ಚಿರು ಇಲ್ಲವಾದ ಬಳಿಕ ಹೆಸರು ಬದಲಿಸಿಕೊಂಡ ಮೇಘನಾ ರಾಜ್..

ಚಿರಂಜೀವಿ ಸರ್ಜಾ ಇಲ್ಲವಾಗಿ 17 ದಿನಗಳು ಕಳೆದು ಹೋದವು.. ಸಮಯ ಎಷ್ಟು ಬೇಗ ಹೋಗುತ್ತಿದೆ ಎಂದರೆ ನಿನ್ನೆ ಮೊನ್ನೆಯಷ್ಟೇ ಇನ್ನೂ ಆಸ್ಪತ್ರೆಯಿಂದ ಚಿರು ಅವರ ಸುದ್ದಿ ಬಂದಂತಿದೆ.. ಅಣ್ಣ ಇನ್ನೆಂದೂ ಏಳಲಾಗದ ಸ್ಥಿತಿ ನೋಡಿ ಧೃವ ತಕೆ ಚೆಚ್ಚಿಕೊಳ್ಳುತ್ತಿದ್ದ ದೃಶ್ಯ ಕಣ್ಣ ಮುಂದೆಯೇ ಬರುತ್ತಿದೆ.. ಚಿರು ಮಣ್ಣಲ್ಲಿ ಮಣ್ಣಾಗುವ ಕೊನೆ ಸಮಯದಲ್ಲಿ ಕೊನೆಯ ಬಾರಿ ಮೇಘನಾ ಅಪ್ಪಿ ಮುತ್ತನಿಟ್ಟು ಒಂದೇ ಒಂದು ಬಾರಿ‌ ಎದ್ದು ಬಂದು ಲವ್ ಯು ಕುಟ್ಟಿಮಾ ಎಂದು ಬಿಡು ಎಂದದ್ದು ಕಣ್ಣಿಗೆ ಕಟ್ಟಿದಂತಿದೆ..

ಅಂದು ಕಂಬನಿ‌ ಮಿಡಿದ ನಾವೆಲ್ಲರೂ ನಮ್ಮ ನಮ್ಮ ಸಹಜ ಜೀವನಕ್ಕೆ ಮರಳಿದೆವು.. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ಕಂಡಾಗೊಮ್ಮೆ ಮರುಗುತ್ತೇವೆ.. ಆದರೆ ಚಿರು ಇಲ್ಲವಾದ ಬಳಿಕ ಸಂಪೂರ್ಣ ಸರ್ಜಾ ಕುಟುಂಬದ ಜೀವನವೇ ಬದಲಾಗಿ ಹೋಯ್ತು.. ಅತ್ತ ಸುಂದರ್ ರಾಜ್ ಅವರ ಕುಟುಂಬ ಗರ್ಭಿಣಿ ಮಗಳ ನೋಡಿ ಕಣ್ಣೀರಿಡುತ್ತಿದೆ.. ಆ ಮನೆಗೆ ಮಗನೇ ಆಗಿದ್ದ ಚಿರುವನ್ನು ಕಳೆದುಕೊಂಡ ನೋವು ಕಾಡುತ್ತಿದೆ..

ಇನ್ನು ಧೃವ ಸರ್ಜಾ ಅವರು ಅಣ್ಣ ನೀನಲ್ಲದೆ ಇರಲಾಗುತ್ತಿಲ್ಲ ದಯಮಾಡಿ ಬಂದುಬಿಡು ಎಂದು ಅಣ್ಣನ ಹಳೆಯ ಫೋಟೋಗಳನ್ನು‌ ಹಾಕಿ‌ ನೋವನ್ನು ಹಂಚಿಕೊಂಡಿದ್ದರು. ಚಿರು ಅವರ 11ನೇ ದಿನದ ಪುಣ್ಯ ಸ್ಮರಣೆಯ ದಿನ ಮನೆ ಮಗನಿಗೆ ಮನವಿ ಎಂದು ಚಿರುವಿಗೆ ಮನವಿ ಮಾಡಿ ನಿನ್ನ ಮಗನಾಗಿ ನೀನೆ ಮತ್ತೆ ಹುಟ್ಟಿ ಬಾ ಎಂದು ಕುಟುಂಬ ಮನವಿ ಮಾಡಿ ಕಣ್ಣೀರಿಟ್ಟಿತ್ತು..

ಇತ್ತ ಮೇಘನಾ ಅವರೂ ಸಹ 12 ದಿನಗಳ‌ ಬಳಿಕ ಚಿರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ‌ ಪೋಸ್ಟ್ ಮಾಡಿದ್ದರು.. ಆದಷ್ಟು ಬೇಗ ಮಗುವಾಗಿ ಹುಟ್ಟಿ ಬಾ ಎಂದಿದ್ದರು.. ಜೊತೆಗೆ ಕಷ್ಟದ ಸಮಯದಲ್ಲಿ ಹೆಗಲು ಕೊಟ್ಟ ಪ್ರತಿಯೊಬ್ಬರಿಗೂ ಚಿರುವನ್ನು‌ ಮಹಾರಾಜನಂತೆ ಕಳುಹಿಸಿಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿದ್ದರು..

ಇದೀಗ ಚಿರು ಅವರ ನೆನಪಿನಲ್ಲಿ ಮೇಘನಾ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.. ಹೌದು ಮೇಘನಾ ರಾಜ್ ಅವರು ಇಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ತಮ್ಮೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹೆಸರನ್ನು ಅಪ್ಡೇಟ್ ಮಾಡಿದ್ದಾರೆ.. ಇಷ್ಟು ದಿನ ಮೇಘನಾ ರಾಜ್ ಎಂದು ಇದ್ದ ಹೆಸರನ್ನು ಮೇಘನಾ ರಾಜ್ ಸರ್ಜಾ ಎಂದು ಬದಲಿಸಿಕೊಂಡಿದ್ದಾರೆ.. ಅವರ ಇನ್ಸ್ಟಾಗ್ರಾಂ ಖಾತೆಯೂ ಕೂಡ ಮೇಘ ಎಸ್ ರಾಜ್ ಎಂದು ಇತ್ತು.. ಅದನ್ನೀಗ ಮೇಘನಾ ರಾಜ್ ಸರ್ಜಾ ಎಂದು ಬದಲಿಸಿಕೊಂಡಿದ್ದು ಪ್ರತಿ ಕ್ಷಣವೂ ಚಿರುವಿನ ನೆನಪಿನಲ್ಲಿಯೇ ಕಳೆಯುತ್ತಿದ್ದಾರೆ..

ಆದಷ್ಟು ಬೇಗ ಮೇಘನಾರ ಒಡಲಿನಲ್ಲಿ ಚಿರು ಮತ್ತೊಮ್ಮೆ ಪುಟ್ಟ ಮಗುವಾಗಿ ಹುಟ್ಟಿ ಬರಲಿ.. ಮೇಘನಾರ ನೋವು ತುಸು ಕಡಿಮೆಯಾಗಲಿ.. ಆ ಕಂದನ ನಗು ನೋಡಿ ಆ ಕಂದನ ಭವಿಷ್ಯಕ್ಕಾಗಿ ಮೇಘನಾ ಅವರು ಹೊಸ ಜೀವನ ಶುರು ಮಾಡಲಿ.. ಸರ್ಜಾ ಕುಟುಂಬದ ಕುಡಿ ದೀರ್ಘಾಯುಷ್ಯವಾಗಿ ಬಾಳಲಿ..