಡ್ಜ್ ಆಗಿದ್ದಾರೆ.

ಮೇಘನಾ ರಾಜ್ ಅವರು ಮೊದಲಿಗೆ ಸ್ಪೆಷಲ್ ಗೆಸ್ಟ್ ಆಗಿ ಶೋಗೆ ಬಂದರು. ಮೊದಲ ಎಪಿಸೋಡ್ ನಲ್ಲಿ

ಮೇಘನಾ ಅವರು ಸ್ಪರ್ಧಿಗಳನ್ನು ಜಡ್ಜ್ ಮಾಡಿದ ರೀತಿ, ಯಾರ ಮನಸ್ಸಿಗೂ ಬೇಸರ ಉಂಟು ಮಾಡದೆ ಸಲಹೆಗಳನ್ನು ನೀಡುವ ಪರಿ ಸ್ಪರ್ಧಿಗಳಿಗೆ ತುಂಬಾ ಇಷ್ಟವಾಗಿ ಹೋಯಿತು. ಹಾಗೆಯೇ ವೀಕ್ಷಕರಿಗೂ ಕೂಡ ಮೇಘನಾ ಅವರೇ ಜಡ್ಜ್ ಆಗಿ ಮುಂದುವರೆಯಬೇಕು ಎನ್ನುವ ಆಸೆ ಇತ್ತು. ಎಲ್ಲಾ ಸ್ಪರ್ಧಿಗಳು ಕಲರ್ಸ್ ಕನ್ನಡ ವಾಹಿನಿ ಮತ್ತು ಶೋ ನಿರ್ಮಾಪಕ ಸೃಜನ್ ಲೋಕೇಶ್ ಅವರ ಬಳಿ ಮನವಿ ಮಾಡಿಕೊಂಡ ಕಾರಣ ಮೇಘನಾ ಅವರನ್ನು ಒಪ್ಪಿಸಿ ಪರ್ಮನೆಂಟ್ ಜಡ್ಜ್ ಆಗಿ ಮುಂದುವರೆಯಲಿ ಕನ್ವಿನ್ಸ್ ಮಾಡಿದ್ದಾರೆ. ಮೇಘನಾ ಅವರು ಈ ಶೋನಲ್ಲಿ ಮುಂದುವರೆಯಲು ಹೆಚ್ಚಾಗಿ ಪ್ರೋತ್ಸಾಹ ನೀಡಿದ್ದು ನಟ ಸೃಜನ್ ಲೋಕೇಶ್.

ಸೃಜನ್ ಅವರ ಪ್ರೊಡಕ್ಷನ್ ಹೌಸ್ ನಲ್ಲೇ ಈ ಶೋ ನಿರ್ಮಾಣವಾಗುತ್ತಿದೆ. ಅದ್ಭುತವಾಗಿ, ಗ್ರ್ಯಾಂಡ್ ಆಗಿ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಮೂಡಿಬರುತ್ತಿದೆ, ಅಕುಲ್ ಅವರನ್ನು ಮಯೂರಿ ಅವರನ್ನು ಹಾಗು ಮೇಘನಾ ಅವರನ್ನು ಮತ್ತೆ ಕರೆತಂದಿದ್ದು ಸೃಜನ್. ಆರಂಭದಲ್ಲಿ ರಿಯಾಲಿಟಿ ಶೋಗೆ ಜಡ್ಜ್ ಆಗಿ ಬಂದರೆ ಜನ ನನ್ನನ್ನು ಒಪ್ಪಿಕೊಳ್ಳುತಾರಾ ಎನ್ನುವ ಆತಂಕ ಮೇಘನಾ ಅವರಲ್ಲಿತ್ತು ಆದರೆ ಅದೆಲ್ಲವನ್ನು ದೂರ ಮಾಡಿ ಜಡ್ಜ್ ಆಗಿ ಮೇಘನಾ ಅವರನ್ನು ಕರೆತಂದಿದ್ದು ಸೃಜನ್. ಮೇಘನಾ ಅವರಿಗೆ ಈ ಶೋ ಜಡ್ಜ್ ಮಾಡುತ್ತಿರುವುದಕ್ಕೆ ಒಳ್ಳೆಯ ಸಂಭಾವನೆಯನ್ನು ನೀಡಲಾಗುತ್ತಿದೆ. ಪ್ರತಿ ವಾರಕ್ಕ ಒಂದು ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಮೇಘನಾ ರಾಜ್. ಒಟ್ಟಾರೆ ಸಂಭಾವನೆಯು ಕಾರ್ಯಕ್ರಮ ಎಷ್ಟು ವಾರಗಳ ಕಾಲ ನಡೆಯುತ್ತದೆ ಅದರ ಮೇಲೆ ಅವಲಂಬಿಸಿದೆ. ಎಷ್ಟು ವಾರಗಳ ಕಾಲ ಶೋ ನಡೆಯುತ್ತದೆ, ಅಷ್ಟು ಲಕ್ಷ ಸಂಭಾವನೆ ಪಡೆಯುತ್ತದೆ ಮೇಘನಾ.