ಗಂಡನ ತಲೆಯ ಬಿಗಿಯಾಗಿ ಹಿಡಿದು ಪಕ್ಕದಲ್ಲೇ ಕೂತ ಮೇಘನಾ.. ತಲೆ ಚೆಚ್ಚಿಕೊಂಡ ಧೃವ ಸರ್ಜಾ..

ಚಿರಂಜೀವಿ ಸರ್ಜಾ ಅವರ ಈ ಅಕಾಲಿಕ ಸಾವಿಗೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ.. ಬದುಕಿ‌ಬಾಳಬೇಕಾದ ವಯಸ್ಸು.. ಕೇವಲ 39ಕ್ಕೆ ಜೀವನದ ಪಯಣ ಮುಗಿಸಿ ಹೋದ ಚಿರಂಜೀವಿ ಸರ್ಜಾ.. ಹೋಗುತ್ತಾ ಪ್ರತಿಯೊಬ್ಬರೂ ಕಣ್ಣೀರು ಹಾಕುವಂತೆ ಮಾಡಿ ಹೋಗಿದ್ದಾರೆ.. ಅಷ್ಟು ಒಳ್ಳೆಯ ವ್ಯಕ್ತಿತ್ವದವರಾಗಿದ್ದರು..

ಅವರು ಇಲ್ಲವಾದ ನೋವು ಪ್ರತಿಯೊಬ್ಬರಲ್ಲೂ ಕಾಡುತ್ತಿದೆ.. ಆದರೆ ಚಿರು ಅವರ ಪತ್ನಿ ಮೇಘನಾ ಹಾಗೂ ಚಿರು ಅವರ ತಾಯಿಗೆ, ಅವರ ಕುಟುಂಬದವರಿಗೆ ಆಗುತ್ತಿರುವ ನೋವು ಮಾತ್ರ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ..

ಮೇಘನಾ 4 ತಿಂಗಳ‌ ಗರ್ಭಿಣಿ..‌ ಇನ್ನೈದು ತಿಂಗಳು ಕಳೆದರೆ ಹೊಸ ಜೀವವೊಂದು ತಮ್ಮಿಂದ ಭೂಮಿಗೆ ಕಾಲಿಡುತ್ತಿದೆ ಎಂಬ ಸಂತಸದ ಸುದ್ದಿಯನ್ನು ಆ ದಂಪತಿ ಎಷ್ಟು ಆನಂದಿಸಿದ್ದರೋ.. ಮುಂದಿನ ಭವಿಷ್ಯದ ಬಗ್ಗೆ ಅದೆಷ್ಟು ಕನಸು ಕಂಡಿದ್ದರೋ.. ಆ ದೇವನೂ ಒಮ್ಮೊಮ್ಮೆ ಕಲ್ಲು ಮನಸ್ಸಿನವನಾಗಿ ಬಿಡುತ್ತಾನೆ ಎನಿಸುತ್ತದೆ.. ಚಿರಂಜೀವಿ ಎಂಬ ಹೆಸರಿಟ್ಟು ಅಲ್ಪಾಯುಷ್ಯ ಕೊಟ್ಟುಬಿಟ್ಟ ಆ ಭಗವಂತ..

ಚಿರಂಜೀವಿಗೆ ರಾತ್ರಿಯೇ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿತ್ತು.. ಇಂದು ಮೂರು ಬಾರಿ ಪಿಡ್ಸ್ ಬಂದಿತ್ತು ಎನ್ನಲಾಗಿದೆ.. ಆನಂತರ ಚಿರಂಜೀವಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.. ಆಸ್ಪತ್ರೆಯಲ್ಲಿ ಪರೀಕ್ಷಿಸಿ‌ ನೋಡುವಷ್ಟರಲ್ಲಿ ಚಿರಂಜೀವಿ ಇನ್ನಿಲ್ಲವಾಗಿದ್ದರು..‌ ಆ ಕ್ಷಣದಿಂದಲೂ ಮೇಘನಾ ಅವರು ಗಂಡನನ್ನು‌ ಬಿಟ್ಟು ಒಂದಿಂಚು ಹೋಗದೆ ಗಂಡನ ತಲೆಯನ್ನು ಬಿಗಿಯಾಗಿ‌ ಹಿಡಿದು ಕೂತುಬಿಟ್ಟಿದ್ದರು.‌. ಆ ಹೆಣ್ಣು ಮಗಳ ನೋವು ಯಾವ ಶತ್ರುವಿಗೂ ಬೇಡವೆನ್ನುವಂತಿತ್ತು..

ಗರ್ಭಿಣಿಯಾದ್ದರಿಂದ ಮೇಘನಾರನ್ನು ಎಷ್ಟು ಒತ್ತಾಯ ಮಾಡಿ ಮನೆಗೆ ಕಳುಹಿಸಲು ಪ್ರಯತ್ನ ಪಟ್ಟರೂ ಆಕೆ ಹೋಗಲೇ ಇಲ್ಲ.. ಕೊನೆಗೆ ಮನೆಗೆ ಪಾರ್ಥೀವ ಶರೀರ ತಂದ ಬಳಿಕವೂ ಗಂಡನನ್ನು ಬಿಟ್ಟು ಒಂದಿಂಚು ಅಲುಗಾಡದೆ ಕಣ್ಣೀರು ಹಾಕುತ್ತಾ ನಿಂತೇ ಇದ್ದರು.. ಕೊನೆಗೆ ಧೃವ ಸರ್ಜಾ ಹಾಗೂ ದರ್ಶನ್ ಅವರು ಮೇಘನಾರನ್ನು ಒತ್ತಾಯ ಮಾಡಿ ಕೈ ಮುಗಿದು ಮನೆಯೊಳಗೆ ಹೋಗಮ್ಮಾ ಎಂದು ಒಳಕ್ಕೆ ಕಳುಹಿಸಿದ್ದರು..

ನೀರು ಕುಡಿದು ಮತ್ತೆ ಎರಡೇ ನಿಮಿಷಕ್ಕೆ ಮತ್ತೆ ಗಂಡನ ಬಳಿಯೇ ನಿಂತರು ಮೇಘನಾ.. ಇತ್ತ ಪ್ರಾಣಕ್ಕೆ ಪ್ರಾಣ ಎನ್ನುತ್ತಿದ್ದ ಅಣ್ಣನನ್ನು ಕಳೆದುಕೊಂಡ ಧೃವ ಸರ್ಜಾ ಅಣ್ಣನನ್ನು ಅಪ್ಪಿ ತಲೆ ಚೆಚ್ಚಿಕೊಂಡು ಅಳುತ್ತಿದ್ದದ್ದನ್ನು ನೋಡಿದರೆ ಎಂತವರಿಗೂ ಮನವೂ ಕಲಕುವಂತಿತ್ತು.. ಇತ್ತ ಮೇಘನಾ ಹಾಗೂ ಚಿರು ಅವರದ್ದು 10 ವರ್ಷದ ಪ್ರೀತಿ.. ಎರಡು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು.. ಮಧ್ಯಾಹ್ನ ಜೊತೆಯಲ್ಲಿ ಮಾತನಾಡಿದ ಗಂಡ ಸಂಜೆಯಾದರೆ ಇಲ್ಲ ಎಂದರೆ ಹೇಗಾಗಬೇಕು.. ಅದರಲ್ಲೂ ಗರ್ಭಿಣಿಯ ಮನಸ್ಸು ಅದೆಷ್ಟು ನೊಂದಿರಬೇಕು.. ಆ ಭಗವಂತ ಅವರಿಗೆ ಗಟ್ಟಿ ಮನಸ್ಸು ಕೊಟ್ಟು ಬಿಡಲಿ.. ದುಃಖವನ್ನು ತಡೆಯುವ ಶಕ್ತಿ ನೀಡಿ ಬಿಡಲಿ..