ನೀವೆಲ್ಲರೂ ನನ್ನ ಕುಟುಂಬ ಎಂದ ಜೂನಿಯರ್ ಚಿರು.. ಫೋಟೋ ಗ್ಯಾಲರಿ ನೋಡಿ..

ಕಳೆದ ನಾಲ್ಕು ದಿನದ ಹಿಂದೆ ಫೆಬ್ರವರಿ 14 ರಂದು ವಿಶೇಷ ಸುದ್ದಿ ಎಂದಿದ್ದ ಮೇಘನಾ ರಾಜ್ ಅವರು ಇಂದು ತಮ್ಮ ಮುದ್ದು ಕಂದನ ಫೋಟೋ ಹಾಗೂ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.. ಹೌದು ಕಳೆದ ಅಕ್ಟೋಬರ್ 22 ರಂದು ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು ಆ ಸಮಯದಲ್ಲಿಯೂ ಧೃವ ಸರ್ಜಾ ಅವರು ಮಗುವನ್ನು ಎತ್ತಿ ಅಭಿಮಾನಿಗಳಿಗೆ ತೋರಿದ್ದರು.. ಅದಾದ ಬಳಿಕ ಮಗುವನ್ನು ಎಲ್ಲಿಯೂ ಮಾದ್ಯಮದ ಮುಂದೆ ತೋರಿರಲಿಲ್ಲ..

ಇದೀಗ ಫೆಬ್ರವರಿ 14 ಪ್ರೇಮಿಗಳ ದಿನದಂದು ಮಗುವಿನ ಫೋಟೋ ಹಾಗೂ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.. ಅಷ್ಟೇ ಅಲ್ಲದೆ ಪುಟ್ಟ ಕಂದ ಜೂನಿಯರ್ ಚಿರುವಿನ ಮಾತುಗಳನ್ನು ಸಹ ಮೇಘನಾ ರಾಜ್ ಅವರು ಬರೆದು ಪೋಸ್ಟ್ ಮಾಡಿದ್ದಾರೆ..

ಹೌದು ಕಳೆದ ಜೂನ್ ತಿಂಗಳಿನಲ್ಲಿ ನಡೆದ ಚಿರು ಸರ್ಜಾ ಘಟನೆಯನ್ನು ಕುಟುಂಬ ಮಾತ್ರವಲ್ಲ ಜನರು ಸಹ ಅರಗಿಸಿಕೊಳ್ಳಲಾಗಿರಲಿಲ್ಲ.. ಅದರಲ್ಲೂ ಮೇಘನಾ ಗರ್ಭಿಣಿ ಎಂಬ ವಿಚಾರ ಕೇಳಿ ಮತ್ತಷ್ಟು ಮನಕಲಕಿತ್ತು.. ಇಂತಹ ಸಮಯದಲ್ಲಿ ಚಿರು ಸರ್ಜಾ ಜೊತೆಯಲ್ಲಿರಬೇಕಿತ್ತು ಎಂದು ನೋವು ಪಟ್ಟಿದ್ದರು.. ಆದರೆ ಮೇಘನಾ ಹಾಗೂ ಮಗು ಆರೋಗ್ಯವಾಗಿರಲಿ ಎಂದು ಕೋಟ್ಯಾಂತರ ಜನರು ಪ್ರಾರ್ಥಿಸಿದ್ದಂತೂ ಸತ್ಯ..

ಹುಟ್ಟುವ ಮುನ್ನವೇ ಆ ಕಂದನಿಗೆ ಕೋಟ್ಯಾಂತರ ಜನರ ಆಶೀರ್ವಾದ ಸಿಕ್ಕಿತ್ತು.. ಆ ಮಗುವಿಗಾಗಿ ಅದೆಷ್ಟೋ ಜನರು ಪೂಜೆ ಸಲ್ಲಿಸಿದ್ದರು.. ಚಿರಂಜೀವಿ ಸರ್ಜಾ ಅವರೇ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದ್ದರು.. ಎಲ್ಲರ ಹಾರೈಕೆಯಂತೆ ಕಳೆದ ಅಕ್ಟೋಬರ್ 22 ರಂದು ಚಿರು ಅದಾಗಲೇ ಮೇಘನಾ ರಾಜ್ ಅವರ ಹೆರಿಗೆಗೆ ಎಲ್ಲಾ ಸಿದ್ಧತೆ ಮಾಡಿದ್ದ ಆಸ್ಪತ್ರೆಯಲ್ಲಿಯೇ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದರು.. ಚಿರು ಮತ್ತೆ ಹುಟ್ಟಿಬಂದನೆಂಬ ಸಂತೋಷ ಎರಡೂ ಕುಟುಂಬಗಳಲ್ಲಿ ಮನೆ ಮಾಡಿತು..

ಇನ್ನು ಹುಟ್ಟಿದ ಕೆಲ ದಿನಗಳಲ್ಲಿಯೇ ತೊಟ್ಟಿಲು ಶಾಸ್ತ್ರ ಮಾಡಿಸಿಕೊಂಡ ಪುಟಾಣಿ‌ ಕಂದ.. ಅದ್ಯಾಕೋ ಮತ್ತಷ್ಟು ನೋವು ಅನುಭವಿಸಬೇಕಿತ್ತೇನೋ.. ಕೊರೊನಾ ಸೋಂಕು ಕಾಣಿಸಿಕೊಂಡು ಸದ್ಯ ಅದನ್ನೆಲ್ಲಾ ಗೆದ್ದು ಇದೀಗ ಅಮ್ಮನ ಮಡಿಲಿನಲ್ಲಿ ಚೆಂದವಾಗಿ ಆಡಿಕೊಂಡಿದ್ದಾನೆ.. ಮಗನ ಫೋಟೋ ಹಾಗೂ ವೀಡಿಯೋವನ್ನಿ ಬಿಡುಗಡೆ ಮಾಡಿರುವ ಮೇಘನಾ ರಾಜ್ ಅವರು ಮಗನ ಪರವಾಗಿ ಮಾತನಾಡಿದ್ದಾರೆ..

“ನಮ್ಮ ಪುಟ್ಟ ರಾಜಕುಮಾರ.. ನೀವು ನನ್ನನ್ನು ಹುಟ್ಟುವ ಮುಂಚೆಯಿಂದಲೂ ಪ್ರೀತಿಸಿದ್ದಿರಿ.. ಇದೀಗ ಮೊದಲ ಬಾರಿಗೆ ನಾನು ನಿಮ್ಮೆಲ್ಲರನ್ನು ಭೇಟಿ‌‌ ಮಾಡುತ್ತಿದ್ದೇನೆ.. ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ನಾನು ಅಂತರಾಳದಿಂದ ಧನ್ಯವಾದಗಳನ್ನು ಹೇಳುವೆ.. ಅಮ್ಮನಿಗೆ ನನಗೆ ಹಾಗೂ ಅಪ್ಪನಿಗೆ ನೀವು ತೋರಿದ ಇಷ್ಟೊಂದು ಪ್ರೀತಿ ಬೆಂಬಲಕ್ಕೆ.. ನೀವೆಲ್ಲರೂ ನನ್ನ ಕುಟುಂಬ.. ಕುಟುಂಬದ ಪ್ರೀತಿ ಎಂದೂ ನಿರಂತರ.. ಲವ್ ಯು ಆಲ್..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..