ನಾಳೆಯೇ ದೇವಸ್ಥಾನದಲ್ಲಿ ನಟಿ ಮಯೂರಿ ಮದುವೆ..

ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ‌ ಕಿರುತೆರೆಗೆ ಪಾದಾರ್ಪಣೆ ಮಾಡಿ ಪ್ರಖ್ಯಾತಿ ಪಡೆದಿದ್ದ ನಟಿ ಮಯೂರಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಹೌದು ಅಶ್ವಿನಿ‌ ನಕ್ಷತ್ರ ಧಾರಾವಾಹಿಯಲ್ಲಿ ಅಶ್ವಿನಿ ಪಾತ್ರದ ಮೂಲಕ ಜನರ ಮನಗೆದ್ದಿದ್ದ ಮಯೂರಿಗೆ ನಂತರ ಸ್ಯಾಂಡಲ್ವುಡ್ ನಲ್ಲಿ ಬಹಳಷ್ಟು ಅವಕಾಶ ಅರಸಿ ಬಂದವು.. ಮೊದಲ ಸಿನಿಮಾದಲ್ಲಿಯೇ ನಟ ಅಜಯ್ ರಾವ್ ಅವರ ಜೊತೆಗೆ ಕೃಷ್ಣ ಲೀಲಾ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ ಪಾದಾರ್ಪಣೆ ಮಾಡಿದ ನಟಿ ಮಯೂರಿ ನಂತರದಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರು..

ಇದೀಗ ಲಾಕ್ ಡೌನ್ ನಡುವೆಯೇ ಅದರಲ್ಲೂ ನಾಳೆಯೇ ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಹೌದು ತಮ್ಮ ಬಹುಕಾಲದ ಗೆಳೆಯ ಅರುಣ್ ಅವರ ಜೊತೆ ನಾಳೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು ಮದುವೆ ದೇವಸ್ಥಾನದಲ್ಲಿ ಸರಳವಾಗಿ ನಡೆಯಲಿದೆ..

ಅರುಣ್ ಖಾಸಗಿ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದು, ಅರುಣ್ ಹಾಗೂ ಮಯೂರಿ 10 ವರ್ಷಗಳಿಂದ ಪ್ರೀತಿಸುತ್ತಿದ್ದು ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ್ದು ನಾಳೆ ಕುಟುಂಬಸ್ಥರು ಹಾಗೂ ಕೆಲವೇ ಕೆಲ ಆಪ್ತರ ನಡುವೆ ಸರಳ ಹಾಗೂ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭ ನೆರವೇರಲಿದೆ‌..

ಅಶ್ವಿನಿ‌ ನಕ್ಷತ್ರ ಧಾರಾವಾಹಿ ನಂತರ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಅವಕಾಶ ಸಿಕ್ಕ ಕಾರಣ.. ಮತ್ತೆ ಕಿರುತೆರೆಗೆ ಬಾರದ ಮಯೂರಿ, ರುಸ್ತುಂ, ಇಷ್ಟಕಾಮ್ಯ ಸಿನಿಮಾಗಳಲ್ಲಿ ಕಾಣಿಸಿಕೊಂಡರು.ಮ್ ಇದೀಗ ಮೌನಂ ಸಿನಿಮಾದಲ್ಲಿ ಅಭಿನಯಿಸಿದ್ದು ಬಿಡುಗಡೆಯಾಗಬೇಕಿದೆ..