ಮೇಘನಾ ರಿಂದ ಅತ್ಯಂತ ಸಂತೋಷದ ಸುದ್ದಿ.. ಮೇಘನಾ ರಾಜ್ ನಡೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಸ್ನೇಹಿತರು..

ಮೇಘನಾ ರಾಜ್ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಕ್ಟೀವ್ ಇದ್ದು ಆಗಾಗ ತಮ್ಮ ಅಭಿಮಾನಿಗಳು ಪೋಸ್ಟ್ ಮಾಡಿರುವ ಮೇಘನಾ ಹಾಗೂ ಚಿರು ಅವರ ಕುರಿತ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.. ಇನ್ನು ಇದೀಗ ಅತ್ಯಂತ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದು ಮೇಘನಾ ಹಾಗೂ ಚಿರುವಿನ ಎಲ್ಲಾ ಸ್ನೇಹಿತರು ಸಹ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಚಾರ ಮಾತನಾಡಿ ಸಂತೋಷ ವ್ಯಕ್ತ ಪಡಿಸಿದ್ದಾರೆ..

ಹೌದು ಕಳೆದ ಜೂನ್ ತಿಂಗಳಿನಲ್ಲಿ ಯಾರೂ ಊಹಿಸದ‌.. ಸರ್ಜಾ ಹಾಗೂ ಸುಂದರ್ ರಾಜ್ ಅವರ ಕುಟುಂಬ ಎಂದೂ ನಿರೀಕ್ಷಿಸದ ಘಟನೆ ನಡೆದು ಹೋಗಿತ್ತು.. ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಚಿರು ಇನ್ನಿಲ್ಲವೆಂಬ ಸುದ್ದಿ‌ ನಿಜಕ್ಕೂ ಪ್ರತಿಯೊಬ್ಬರಿಗೂ ಅರಗಿಸಿಕೊಳ್ಳಲಾಗದ ವಿಚಾರವಾಗಿದ್ದು.. ಆ ವಿಚಾರ ಸತ್ಯ ಎಂದು ನಂಬುವುದೇ ಕಷ್ಟವಾಗಿತ್ತು.. ಹತ್ತಿರದವರಷ್ಟೇ ಅಲ್ಲದೇ ನಾಡಿನ ಲಕ್ಷಾಂತರ ಜನರು ಕಂಬನಿ ಮಿಡಿದರು.. ಅದೇ ಸಮಯದಲ್ಲಿ ಮೇಘನಾ ಗರ್ಭಿಣಿ ಎಂಬ ವಿಚಾರ ಕುಟುಂಬದಲ್ಲಿ ಚಿರು ಮತ್ತೆ ತನ್ನ ಮಗುವಾಗಿ ಹುಟ್ಟಿ ಬರಲಿದ್ದಾನೆ ಎಂಬ ಸಣ್ಣ ಭರವಸೆಯೊಂದು ಮೂಡಿತ್ತು.. ಲಕ್ಷಾಂತರ ಜನರು ಮೇಘನಾ ಹಾಗೂ ಮಗುವಿಗಾಗಿ ಪ್ರಾರ್ಥಿಸಿದ್ದರು.. ಕೊರೊನಾ ಎಂಬುದನ್ನು ನೋಡದೇ ನಾನಾ ಕಡೆಯಿಂದ ಬೆಂಗಳೂರಿಗೆ ಆಗಮಿಸಿ ಮೇಘನಾ ಹಾಗೂ ಮಗುವಿಗೆ ಒಳ್ಳೆಯದಾಗಲೆಂದು ಪೂಜೆ ಮಾಡಿಸಿ ಪ್ರಸಾದ ತಂದುಕೊಟ್ಟದ್ದೂ ಇದೆ..

ಇನ್ನೂ ಎಲ್ಲರ ಪ್ರಾರ್ಥನೆಯಂತೆ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಚಿರುವೇ ಮತ್ತೆ ಹುಟ್ಟಿ ಬಂದನೆಂಬ ಸಂತೋಷ ಮನೆ ಮಾಡಿದೆ.. ಆದರೆ ಎಲ್ಲರೂ ಚಿರು ಸರ್ಜಾರನ್ನು ನೆನಪಿಸಿಕೊಳ್ಳಬಹುದು.. ಆದರೆ ಅವರಿಲ್ಲದ ಹೆಚ್ಚು ನೋವು ಕಾಡುವುದು ಮೇಘನಾ ರಾಜ್ ಹಾಗೂ ಚಿರು ಕುಟುಂಬದವರಿಗೆಯೇ.. ಇನ್ನು ಮೇಘನಾರಿಗೆ ಮಗುವಿನ ಮುಖ ನೋಡಿ ಚಿರು ನೆನಪಾಗದೇ ಇರಲಾರರು..

ಇದೆಲ್ಲದರಿಂದ ವಾಸ್ತವಕ್ಕೆ ಮರಳಲಿ.. ಮೇಘನಾರ ನೋವು ಕಡಿಮೆಯಾಗಲೆಂದು ಮೇಘನಾರ ಸ್ನೇಹಿತರು ಪ್ರತಿದಿನವೂ ಮೇಘನಾರೊಟ್ಟಿಗೆ ಮಾತನಾಡುವುದಷ್ಟೇ ಅಲ್ಲದೇ ಮೊನ್ನೆ ಮೊನ್ನೆಯಷ್ಟೇ ಮೇಘನಾರ ಜೊತೆ ಸ್ನೇಹಿತರೆಲ್ಲಾ ಹೊರಗೆ ತೆರಳಿ ಸಮಯ ಕಳೆದು ಬಂದಿದ್ದರು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವಿಚಾರಗಳನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಳ್ಳುವ ಮೇಘನಾ ರಾಜ್ ಅವರು ಸ್ನೇಹಿತರೊಟ್ಟಿಗಿನ ಫೋಟೋವನ್ನು ಹಂಚಿಕೊಂಡಿದ್ದರು..

ಇನ್ನು ಇದೀಗ ಮತ್ತೊಂದು ಸಂತೋಷದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಫೆಬ್ರವರಿ 12ನೇ ತಾರೀಕಿನಂದು ರೋಮಾಂಚಕಾರಿ ವಿಚಾರವೊಂದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ..

ಹೌದು ಇದೇ ಶುಕ್ರವಾರ ಮೇಘನಾ ರಾಜ್ ಅವರು ತಮ್ಮ ಮಗುವಿನ ನಾಮಕರಣದ ವಿಚಾರವನ್ನು ಅಥವಾ ಮಗುವಿಗೆ ಇಡುವ ಹೆಸರನ್ನು ರಿವೀಲ್ ಮಾಡಬಹುದಾಗಿದ್ದು ಮಗುವಿನ ಫೋಟೋವನ್ನಿ ಸಹ ಹಂಚಿಕೊಳ್ಳಬಹುದು ಎನ್ನಲಾಗಿದೆ.. ಈ ಬಗ್ಗೆ ಪ್ರಜ್ವಲ್ ದೇವರಾಜ್.. ರಾಗಿಣಿ ಪ್ರಜ್ವಲ್ ಸೇರಿದಂತೆ ಮೇಘನಾ ಹಾಗೂ ಚಿರು ಅವರ ಪ್ರತೊಯೊಬ್ಬ ಸ್ನೇಹಿತರೂ ಕೂಡ ಮೇಘನಾ ಅವರ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದು ಸಂತೋಷದ ವಿಚಾರ ಹೊರಬರಲಿದೆ ಎಂದಿದ್ದಾರೆ..

ಮಗುವಿನ ವಿಚಾರದ ಜೊತೆಗೆ ಮೇಘನಾ ರಾಜ್ ಅವರು ಮತ್ತೊಂದು ವಿಚಾರವನ್ನೂ ಸಹ ಹಂಚಿಕೊಳ್ಳಬಹುದಾಗಿದೆ.. ಹೌದು ಅದಾಗಲೇ ಚಿತ್ರರಂಗಕ್ಕೆ ಮರಳುವ ಬಗ್ಗೆ ಖಚಿತ ಪಡಿಸಿರುವ ಮೇಘನಾ ರಾಜ್ ಅವರು ಕಲೆಯೇ ನಮ್ಮ ಬದುಕು.. ನಮಗೆ ನಟನೆ ಬಿಟ್ಟು ಬೇರೆ ಕೆಲಸ ತಿಳಿದಿಲ್ಲ ಆದಷ್ಟು ಬೇಗ ಚಿತ್ರರಂಗಕ್ಕೆ ಮರಳುವೆ ಎಂದಿದ್ದರು.. ಇದೀಗ ಫೆಬ್ರವರಿ 12 ರಂದು ತಮ್ಮ ಮುಂದಿನ ಸಿನಿಮಾದ ವಿಚಾರವನ್ನೂ ಹಂಚಿಕೊಳ್ಳಬಹುದಾಗಿದೆ ಎನ್ನಲಾಗಿದೆ.. ಮೇಘನಾ ಅವರ ಸ್ನೇಹಿತರು ಕೂಡ ಮೇಘನಾ ಅವರು ಚಿತ್ರರಂಗಕ್ಕೆ ಮರಳುವ ನಡೆಯನ್ನು ನಿರ್ಧಾರಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ ಶುಭ ಕೋರಿದ್ದಾರೆ..