ಸೋಮವಾರಪೇಟೆಯಲ್ಲಿ ನೆರವೇರಿತು ಮೆಬಿನಾ ಅಂತ್ಯಕ್ರಿಯೆ.. ಆದರೆ…

ದೇವರು ಒಂದರ ಹಿಂದೆ ಕಷ್ಟಗಳನ್ನು ಕೊಟ್ಟರೆ ಹೇಗೋ ತಡೆದುಕೊಳ್ಳಬಹುದು.. ಇಂದಲ್ಲಾ ನಾಳೆ ನೆಮ್ಮದಿ ಸಿಗಬಹುದೆಂದುಕೊಳ್ಳಬಹುದು.. ಆದರೆ ಜೊತೆಯಾಗಿ ನಿಂತು ಕಷ್ಟಗಳನ್ನು ಎದುರಿಸಬೇಕಾದವರನ್ನೇ ಒಬ್ಬಬ್ಬರಾಗಿ ಕಳೆದುಕೊಂಡರೆ ಯಾವ ಶತ್ರುವಿಗೂ ಇಂತಹ ಪರಿಸ್ಥಿತಿ ಬರಬಾರದೆನಿಸುತ್ತದೆ.. ಸುವರ್ಣ ವಾಹಿನಿಯ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4 ರ ವಿಜೇತೆ ಮೆಬಿನಾ ಮೊನ್ನೆ ಮಂಡ್ಯದ ನಾಗಮಂಗಲ ಬಳಿಯ ಎನ್ ಹೆಚ್ 75 ರಲ್ಲಿ ನಡೆದ ಅಪಘಾತದಲ್ಲಿ ಜೀವ ಕಳೆದುಕೊಂಡರು.. ಮೆಬಿನಾ ಸಾವಿಗೆ ಸ್ನೇಹಿತರು ಆಪ್ತರು ಎಲ್ಲರೂ ಕಂಬನಿ ಮಿಡಿದಿದ್ದಾರೆ..

ಲಾಕ್ ಡೌನ್ ಇದ್ದ ಕಾರಣ ಅಜ್ಜಿಯನ್ನು ನೋಡದೇ ಬೆಂಗಳೂರಿನಲ್ಲಿಯೇ ಇದ್ದ ಮೆಬಿನಾ.. ಮೊನ್ನೆ ಸೋಮವಾರಪೇಟೆಯಲ್ಲಿದ್ದ ಅಜ್ಜಿಯನ್ನು ನೋಡಬೇಕು ಎಂದು ತೆರಳುತ್ತಿದ್ದರು.. ಆದರೆ ವಿಧಿಯ ನಿರ್ಣಯವೇ ಬೇರೆ ಇತ್ತು.. ಮೊನ್ನೆ ಸಂಜೆ 4‌.30 ರ ವೇಳೆ ಮಂಡ್ಯ ಬಳಿ ಕಾರು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತವಾದ ರಬಸಕ್ಕೆ ಸ್ಥಳದಲ್ಲಿಯೇ ಮೆಬಿನಾ ಜೀವ ಕಳೆದುಕೊಂಡಿದ್ದರು.. ಅತ್ತ ಜೊತೆಯಲ್ಲಿ ಬರುತ್ತಿದ್ದ ಮತ್ತಿಬ್ಬರನ್ನು ಮಂಡ್ಯದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆನಂತರ ಬೆಂಗಳೂರಿಗೆ ರವಾನಿಸಲಾಗಿತ್ತು..

ಅಜ್ಜಿಯ ನೋಡಬೇಕೆನ್ನುತ್ತಿದ್ದ ಮೆಬಿನಾ ಅಜ್ಜಿಯನ್ನು ನೋಡಲಾಗಲಿಲ್ಲ.. ಕೊನೆಗೆ ಅವರ ಅಂತ್ಯಕ್ರಿಯೆಯನ್ನು ಅಜ್ಜಿಯ ಊರಾದ ಸೋಮವಾರಪೇಟೆಯಲ್ಲಿಯೇ ನೆರವೇರಿಸಲಾಯಿತು.. ಆದರೆ ದುರ್ವಿಧಿ ಎಂದರೆ ಕಳೆದ ಮೂರು ವರ್ಷದ ಹಿಂದೆಯಷ್ಟೇ ತಂದೆಯೂ ಕೂಡ ಸಾವನಪ್ಪಿದ್ದರು.. ತಂದೆಯನ್ನು ಕಳೆದುಕೊಂಡ ಮೆಬಿನಾ ಧೃತಿಗೆಡದೆ ಮನೆಯ ಜವಾಬ್ದಾರಿ ತೆಗೆದುಕೊಂಡು ಆನಂತರ ತಾಯಿಯನ್ನು ನಾನೇ ಸಾಕುತ್ತೇನೆಂದು ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ನೆಲೆಸಿದ್ದರು ಮೆಬಿನಾ.. ನನ್ನ ಅಪ್ಪ ನನ್ನ ಗುರು.. ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ಅವರು ನನಗೆ ದಿ ಬೆಸ್ಟ್ ಫಾದರ್ ಎನ್ನುತ್ತಿದ್ದರು.. ಆದರೆ ಬದುಕಿ ಬಾಳಬೇಕಾದ ವಯಸ್ಸಿನಲ್ಲಿ ದಾರುಣ ಅಂತ್ಯಕ್ಕೆ ಸಾಕ್ಷಿಯಾಗಿ ಅಪ್ಪನ ಬಳಿಯೇ ಹೊರಟು ಹೋದಳು..

ಅತ್ತ ಕಣ್ಣಮುಂದೆಯೇ ಗಂಡ ಹೋದದ್ದಾಯಿತು.. ಇದೀಗ ಬದುಕಿ ಬಾಳಬೇಕಾದ ಮಗಳನ್ನೂ ಕಳೆದುಕೊಂಡ ಆ ತಾಯಿಯ ರೋದನೆ ಹೇಳತೀರದು.. ಇದ್ದ ಹತ್ತಿರದವರು ಎಂದರೆ ಅದು ಅಮ್ಮ ಹಾಗೂ ಅಜ್ಜಿ ಮಾತ್ರ.. ಅಂತ್ಯಕ್ರಿಯೆ ವೇಳೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.. ಜೀವನದಲ್ಲಿ ಏನಾದರೂ ಸಾಧಿಸುವೆ ಎಂದು ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದ ಮೆಬಿನಾ ಸ್ಥಿರವಾಗಿ ಮಲಗಿಬಿಟ್ಟಳು.. ಗಂಡ ಹಾಗೂ ಮಗಳು ಇಬ್ಬರನ್ನೂ ಕಳೆದುಕೊಂಡ ಆ ತಾಯಿಗೆ ನೋವು ತಡೆಯುವ ಶಕ್ತಿ ನೀಡಲಿ ಭಗವಂತ..