ಗುರುತೇ ಸಿಗದಷ್ಟು ಬದಲಾಗಿರುವ ಕನ್ನಡದ ಖ್ಯಾತ ನಟಿ.. ಏನಾಗಿದೆ ಗೊತ್ತಾ..

ಕನ್ನಡ ಚಿತ್ರರಂಗಕ್ಕೆ ಬೇರೆ ಭಾಷೆಗಳಿಂದ ಹಲವಾರು ಕಲಾವಿದರು ಎಂಟ್ರಿ ಕೊಟ್ಟಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಿಂದ ಕನ್ನಡಕ್ಕೆ ಬಂದು, ಯಶಸ್ಸು ಗಳಿಸಿದ್ದಾರೆ. ಅಂತಹ ನಟಿಯರಲ್ಲಿ ಒಬ್ಬರು ಮೀರಾ ಜಾಸ್ಮಿನ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಮೌರ್ಯ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೂಲತಃ ಕೇರಳದ ಒಂದು ಹಳ್ಳಿಯವರು ಮೀರಾ. ಮಲಯಾಳಂ ಅಸಿಸ್ಟಂಟ್ ಡೈರೆಕ್ಟರ್ ಒಬ್ಬರು ಮೀರಾರನ್ನು ಗುರುತಿಸಿ ನಟನೆಯತ್ತ ಕರೆತಂದರು.

2001 ರಲ್ಲಿ ಸೂತ್ರಧಾರನ್ ಸಿನಿಮಾದಲ್ಲಿ ನಟಿಸುವ ಮೂಲಕ ನಟನೆ ಶುರು ಮಾಡಿದರು. 2004 ರಲ್ಲಿ ತೆರೆಕಂಡ ಮಲಯಾಳಂ ಸಿನಿಮಾ ಪಾಡಂ ಒನ್ನು : ಒರು ವಿಲಪಂ ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಅದೇ ವರ್ಷ ಮೌರ್ಯ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಮಲಯಾಳಂ, ತಮಿಳು ಹಾಗು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಮೀರಾ ಜಾಸ್ಮಿನ್. ಕನ್ನಡದಲ್ಲಿ ಇವರು ನಟಿಸಿದ್ದು ಕಡಿಮೆ ಸಿನಿಮಾಗಳಲ್ಲಾದರು ವೀಕ್ಷಕರ ಮನ ಗೆದ್ದಿದ್ದರು.

2014 ರಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಅನಿಲ್ ಎಂಬುವರೊಡನೆ ವಿವಾಹವಾದರು ಮೀರಾ. ಮದುವೆ ಬಳಿಕ ವಿದೇಶಕ್ಕೆ ಹಾರಿದ್ದರು ಮೀರಾ, ಆದರೆ ಕೆಲವು ವರ್ಷಗಳ ನಂತರ, ಗಂಡನಿಂದ ದೂರವಾಗಿ, ಭಾರತಕ್ಕೆ ಮರಳಿ ಬಂದಿದ್ದಾರೆ. ಆದರೆ ದಾಂಪತ್ಯ ಜೀವನದ ವಿಚಾರವಾಗಿ ಇವರು ಎಲ್ಲಿಯೂ ಮಾತನಾಡಿರಲಿಲ್ಲ. ಮೀರಾ ಜಾಸ್ಮಿನ್ ಅವರು ಮದುವೆ ಬಳಿಕ ದೇಹದ ತೂಕ ಹೆಚ್ಚಿಸಿಕೊಂಡಿದ್ದರು, ಆದರೆ ಕೆಲ ಸಮಯದ ಹಿಂದೆ, ತೂಕ ಇಳಿಸಿಕೊಂಡು, ಸ್ಲಿಮ್ ಆಗಿ, ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದರು.

ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಬಳಿಕ ಮೀರಾ ಜಾಸ್ಮಿನ್ ಅವರು ಮಲಯಾಳಂ ಸಿನಿಮಾ ಒಂದರ ಮೂಲಕ ಮತ್ತೊಮ್ಮೆ ಚಿತ್ರರಂಗಕ್ಕೆ ಕಂಬ್ಯಾಕ್ ಸಹ ಮಾಡಿದರು, ಆದರೆ ಆ ಸಿನಿಮಾ ಬಳಿಕ ಮೀರಾ ಜಾಸ್ಮಿನ್ ಅವರಿಗೆ ಹೇಳಿಕೊಳ್ಳುವಷ್ಟು ಯಶಸ್ಸು ಅಥವಾ ಅವಕಾಶಗಳು ಎರಡು ಸಹ ಸಿಗಲಿಲ್ಲ. ಆದರೆ ಮೀರಾ ಜಾಸ್ಮಿ ಅವರು ಫೋಟೋಶೂಟ್ ಗಳ ಮೂಲಕ ಆಗಾಗ ಸುದ್ದಿಯಾಗುತ್ತಿದ್ದಾರೆ. ಪ್ರಸ್ತುತ ಮೀರಾ ಜಾಸ್ಮಿನ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ಬಾರಿ ಮೀರಾ ಜಾಸ್ಮಿನ್ ಅವರು ಇನ್ನು ಹೆಚ್ಚು ತೆಳ್ಳಗೆ ಆಗಿದ್ದು, ಇದನ್ನು ನೋಡಿ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಎಲ್ಲರೂ ಸಹ ಶಾಕ್ ಆಗಿದ್ದಾರೆ. ಕೆಲವರಂತೂ ಯಾಕಿಷ್ಟು ಸಣ್ಣ ಆಗಿದ್ದಾರೆ, ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಆಗಿ, ಕಾಯಿಲೆ ಬಂದಿರಬಹುದಾ ಎಂದೇ ಹೇಳುತ್ತಿದ್ದಾರೆ. ಮೀರಾ ಜಾಸ್ಮಿನ್ ಅವರಿಗೆ ನಿಜಕ್ಕೂ ಆರೋಗ್ಯದಲ್ಲಿ ಏನಾದರೂ ಆಗಿದೆಯಾ ಎನ್ನುವ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದ್ದು, ಇದರ ಬಗ್ಗೆ ನಟಿ ಯಾವುದೇ ಉತ್ತರ ನೀಡಿಲ್ಲ.