ಕುಸಿದು ಬಿದ್ದ ಮೇಘನಾ..‌ ಅಣ್ಣ ಮತ್ತೆ ಹುಟ್ಟಬೇಕಾದರೆ ನೀವು ಇದನ್ನೆಲ್ಲಾ ಸಹಿಸಲೇ ಬೇಕು.. ಕಣ್ಣೀರುಡುತ್ತಲೇ ಧೈರ್ಯ ತುಂಬಿದ ಧೃವ ಸರ್ಜಾ..

ಚುರು ಸರ್ಜಾ ಕುಟುಂಬದಲ್ಲಿ‌ ನೋವು ಮುಗಿಲು ಮುಟ್ಟಿದೆ.. ಯಾರೊಬ್ಬರಿಗೂ ಸಮಾಧಾನ ಮಾಡಲಾಗದಷ್ಟು ಪ್ರತಿಯೊಬ್ಬರ ಬಿಕ್ಕಿ ಬಿಕ್ಕಿ ಅಳುತ್ತಿದ್ದು.. ಚಿರು ಪಾರ್ಥೀವ ಶರೀರದ ಬಳಿ‌ ಕೂತಿದ್ದ ಮೇಘನಾ ಕುಸಿದು ಬಿದ್ದಿದ್ದಾರೆ.. ಆ ತಕ್ಷಣ ಮೇಘನಾ ತಾಯಿ, ಪ್ರಜ್ವಲ್ ದೇವರಾಜ್, ಹಾಗೂ ಧೃವ ಮೇಘನಾ ಅವರನ್ನು ಹಿಡಿದು ಕೂರಿಸಿ ಅತ್ತಿಗೆಗೆ ಕಣ್ಣೀರಿಡುತ್ತಲೇ ಧೈರ್ಯ ತುಂಬಿದ್ದಾರೆ ಧೃವ ಸರ್ಜಾ..

ಹೌದು ಯಾರು ಎಷ್ಟು ಸಮಾಧಾನ ಮಾಡಿದರೂ ಗಂಡನ ಕಳೆದುಕೊಂಡ ನೋವು ಮಾತ್ರ ಕಡಿಮೆಯಾಗುವುದಿಲ್ಲ.. ಅದರಲ್ಲೂ ಮೇಘನಾ ತುಂಬು ಗರ್ಭಿಣಿಯಾಗಿದ್ದು ಮಗುವಿನ ಬಗ್ಗೆ ಸಾವಿರಾರು ಕನಸು ಕಂಡಿರುತ್ತಾರೆ.. ಈ ಸಮಯದಲ್ಲಿ ಜೊತೆಯಾಗಿ ಇರಬೇಕಾದ ಪತಿಯೇ ಇಲ್ಲವಾದಾಗ ಆ ನೋವು ಯಾರಿಗೂ ಬೇಡವೆನ್ನುವಷ್ಟಿರುತ್ತದೆ..

ಚಿರು ಪಕ್ಕದಲ್ಲಿ ಕೂತ ಮೇಘನಾ ಎಲ್ಲವನ್ನು ನೆನಪಿಸಿಕೊಂಡರೋ ಏನೋ..‌ಇದ್ದಕ್ಕಿದ್ದ ಹಾಗೆ ಕುಸಿದು ಕೆಳಗೆ ಬಿದ್ದಿದ್ದಾರೆ.. ಆ ತಕ್ಷಣ ಪಕ್ಕದಲ್ಲಿಯೇ ಇದ್ದ ಮೇಘನಾ ಅವರ ತಾಯಿ, ಪ್ರಜ್ವಲ್ ದೇವರಾಜ್, ಹಾಗೂ ಧೃವ ಸರ್ಜಾ ಮೇಘನಾರನ್ನು ಹಿಡಿದು ಚೇರ್ ಮೇಲೆ ಕೂರಿಸಿದ್ದಾರೆ..

ಆ ಬಳಿಕ ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡಿರುವ ಈ ಸಮಯದಲ್ಲಿ ಆಘಾತವಾಗಬಾರದೆಂದು ಧೃವ ಸರ್ಜಾರೆ ಕೈ ಹಿಡಿದು ಅತ್ತಿಗೆಗೆ ಧೈರ್ಯ ತುಂಬುತ್ತಿದ್ದಾರೆ.. ಅಣ್ಣ ಮತ್ತೆ ಹುಟ್ಟಿ ಬರಬೇಕು ತಾನೆ.. ನೀವು ದಯವಿಟ್ಟು ಧೈರ್ಯವಾಗಿರಿ.. ಅವನು ಮತ್ತೆ ಬರ್ತಾನೆ. ನೀವ್ ಈರೀತಿ ಅಳೋದು ಅವನಿಗೆ ಇಷ್ಟವಿರಲಿಲ್ಲ.. ಸ್ವಲ್ಪ ಗಟ್ಟಿ ಮನಸ್ಸು ಮಾಡಿಕೊಳ್ಳಿ‌ ಎಂದು ಅತ್ತಿಗೆಗೆ ಧೈರ್ಯ ಹೇಳುತ್ತಿದ್ದರೂ ಸಹ ಧೃವನ ಕಣ್ಣಲ್ಲೇ ಕಣ್ಣೀರು ಸುರಿಯುತ್ತಲೇ ಇತ್ತು..

ನಿಜಕ್ಕೂ ಇಂತಹ ಸಂದರ್ಭ ಯಾರಿಗೂ ಬರಬಾರದು.. ಜೇನುಗೂಡಿನಂತಿದ್ದ ಕುಟುಂಬ… ಅದ್ಯಾರ ಕಣ್ಣು ಬಿತ್ತೋ.. ಜವರಾಯ ಜೇನುಗೂಡಿಗೆ ಕಲ್ಲು ಹೊಡೆದುಬಿಟ್ಟ.. ಮೇಘನಾರಿಗೆ ಇದೆಲ್ಲವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಆ ದೇವರು..