ಎಂಟು ತಿಂಗಳ ಬಳಿಕ ಸ್ನೇಹಿತರ ಜೊತೆ ಹೊರ ಬಂದ ಮೇಘನಾ ರಾಜ್.. ಕಾರಣವೇನು ಗೊತ್ತಾ?

ಮೇಘನಾ ರಾಜ್ ಸದ್ಯ ಪುಟ್ಟ ಚಿರುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದು ಬಹಳಷ್ಟು ದಿನಗಳ ಬಳಿಕ ಇದೀಗ ಸ್ನೇಹಿತರೊಂದಿಗೆ ಕಾಣಿಸಿಕೊಂಡಿದ್ದಾರೆ.. ಹೌದು ಚಿರು ಹಾಗೂ ಮೇಘನಾ ರಾಜ್ ಇಬ್ಬರೂ ಸಹ ಬಹಳ ಸ್ನೇಹ ಜೀವಿಗಳು.. ವಾರಕ್ಕೊಂದು ದಿನವಾದರೂ ಸ್ನೇಹೊತರೊಟ್ಟಿಗೆ ಸಮಯ ಕಳೆಯುತ್ತಿದ್ದ ಚಿರು ಹಾಗೂ ಮೇಘನಾ ಅಷ್ಟೇ ಕುಟುಂಬದ ಜೊತೆಯೂ ಸಮಯ ಕಳೆಯುತ್ತಿದ್ದರು..

ಇನ್ನು ಕಳೆದ ವರ್ಷ ಕುಟುಂಬವಾಗಲಿ ಸ್ನೇಹಿತರಾಗಲಿ ಎಂದೂ ಊಹಿಸದ ಘಟನೆ ಜೂನ್ ಏಳನೇ ತಾರೀಕಿನಂದು ನಡೆದೇ ಹೋಯಿತು.. ಚಿರು ಅಕಾಲಿಕವಾಗಿ ಇಲ್ಲವಾದರು.. ಕುಟುಂಬದಲ್ಲಿ ದುಃಖ ಮಡುಗಟ್ಟಿತು.. ಸ್ನೇಹಿತರಲ್ಲಿ ಸಂತೋಷ ಮರೆಯಾಗಿ ಹೋಯ್ತು.. ಆ ಘಟನೆಯನ್ನು ಸತ್ಯ ಎಂದು ಒಪ್ಪಿಕೊಳ್ಳಲೇ ಸಾಕಷ್ಟು ದಿನಗಳೇ ಬೇಕಾದವು.. ಇನ್ನು ಈ ನಡುವೆ ಮೇಘನಾ ರಾಜ್ ಗರ್ಭಿಣಿ ಎಂಬ ವಿಚಾರ ಜನರಿಗೆ ತಿಳಿದು ಲಕ್ಷಾಂತರ ಜನ ಮೇಘನಾ ಹಾಗೂ ಮಗುವಿಗಾಗಿ ಪ್ರಾರ್ಥಿಸಿದರು.. ಚಿರು ಇದ್ದಿದ್ದರೆ ಅದ್ಧೂರಿ ಸೀಮಂತ ಮಾಡುತ್ತಿದ್ದನೆಂದು.. ಅವನ ಆಸೆ ಹಾಗೆಯೇ ಉಳಿಯಬರದೆಂದು ಸ್ನೇಹಿತರೆಲ್ಲಾ ಸೇರಿ ಮೇಘನಾರಿಗೆ ಸೀಮಂತ ಶಾಸ್ತ್ರ ನೆರವೇರಿಸಿದರು.. ಇತ್ತ ಕುಟುಂಬವೂ ಸಹ ಸರಳವಾಗಿ ಮೇಘನಾ ರಾಜ್ ಅವರ ಮನೆಯಲ್ಲಿಯೇ ಶಾಸ್ತ್ರೋಕ್ತವಾಗಿ ಸೀಮಂತ ಶಾಸ್ತ್ರ ಮಾಡಿದರು.. ಇತ್ತ ಧೃವ ಸರ್ಜಾ ಕೂಡ ಅತ್ತಿಗೆಗೆ ಅದ್ಧೂರಿಯಾಗಿ ಬೇಬಿ ಶೋವರ್ ಕಾರ್ಯಕ್ರಮ ಮಾಡಿ ಹುಟ್ಟುವ ಕಂದನನ್ನು ಸ್ವಾಗತಿಸಿದ್ದರು..

ಎಲ್ಲರ ಆಶೀರ್ವಾದ ದಿಂದಾಗಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದರು.. ಮೇಘನಾ ಒಡಲಲ್ಲಿ ಚಿರು ಮತ್ತೆ ಹುಟ್ಟಿ ಬಂದರೆಂದು ಕುಟುಂಬ ಕೊಂಚ ಸಮಾಧಾನ ಪಟ್ಟುಕೊಂಡಿತು.. ಆದರೆ ಅದ್ಯಾವ ಕೆಟ್ಟ ದಿನಗಳೋ ಮೇಘನಾ ರಾಜ್ ಅವರ ಸಂಪೂರ್ಣ ಕುಟುಂಬಕ್ಕೆ ಕೊರೊನಾ ಕಾಣಿಸಿಕೊಂಡು ಎಲ್ಲರೂ ಚಿಕಿತ್ಸೆ ಪಡೆಯುವಂತಾಯಿತು.. ಸದ್ಯ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಮೇಘನಾ ರಾಜ್ ಹಾಗೂ ಮಗು ಎಲ್ಲರೂ ಆರೀಗ್ಯದಿಂದಿದ್ದಾರೆ ಎಂದು ತಿಳಿದುಬಂದಿದೆ..

ಇನ್ನೂ ಇದೀಗ ಎಂದಿನಂತೆ ಸಹಜ ಜೀವನದತ್ತ ಮುಖ ಮಾಡಿರುವ ಮೇಘನಾ ರಾಜ್ ಬಹಳ ತಿಂಗಳ ನಂತರ ಸ್ನೇಹಿತರೊಟ್ಟಿಗೆ ಕಾಣಿಸಿಕೊಂಡಿದ್ದಾರೆ.. ಹೌದು ಈ ಹಿಂದೆಯೂ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದ ಮೇಘನ ರಾಜ್ ಅವರು ಕಲೆಯೇ ನಮಗೆ ಅನ್ನ ನೀಡುವ ದೇವರು.. ನಟನೆ ಬಿಟ್ಟು ನಮಗೆ ಬೇರೆ ಕೆಲಸ ಗೊತ್ತಿಲ್ಲ.. ಆದಷ್ಟು ಬೇಗ ಮತ್ತೆ ಚಿತ್ರರಂಗಕ್ಕೆ ಬರುವೆ ಎಂದಿದ್ದರು.. ಇದೀಗ ನಿನ್ನೆ ಭಾನುವಾರ ಮೇಘನಾ ರಾಜ್ ಸ್ನೇಹಿತರೊಟ್ಟಿಗೆ ಮೊದಲಿನಂತೆ ಸಮಯ ಕಳೆದಿದ್ದು ಸ್ನೇಹಿತರಾದ ನಿರ್ದೇಶಕ ಪನ್ನಘಭರಣ ಅವರು ಮೇಘನಾ ರಾಜ್.. ಪ್ರಜ್ವಲ್ ದೇವರಾಜ್.. ಹಾಗೂ ಸ್ನೇಹಿತರೊಟ್ಟಿಗೆ ಫೋಟೋ ಹಂಚಿಕೊಂಡಿದ್ದಾರೆ..

ಮೇಘನಾ ರಾಜ್ ಅವರನ್ನು ನೋಡಿದ ಅಭಿಮಾನಿಗಳು ಸಂತೋಷ ಪಟ್ಟಿದ್ದು ಇನ್ನು ಮುಂದೆ ಇದೇ ರೀತಿ ಸಂತೋಷವಾಗಿರಿ.. ಹೊಸ ದಿನಗಳು ಹೊಸತನವನ್ನು ತರಲಿ ನಿಮಗೂ ಮಗುವಿಗೂ ಒಳ್ಳೆಯದಾಗಲೆಂದು ಶುಭ ಹಾರೈಸಿದ್ದಾರೆ.. ಅಷ್ಟೇ ಅಲ್ಲದೇ ಆದಷ್ಟು ಬೇಗ ತೆರೆ ಮೇಲೆ ಕಾಣಿಸಿಕೊಳ್ಳಿ ಎಂದು ಕಮೆಂಟ್ ಮೂಲಕ ಶುಭ ಕೋರಿದ್ದಾರೆ..