ಎರಡನೇ ಮದುವೆ ಬಗ್ಗೆ ನೇರವಾಗಿ ಹೇಳಿಕೊಂಡು ಹೌದು ನಿರ್ಧಾರ ನನ್ನದೇ ಎಂದ ನಟಿ ಮೇಘನಾ ರಾಜ್..

ಮೇಘನಾ ರಾಜ್.. ಸಧ್ಯ ತಮ್ಮ ಜೀವನದಲ್ಲಿ ನಡೆದ ಅತ್ಯಂತ ದೊಡ್ಡ ಕಹಿ ಘಟನೆಯಿಂದ ಇದೀಗ ಚೇತರಿಸಿಕೊಂಡು ಸಿನಿಮಾ ಕಿರುತೆರೆ ಅಂತ ಬ್ಯುಸಿ ಆಗುವ ಮೂಲಕ ಹೊಸ ಬದುಕಿನ ಆರಂಭವನ್ನು ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿಯೂ ಆಗಾಗ ತಮ್ಮ ಜೀವನದ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಅದೇ ರೀತಿ ಇದೀಗ ಮಾದ್ಯಮದ ಸಂದರ್ಶನವೊಂದರಲ್ಲಿ ನಟಿ ಮೇಘನಾ ರಾಜ್ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದು ನೇರವಾಗಿ ಇರೋ ವಿಚಾರವನ್ನು ಹಂಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ತಮ್ಮ ನಿರ್ಧಾರದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಹೌದು ಎರಡು ವರ್ಷಗಳ ಹಿಂದೆ ಎಲ್ಲವೂ ಸರಿ ಇದ್ದ ನಟಿ ಮೇಘನಾ ರಾಜ್ ಅವರ ಜೀವನದ ದಿಕ್ಕೇ ಬದಲಾಗಿ ಹೋಯ್ತು.

ಚಿರಂಜೀವಿ ಸರ್ಜಾ ಅವರು ಕೇವಲ 35ನೇ ವಯಸ್ಸಿಗೆ ಅಕಾಲಿಕವಾಗಿ ಇಲ್ಲವಾದರು. ನೋವಿನ ಆ ಕ್ಷಣದಲ್ಲಿ ಮೇಘನಾ ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದರು. ಚಿರು ಅಗಲಿಕೆಯ ನೋವಿನಲ್ಲಿ ಮಗುವಿಗಾಗಿ ಗಟ್ಟಿಯಾದ ಮೇಘನಾ ರಾಜ್ ಅಕ್ಟೋಬರ್ 22 ರಂದು ತಮ್ಮ ಮಗ ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದರು. ಅಂದಿನಿಂದ ನಟಿ ತನ್ನೆಲ್ಲ ಸಂತೋಷವನ್ನು ಮಗ ರಾಯನ್‌ನಲ್ಲಿಯೇ ಕಾಣುತ್ತಿದ್ದಾರೆ.. ತಂದೆಯ ಬಗ್ಗೆ ಮಗನಿಗೆ ಹಲವು ವಿಚಾರ ಹೇಳುವುದರಿಂದ ಹಿಡಿದು ಜೀವನದ ಉತ್ತಮ ಮೌಲ್ಯಗಳನ್ನು ಕಲಿಸುವವರೆಗೆ ಮೇಘನಾ ತನ್ನ ಮಗುವನ್ನು ಸಿಂಗಲ್ ಮದರ್ ಆಗಿ ಪ್ರೀತಿಯಿಂದ ಬೆಳೆಸುತ್ತಿದ್ದಾರೆ..

ಇನ್ನು ಕಳೆದ ವರ್ಷ ಮತ್ತೆ ತಮ್ಮ ವೃತ್ತಿ ಬದುಕಿನ ಕಡೆ ಗಮನ ನೀಡಬೇಕಾದ ಅನಿವಾರ್ಯತೆಯಿಂದ ಕಿರುತೆರೆಗೆ ಕಾಲಿಟ್ಟ ಮೇಘನಾ ರಾಜ್ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು.. ನಂತರ ಇದೀಗ ಗಿಚ್ಚಿ ಗಿಲಿಗಿಲಿ ಶೋನಲ್ಲಿಯೂ ಸಹ ಭಾಗವಹಿಸುತ್ತಿದ್ದು ಸಿನಿಮಾಗಳಲ್ಲಿಯೂ ಬ್ಯುಸಿ ಆಗಿದ್ದಾರೆ.. ಇನ್ನು ಈ ನಡುವೆ ಬಾಲಿವುಡ್ ನ ಬಬಲ್‌ ವಾಹಿನಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜ್ ಅವರು ತಮ್ಮ ಎರಡನೇ ಮದುವೆಯ ಬಗ್ಗೆ ನೇರವಾಗಿ ಹೇಳಿಕೊಂಡು ಇದರ ಬಗ್ಗೆಗಿನ ನಿರ್ಧಾರ ನನ್ನದೇ ಎಂದಿದ್ದಾರೆ..

ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಾಗ ಕಿರುತೆರೆ ಶೋಗಳಲ್ಲಿ ಭಾಗವಹಿಸಿದಾಗ ನಾನಾ ರೀತಿಯ ಜನರಿಂದ ನಾನಾ ರೀತಿಯ ಪ್ರತಿಕ್ರಿಯೆ ಬಂದದ್ದುಂಟು.. ಹೌದು ಮೇಘನಾ ರಾಜ್ ಚಿರುವನ್ನು ಮರೆತು ತಮ್ಮ ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.. ಅದಕ್ಕೆ ಪ್ರತಿಕ್ರಿಯಿಸಿದ ಮೇಘನಾ ರಾಜ್ ನಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಹೇಳಿ ಸುಮ್ಮನಾದರು.

ಅಷ್ಟೇ ಅಲ್ಲದೇ ಕೆಲವರು ಮೇಘನಾ ರಾಜ್ ಅವರ ಪೋಸ್ಟ್ ಗಳಿಗೆ ಕಮೆಂಟ್ ಮಾಡಿ ಅಯ್ಯೋ ಈಗ ನಿಮಗೆ ಚಿರು ನೆನಪಿಲ್ಲ ಎಂದಿದ್ದರು.. ಇದಕ್ಕೆ ಮೇಘನಾ ರಾಜ್ ಪ್ರತಿಕ್ರಿಯಿಸಿ ಸಹೋದರ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆಯೇ ಎಂದು ನಿಮಗೆ ಸಾಬೀತುಪಡಿಸಬೇಕಾಗಿಲ್ಲ. ಅವರ ಬಗ್ಗೆ ಯೋಚಿಸುವುದು ಯೋಚಿಸದಿರುವುದು ಸಂಪೂರ್ಣವಾಗಿ ನನಗೆ ಬಿಟ್ಟದ್ದು.. ನಾನು ಏನು ಮಾಡುತ್ತಿದ್ದೇನೆ.. ನಾನು ಏನು ತಿನ್ನುತ್ತಿದ್ದೇನೆ ಎನ್ನುವುದನ್ನು ನಿಮಗೆ ತಿಳಿಸಬೇಕಾಗಿಲ್ಲ ಎಂದಿದ್ದರು‌.. ನಾನು ಈ ವ್ಯಕ್ತಿಯನ್ನು ಫಾಲೋ ಮಾಡುತ್ತೇನೆ ಅಥವಾ ಈ ಕೆಲಸವನ್ನು ಮಾಡುತ್ತಿದ್ದೇನೆ.. ನಾನು ಈ ವ್ಯಕ್ತಿಯನ್ನು ನೆನಪಿಸಿಕೊಳ್ಳುತ್ತಿದ್ದೇನೆ ಎಂದು ನಾನು ಪ್ರತಿದಿನ ಒಂದು ಪೋಸ್ಟ್ ಅನ್ನು ಹಾಕಿ ತಿಳಿಸಬೇಕಿಲ್ಲ. ಆ ರೀತಿ‌ ಮಾಡುತ್ತೇನೆ ಎಂದು ನಾನು ಯಾರೊಂದಿಗೂ ಸಹ ಕಾನೂನು ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು.. ಇನ್ನು ಆ ಸಂದರ್ಶನದಲ್ಲಿ ತಮ್ಮ ಎರಡನೇ ಮದುವೆ ಬಗ್ಗೆ ಮಾತನಾಡಿದ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ..

ಹೌದು ತಮ್ಮ ಸುತ್ತಲಿನ ಎಷ್ಟು ಜನರು ತನ್ನನ್ನು ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಒಂಟಿಯಾಗಿದ್ದು ಮಗನನ್ನು ನೋಡಿಕೊಳ್ಳಲು ಸಲಹೆ ನೀಡುವ ಜನರ ಒಂದು ವಿಭಾಗವೂ ಇದೆ ಎಂದೂ ಹೇಳಿಕೊಂಡಿದ್ದಾರೆ. ನಮ್ಮ ಸಮಾಜದ ಮನಸ್ಥಿತಿಯು ವಿಭಿನ್ನವಾಗಿದೆ. ನನಗೆ ಮತ್ತೆ ಮದುವೆಯಾಗಲು ಸಲಹೆ ನೀಡುವ ಜನರ ಗುಂಪು ನನ್ನ ಸುತ್ತ ಇದೆ. ಅದರ ಜೊತೆಗೆ ಮತ್ತೊಂದು ವರ್ಗ ನೀವು ನಿಮ್ಮ ಮಗನೊಂದಿಗೆ ಸಂತೋಷವಾಗಿರಬೇಕು ಎಂದು ಹೇಳುವ ಜನರ ಗುಂಪು ಕೂಡಾ ಇದೆ. ಹಾಗಾದರೆ ನಾನು ಯಾರ ಮಾತು ಕೇಳಲಿ.. ಎಲ್ಲ ಗದ್ದಲದ ನಡುವೆಯೂ ನಾನು ನನ್ನ ಮಾತನ್ನು ಮಾತ್ರ ಕೇಳುತ್ತೇನೆ ಎಂದು ಮೇಘನಾ ಹೇಳಿದ್ದಾರೆ..

ಅದೇ ಸಮಯದಲ್ಲಿ‌ ಮಾತನಾಡಿರುವ ಮೇಘನಾ ರಾಜ್ ಜಗತ್ತು ನಿನ್ನ ಬಗ್ಗೆ ಏನೇ ಹೇಳಿದರೂ ನಿನ್ನ ಮನಸಿನ ಮಾತನ್ನು ಮಾತ್ರ ಕೇಳು ಎಂದು ಚಿರು ಯಾವಾಗಲೂ ಹೇಳುತ್ತಿದ್ದರು.. ನಾನು ಹಾಗೆ ಮಾಡುತ್ತೇನೆ.. ನನ್ನ ನಿರ್ಧಾರಗಳಿಗಾಗಿ ನನ್ನ ಮನಸ್ಸಿನ ಮಾತನ್ನು ಮಾತ್ರ ಕೇಳುತ್ತೇನೆ.

ನಾನು ಮತ್ತೊಂದು ಮದುವೆಯ ಬಗ್ಗೆ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡಿಲ್ಲ. ಚಿರು ಬಿಟ್ಟುಹೋದ ಒಂದು ವಿಷಯವೆಂದರೆ ಅದು ಮನುಷ್ಯ ಯಾವ ರೀತಿ ಬದುಕಬೇಕು ಎಂಬ ರೀತಿ. ಹಾಗಾಗಿ ನಾಳೆ ಏನಾಗಲಿದೆ ಎಂದು ನಾನು ಯೋಚಿಸುವುದಿಲ್ಲ. ಅಥವಾ ಒಂದೆರಡು ದಿನಗಳ ನಂತರ ನನ್ನ ಜೀವನ ಹೇಗಿರುತ್ತದೆ ಎಂದೂ ಸಹ ನಾನು ಯೋಚಿಸುವುದಿಲ್ಲ.. ನಾನು ಈಗಿನ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ ಎಂದಿದ್ದಾರೆ.. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕು ಎಂದಿದ್ದಾರೆ.