ಕಣ್ಣೀರು ತರಿಸುವ ನಟಿ ಮಯೂರಿಯ ಕತೆ.. ಮನಕಲಕುತ್ತದೆ

ಸ್ಯಾಂಡಲ್ವುಡ್ ನಲ್ಲಿ ಇದೀಗ ಕಳೆದ ಎರಡು ದಿನಗಳಿಂದ ಬಾರಿ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ವೀಲ್ ಚೇರ್ ರೋಮಿಯೋ. ಹಲವಾರು ಹಿಟ್ ಸಿನಿಮಾಗಳಿಗೆ ಸಂಭಾಷಣೆ ಬರೆಡಿ ಖ್ಯಾತಿ ಪಡೆದಿರುವ ನಟರಾಜ್ ಅವರು ಇದೆ ಮೊದಳ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದಾರೆ. ನಟರಾಜ್ ಅವರ ಮೊದಲ ನಿರ್ದೇಶನದ ಸಿನಿಮಾ ವೀಲ್ ಚೇರ್ ರೋಮಿಯೋ. ಈ ಸಿನಿಮಾದ ನಾಯಕ ನಟನಾಗಿ ರಾಮ್ ಚೇತನ್, ಹಾಗೂ ನಾಯಕಿಯಾಗಿ ನಟಿ ಮಯೂರಿ ಅವರು ಬಣ್ಣ ಹಚ್ಚಿದ್ದಾರೆ. ವೀಲ್ ಚೇರ್ ರೋಮಿಯೋ ಸಿನಿಮಾ ಮೇ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

ಇದೆ ಮೊದಲ ಬಾರಿಗೆ ನಟರಾಜ್ ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ಜಿಯೋಗ್ರಾಫ್ಹಿ ಚಾನಲ್ ನಲ್ಲಿ ಖಂಡ ಒಂದು ದೃಶ್ಯವನ್ನು ಇಟ್ಟುಕೊಂಡು ಸಿನಿಮಾಡ ಕಥೆಯಾಗಿ ಬರೆದಿರುವುದಾಗಿ ನಿರ್ದೇಶಕ ನಟರಾಜ್ ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟಿ ಮಯೂರಿ ಹಾಗೂ ನಟ ರಾಮ್ ಚೇತನ್ ಇಬ್ಬರೂ ಸಹ ಅದ್ಭುತವಾಗಿ ನಟಿಸಿದ್ದಾರೆ. ಇದೆ ಮೊದಲ ಬಾರಿಗೆ ನಟ ರಾಮ್ ಚೇತನ್ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಮಯೂರಿ ಅವರ ನಟನೆಯ ಬಗ್ಗೆ ಹೇಳಲು ಒಂದು ಮಾತಿಲ್ಲ. ಈಗಾಗಲೇ ತಮ್ಮ ನಟನೆಯ ಮೂಲಕ ನಟಿ ಮಯೂರಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ವೀಲ್ ಚೇರ್ ರೋಮಿಯೋ ಸಿನಿಮಾದ ಮೂಲಕ ಮತ್ತಷ್ಟು ಹೃದಯಗಳನ್ನು ಕದಿಯಲು ಮುಂದಾಗಿದ್ದಾರೆ ನಟಿ ಮಯೂರಿ.

ವೀಲ್ ಚೇರ್ ರೋಮಿಯೋ ಸಿನಿಮಾದ ಟೈಟಲ್ ನಂತೆ ಈ ಸಿನಿಮಾದಲ್ಲಿ ನಾಯಕನಟ ವೀಲ್ ಚೇರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ರಾಮ್ ಚೇತನ್ ಈ ಸಿನಿಮಾದಲ್ಲಿ ಕಾಲು ಕೈ ಸ್ವಾಧೀನ ಇಲ್ಲದ ಹುಡುಗನ ಪಾತ್ರದಲ್ಲಿ ಹಾಗೂ ಕಣ್ಣಿಲ್ಲದ ವೇಶ್ಯೆಯ ಪಾತ್ರದಲ್ಲಿ ನಟಿ ಮಯೂರಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಂಗಾಯಣ ರಘು ಮತ್ತು ತಬಲಾ ನಾಣಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗಿದೆ. ಈ ಸಿನಿಮಾ ಮೇ 27 ಕ್ಕೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಮನುಷ್ಯನಿಗೆ ಒಂದೆಲ್ಲಾ ಒಂದು ಆಸೆ ಇದೆ ಇರುತ್ತದೆ. ಕೆಲವರಿಗೆ ಹಣದ ಆಸೆ, ಕೆಲವರಿಗೆ ಪ್ರೀತಿಯ ಆಸೆ ಹೀಗೆ ಹಲವಾರು ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಸಿನಿಮಾದಲ್ಲಿ ಕೂಡ ಈ ರೀತಿಯ ಒಂದು ಕಥೆಯನ್ನು ಹೊಂದಿದೆ. ಕೈ ಕಾಲು ಸ್ವಾಧೀನ ಕಳೆದುಕೊಂಡ ನಾಯಕ ಉಲ್ಲಾಸ್ ಸದಾ ವೀಲ್ ಚೇರ್ ನಲ್ಲಿಯೇ ಇರಬೇಕು. ತನ್ನ ಸ್ವಂತ ಕೆಲಸಗಳನ್ನು ಸಹ ತಾನು ಮಾಡಿಕೊಳ್ಳದಂತಹ ಪರಿಸ್ಥಿಯಲ್ಲಿರುತ್ತಾನೆ. ತನ್ನ ಮಗ ಅಂಗವಿಕಲನಾದರೂ ಆ ಭಾವನೆ ಅವನಿಗೆ ಬರದಂತೆ ಬೇರೆ ಮಕ್ಕಳಂತೆ ತನ್ನ ಮಗನನ್ನು ಜೋಪಾನ ಮಾಡಿ ನೋಡಿಕೊಳ್ಳುತ್ತಾನೆ ನಾಯಕ ಉಲ್ಲಾಸ್ ನ ತಂದೆ. ಇನ್ನು ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಲು ನಿರ್ಧರಿಸಿ ಹುಡುಗಿ ಹುಡುಕುತ್ತಾರೆ, ಆದರೆ ಉಲ್ಲಾಸ್ ನಿಗೆ ಯಾರೊಬ್ಬರೂ ಹೆಣ್ಣು ನೀಡಲು ಮುಂದಾಗುವುದಿಲ್ಲ.

ಈ ವೇಳೆ ತನ್ನ ಮಗನ ವಯೋಸಹಜ ಮನೋಕಾಮನವನ್ನು ತೀರಿಸಲು, ತಂದೆ ಮಗನನ್ನು ಒಬ್ಬ ಹೆಂಗಸಿನ ಬಳಿ ಕಳುಹಿಸುತ್ತಾನೆ. ಇಲ್ಲಿ ಟ್ವಿಸ್ಟ್ ಏನೆಂದರೆ ಆ ಹೆಂಗಸಿಗೆ ಕಣ್ಣು ಕಾಣುವುದಿಲ್ಲ. ಅಲ್ಲಿಂದ ಈ ಚಿತ್ರದ ಕಥೆ ಮುಂದುವರೆಯುತ್ತದೆ. ನಮ್ಮ ರೋಮಿಯೋಗೆ ಜ್ಯೂಲಿಯಟ್ ಸಿಗುತ್ತಾಳಾ.. ಅವನ ಆಸೆ ಪೂರ್ಣವಾಗುತ್ತದಾ? ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿನಿಮಾ ನೋಡಿದರೆ ಸಿಗುತ್ತದೆ. ಇನ್ನು ಈ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ನಟ ರಾಮ್ ಚೇತನ್ ಹಾಗೂ ಮಯೂರಿ ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮೂಲಕ ನಿರ್ದೇಶಕ ನಟರಾಜ್ ಕನ್ನಡ ಸಿನಿಮಾರಂಗಕ್ಕೆ ಒಂದು ಒಳ್ಳೆಯ ಸಿನಿಮಾ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.