ಮೇಘಾನಾನೆ ನನಗೆ ಧೈರ್ಯ ತುಂಬುತ್ತಿದ್ದಳು.. ಮಗಳ ಬಗ್ಗೆ ಸುಂದರ್ ರಾಜ್ ಅವರ ಮನದಾಳದ ಮಾತು..

ಸರ್ಜಾ ಕುಟುಂಬ ಹಾಗೂ ಸುಂದರ್ ರಾಜ್ ಅವರ ಕುಟುಂಬದಲ್ಲಿ ಚಿರು ಇಲ್ಲದ ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.. ಹೊರಗೆಲ್ಲೋ ಹೋಗಿದ್ದಾರೆಂದರೆ ನಾಳೆಯೋ ನಾಳಿದ್ದೋ ಬರುತ್ತಾರೆ ಎನ್ನುವ ನಂಬಿಕೆ.. ಆದರೆ ಮರಳಿ ಬಾರದಿರುವ ಜಾಗಕ್ಕೆ ಹೋದ ಚಿರು ಇನ್ನೆಂದೂ ಆ ಕುಟುಂಬಕ್ಕೆ ಸಹಿಸಲಾಗದ ನೋವಿನ ನೆನಪು ಮಾತ್ರ..

ಈಗ ವಾಸ್ತವ ಅರಿತು ಗಟ್ಟಿಯಾಗಬೇಕಿರುವುದು ಮೇಘನಾ ಅವರು.. ಕೆಲವೇ ತಿಂಗಳಲ್ಲಿ ಭೂಮಿಗೆ ಆಗಮಿಸುವ ಚಿರುವಿನ ಪ್ರತಿರೂಪದ ಕಂದನ ಬರುವಿಕೆಗಾಗಿ ಮೇಘನಾ ಅವರು ಕಾತುರರಾಗಿದ್ದಾರೆ.. ಕಣ್ಣೀರಿನ ಜೊತೆಗೆ ಮತ್ತೆ ಚಿರುವನ್ನು ಮಗುವಾಗಿ ನೋಡುವೆ ಎಂದಿದ್ದಾರೆ.. ಯಾವ ಹೆಣ್ಣಿಗೂ ಇಂತಹ ನೋವು ಬರಬಾರದು.. ಗರ್ಭಿಣಿ ಸಮಯದಲ್ಲಿ ಗಂಡನ ಆಸರೆ, ಆತನ ಪ್ರೀತಿ.. ಆತನ ಹಾರೈಕೆ ಹೆಚ್ಚು ಬೇಕೆನಿಸುತ್ತದೆ.. ಅಂತಹ ಸಮಯದಲ್ಲಿಯೇ ಈ ರೀತಿಯ ನೋವು ತಡೆಯುವುದು ಅಸಾಧ್ಯವೇ ಸರಿ.. ವಿಧಿ ನಿನಗೆಂದೂ ಆ ಕುಟುಂಬದ ಕ್ಷಮೆ ಇರದು..

ಇನ್ನು ಇದೇ ಸಮಯದಲ್ಲಿ ಈ ಹಿಂದೆ ಒಮ್ಮೆ ಸುಂದರ್ ರಾಜ್ ಅವರು ತಮ್ಮ ಮಗಳ ಬಗ್ಗೆ ಮಾತನಾಡಿದ್ದ ವೀಡಿಯೋವೊಂದು ವೈರಲ್ ಆಗಿದೆ.. ಹೌದು ಸುಂದರ್ ರಾಜ್ ಅವರು ಮಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾ.. ನನ್ನ ಮಗಳು‌ ಬಹಳ ಧೈರ್ಯವಂತೆ.. ನಾನೇನಾದರೂ ಸ್ವಲ್ಪ ಡಿಪ್ರೆಸ್ ಆಗಿದ್ದರೂ ಸಹ ಅವಳೇ ಧೈರ್ಯ ತುಂಬಿ ನನ್ನನ್ನು ಸರಿ‌ ಮಾಡುತ್ತಿದ್ದಳು.. ಯಾವತ್ತೂ ಕೂಡ ಅವಳು ಸ್ಟಾರ್ ರೀತಿ ಎಲ್ಲಿಯೂ ನಡೆದುಕೊಳ್ಳಲಿಲ್ಲ.. ಬಹಳ ಅಂದ್ರೆ ಬಹಳ ಸಿಂಪಲ್.. ಹೊರಗೆ ಹೋದಾಗಲೂ ಜನರ ಜೊತೆ ಅಷ್ಟೇ ಆತ್ಮೀಯವಾಗಿ ನಡೆದುಕೊಳ್ತಾಳೆ.. ಮನೆಲಿ ಅವಳ ನಗು ನೋಡೋದೆ ಒಂದು ಚಂದ.. ಅವಳು ಒಬ್ಬಳೇ ಮಗಳಲ್ಲ.. ನಮ್ಮ ಮುದ್ದಿನ ಮಗಳು.. ದೊಡ್ಡ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದು ನಮಗೆಲ್ಲಾ ತುಂಬಾ ಖುಷಿ.. ಚಿರು ಅಂತ ಒಳ್ಳೆ ಹುಡುಗ ಸಿಕ್ಕಿರೋದು ನಿಜಕ್ಕೂ ಪುಣ್ಯ.. ನನಗೆ ಎಂದೂ ಚಿರುನೇ ಫೇವರಿಟ್.. ಎಂದಿದ್ದರು..

ನಿಜಕ್ಕೂ ದುರ್ವಿಧಿ..‌ ಸದಾ ಮಗಳ ನಗು ನೋಡಲು ಚಂದ ಎಂದವರು ಸಂತೋಷದಿಂದಿರಬೇಕಾದ ಗರ್ಭಿಣಿಯಾಗಿರುವ ಸಮಯದಲ್ಲಿ ಆಕೆಯ ಕಣ್ಣಲ್ಲಿ‌‌ ಕಣ್ಣೀರು ನೋಡುವಂತಾಗಿ ಹೋಯ್ತು.. ಚಿರು ಸಿಕ್ಕಿದ್ದು ಪುಣ್ಯ ಎಂದಿದ್ದರು.. ಆದರೆ ಆ ಪುಣ್ಯ ಹೆಚ್ಚು ದಿನ ಉಳಿಯಲಿಲ್ಲ.. ಒಳ್ಳೆಯ ಕುಟುಂಬಕ್ಕೆ ಮಗಳ ಕೊಟ್ಟೆ ಎಂದಿದ್ದರು.. ಆದರೆ ಆ ಜವರಾಯ ಆ ಕುಟುಂಬಕ್ಕೆ ಕಲ್ಲು ಹೊಡೆದುಬಿಟ್ಟ.. ಮಗಳು ಧೈರ್ಯವಂತೆ ಎಂದಿದ್ದರು.. ಆ ಭಗವಂತ ಮೇಘನಾ ಅವರ ಧೈರ್ಯವನ್ನ ಹಾಗೆಯೇ ಉಳಿಸಿಬಿಡಲಿ.. ನೋವು ತಡೆಯುವ ಗಟ್ಟಿ‌ ಮನಸ್ಸು ಕೊಟ್ಟುಬಿಡಲಿ.. ಕೆಲ ತಿಂಗಳಿನಲ್ಲಿ ಬರುವ ಕಂದನಿಗೆ ದೀರ್ಘಾಯುಷ್ಯ ಕೊಟ್ಟು ನೂರ್ಕಾಲ ಸಂತೋಷವಾಗಿ ಇರುವಂತೆ ಆಶೀರ್ವದಿಸಲಿ.. ದಯವಿಟ್ಟು‌ ಇನ್ಯಾವ ನೋವನ್ನೂ ಅವರಿಗೆ ನೀಡಬೇಡ ಭಗವಂತ..