ಅರ್ಜುನ್ ಸರ್ಜಾ ಬಗ್ಗೆ ಮೇಘನಾ ರಾಜ್ ಹೇಳಿರುವ ಮಾತು ನೋಡಿ..

ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗದ ಮನಮಗಳು ಎಂದೇ ಹೇಳಬಹುದು. ಮೇಘನಾ ರಾಜ್ ಅವರು ಚಿಕ್ಕ ವಯಸ್ಸಿನಿಂದಲೂ ಕನ್ನಡ ಚಿತ್ರರಂಗದ ದಿಗ್ಗಜರ ನೆರಳಿನಲ್ಲಿ ಆಡಿ ಬೆಳೆದ ಹುಡುಗಿ. ಕನ್ನಡದಿಂದ ಕೆರಿಯರ್ ಶುರು ಮಾಡಿ, ತಮಿಳು, ತೆಲುಗು ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿ, ಅದರಲ್ಲೂ ಮಲಯಾಳಂ ಚಿತ್ರರಂಗದ ಟಾಪ್ ನಟಿ ಎನ್ನಿಸಿಕೊಂಡವರು ಮೇಘನಾ ರಾಜ್. ಪಕ್ಕದ ರಾಜ್ಯದಲ್ಲಿ ಅಷ್ಟೆಲ್ಲಾ ಸಾಧನೆ ಮಾಡಿದ್ದರು ಕೂಡ ಕನ್ನಡದ ಮೇಲೆ ಅಷ್ಟೇ ಪ್ರೀತಿ ಗೌರವ ಇಟ್ಟುಕೊಂಡು, ಕನ್ನಡದಲ್ಲೇ ಮತ್ತೆ ಸಿನಿಮಾ ಮಾಡುತ್ತಿರುವುದು ಮೇಘನಾ ರಾಜ್ ಅವರ ದೊಡ್ಡ ಗುಣ. ಮೇಘನಾ ಅವರು ಮದುವೆಯಾಗಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟ ಶಕ್ತಿಪ್ರಸಾದ್ ಅವರ ಮೊಮ್ಮಗನ ಜೊತೆ, ಸರ್ಜಾ ಕುಟುಂಬದ ಸೊಸೆಯಾದರು ಮೇಘನಾ ರಾಜ್. ಮೇಘನಾ ಅವರಿಗೆ ಅರ್ಜುನ್ ಸರ್ಜಾ ಅವರ ಮೇಲೆ ಬಹಳ ಗೌರವ ಇದೆ. ಸಂದರ್ಶನ ಒಂದರಲ್ಲಿ ಅರ್ಜುನ್ ಅವರ ಬಗ್ಗೆ ಮೇಘನಾ ರಾಜ್ ಅವರು ಹೇಳದ್ದೇನು ಗೊತ್ತಾ..

ಮೇಘನಾ ರಾಜ್ ಅವರ ತಂದೆ ತಾಯಿ ಹಿರಿಯನಟ ಸುಂದರ್ ರಾಜ್ ಮತ್ತು ಹಿರಿಯನಟಿ ಪ್ರಮೀಳಾ ಜೋಷಾಯ್ ಅವರು. ಇವರಿಬ್ಬರ ಮುದ್ದು ಮಗಳು ಮೇಘನಾ ರಾಜ್, ಚಿಕ್ಕವರಿದ್ದಾಗಲೇ ಒಂದು ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿ ನಂತರ ವಿದ್ಯಾಭ್ಯಾಸ ಮುಂದುವರೆಸಿದರು. ಪದವಿ ಪಡೆದ ನಂತರ ಬಣ್ಣದ ಬದುಕಿಗೆ ಬಂದರು ಮೇಘನಾ ರಾಜ್. ಕನ್ನಡ, ತಮಿಳು, ತೆಲುಗು ಮಲಯಾಳಂ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡರು. ಕೇರಳದಲ್ಲಿ ಈಗಲೂ ಮೇಘನಾ ರಾಜ್ ಅಂದ್ರೆ ಎಲ್ಲರಿಗೂ ಗೌರವ ಮತ್ತು ಅಭಿಮಾನ. ಅಲ್ಲಿನ ಬಹುಬೇಡಿಕೆಯ ನಟಿಯಾಗಿದ್ದರು ಮೇಘನಾ ರಾಜ್.

ಮೇಘನಾ ರಾಜ್ ಅವರು ಸುಮಾರು 8 ವರ್ಷಗಳ ಕಾಲ ಚಿರು ಅವರ ಜೊತೆ ರಿಲೇಶನ್ಷಿಪ್ ನಲ್ಲಿದ್ದರು. ಅಷ್ಟು ವರ್ಷಗಳ ಕಾಲ ಯಾರಿಗೂ ಗೊತ್ತಾಗದಂತೆ ಈ ಪ್ರೇಮ ಪಕ್ಷಿಗಳು ಪ್ರೀತಿ ಮಾಡುತ್ತಿದ್ದವು. ಇಬ್ಬರ ಮೇಲು ಮಾಧ್ಯಮಗಳ ಕಣ್ಣು ಕೂಡ ಇತ್ತು, ನೋಡಲು ಬಹಳ ಮುದ್ದಾಗಿದ್ದ ಈ ಜೋಡಿ, 2018ರಲ್ಲಿ ಇಬ್ಬರು ಎರಡು ಕುಟುಂಬಗಳನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹಿಂದೂ ಸಂಪ್ರದಾಯದ ಪ್ರಕಾರ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಎರಡು ರೀತಿಯಲ್ಲಿ ಚಿರು ಮೇಘನಾ ಮದುವೆ ನಡೆಯಿತು. ಸ್ಯಾಂಡಲ್ ವುಡ್ ನ ಕ್ಯೂಟ್ ಸ್ಟಾರ್ ಜೋಡಿ ಎಂದೇ ಇವರನನ್ನು ಕರೆಯುತ್ತಿದ್ದರು. ಆದರೆ ಈ ಜೋಡಿ ಹೆಚ್ಚು ಸಮಯ ಜೊತೆಯಾಗಿರಲು ಆ ದೇವರು ಅವಕಾಶ ಕೊಡಲಿಲ್ಲ.

ಮದುವೆಯಾದ ಎರಡೇ ವರ್ಷಕ್ಕೆ ಚಿರು ಈ ಪ್ರಪಂಚವನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಬಂತು. ಅಂದು ಗರ್ಭಿಣಿಯಾಗಿದ್ದ ಮೇಘನಾ ರಾಜ್ ಅವರ ಪರಿಸ್ಥಿತಿ ಬಗ್ಗೆ ಮಾತನಾಡಲು ಪದಗಳೇ ಇಲ್ಲ. ಅವರನ್ನು ನೋಡಿದ ಎಲ್ಲಾ ಹೆಣ್ಣುಮಕ್ಕಳು, ಇಂತಹ ಪರಿಸ್ಥಿತಿ ಯಾರಿಗೂ ಬರದೇ ಇರಲಿ, ಮೇಘನಾ ಈ ನೋವಿನಿಂದ ಬೇಗ ಹೊರಬರಲಿ ಎಂದೇ ಹೇಳುತ್ತಿದ್ದರು. ಆ ಸಮಯದಲ್ಲಿ ಮೇಘನಾ ರಾಜ್ ಅವರಿಗೆ ಸಪೋರ್ಟಿವ್ ಆಗಿದ್ದಿದ್ದು, ಅವರ ತಂದೆ ತಾಯಿ ಹಾಗೂ ಸರ್ಜಾ ಕುಟುಂಬ. ಅದರಲ್ಲೂ ಅರ್ಜುನ್ ಸರ್ಜಾ ಅವರು ಮೇಘನಾ ಅವರನ್ನು ತುಂಬಾ ಕಾಳಜಿಯಿಂದ ನೋಡಿಕೊಂಡರು. ಮೇಘನಾ ಅವರಿಗೆ ಅರ್ಜುನ್ ಸರ್ಜಾ ಅವರ ಮೇಲೆ ಗೌರವ ಹೆಚ್ಚು. ಅರ್ಜುನ್ ಸರ್ಜಾ ಅವರ ಬಗ್ಗೆ ಮೇಘನಾ ರಾಜ್ ಹೇಳೋದು ಹೀಗೆ..

“ಎರಡು ಕುಟುಂಬ ಅಂತ ನೋಡೋದಾದರೆ, ನನ್ನ ಮನೆಯಲ್ಲಿ ನನ್ನ ತಂದೆ ತಾಯಿ ಹೇಗೋ ಅಲ್ಲಿ ನನಗೆ ಅರ್ಜುನ್ ಅಂಕಲ್ ಹಾಗೆ. ನನಗೆ ಮತ್ತೊಬ್ಬ ತಂದೆ ತಾಯಿ ಸಿಕ್ಕಿದ್ದಾರೆ. ನನ್ನ ತಂದೆ ತಾಯಿ ನನಗೆ ಎಷ್ಟು ಮುಖ್ಯ ಆಗ್ತಾರೋ, ಅರ್ಜುನ್ ಅಂಕಲ್ ಕೂಡ ಅಷ್ಟೇ ಮುಖ್ಯ ಆಗ್ತಾರೆ. ಫ್ಯಾಮಿಲಿ ಜೊತೆ ನನ್ನ ರಿಲೇಶನ್ಷಿಪ್ ಇರೋದು ಅದೇ ಥರಾ. ಮುಂಚೆ ಇಂದಾನು ಅದೇ ಥರಾನೇ ಇರೋದು. ಅವರು ನನಗೆ ತಂದೆಯ ಸ್ವರೂಪ ಆಗಿದ್ದಾರೆ..”ಎಂದು ಅರ್ಜುನ್ ಸರ್ಜಾ ಅವರ ಬಗ್ಗೆ ಹೇಳುತ್ತಾರೆ ಮೇಘನಾ. ಆಗಿನಿಂದ ಈಗಿನವರೆಗೂ ಮೇಘನಾ ಅವರಿಗೆ ಅರ್ಜುನ್ ಸರ್ಜಾ ಅವರು ಎಲ್ಲಾ ವಿಚಾರಕ್ಕೂ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ.

ಚಿರು ಇಲ್ಲವಾಗಿ ಕೆಲ ತಿಂಗಳುಗಳ ನಂತರ ರಾಯನ್ ರಾಜ್ ಸರ್ಜಾ ಹುಟ್ಟಿದರು, ಆಗಿನಿಂದ ಮೇಘನಾ ರಾಜ್ ಅವರ ಲೋಕ ಸಂಪೂರ್ಣವಾಗಿ ಬದಲಾಗಿ ಹೋಯಿತು. ಮೇಘನಾರ ಪ್ರಪಂಚವೇ ಆಗಿಬಿಟ್ಟಿದ್ದಾರೆ ರಾಯನ್. ಮಗುವಿನ ಪಾಲನೆ ಪೋಷಣೆಯಲ್ಲಿ ಮೇಘನಾ ರಾಜ್ ಅವರು ಬಹುತೇಕ ಎಲ್ಲಾ ಸಮಯವನ್ನು ಕಳೆಯುತ್ತಾರೆ. ಈಗ ರಾಯನ್ ಗೆ ಒಂದು ವರ್ಷ ತುಂಬಿದ್ದು, ಮಗನ ಹುಟ್ಟುಹಬ್ಬವನ್ನು ಬಹಳ ಸುಂದರವಾಗಿ ಆಚರಿಸಿದರು ಮೇಘನಾ. ಈಗ ಮಗು ಸ್ವಲ್ಪ ದೊಡ್ಡವನಾಗಿರುವ ಕಾರಣ ಕಿರುತೆರೆ ಮೂಲಕ ಬಣ್ಣದ ಬದುಕಿಗೆ ಮರಳಿ ಬಂದಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ ಶೋ ಜಡ್ಜ್ ಆಗಿದ್ದಾರೆ ಮೇಘನಾ, ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ.