ದೊಡ್ಡತನ ತೋರಿದ ಜೆಕೆ.. ತನ್ನ ಅಪ್ಪ ಅಮ್ಮನಿಂದ ಮಯೂರಿ ಕನ್ಯಾದಾನ ಮಾಡಿಸಿದ್ದೇಕೆ ಗೊತ್ತಾ?

ಕೆಲ ದಿನಗಳ ಹಿಂದಷ್ಟೇ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, 10 ವರ್ಷದ ಗೆಳೆಯ ಅರುಣ್ ಜೊತೆ ನೂತನ ಜೀವನ ಶುರು ಮಾಡಿದ್ದಾರೆ..

ಹೌದು ಕಳೆದ ಶುಕ್ರವಾರ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳ ವಾಗಿ ಆಪ್ತರ ಸಮ್ಮುಖದಲ್ಲಿ ಮಯೂರಿ ಹಾಗೂ ಅರುಣ್ ಅವರ ಮದುವೆ ಸಮಾರಂಭ ನೆರವೇರಿತು.. ಮದುವೆ ನಡೆದದ್ದು ಮಧ್ಯರಾತ್ರಿ 3 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ.. ಆ ಸಮಯದಲ್ಲಿ ಜೆಕೆ ಅವರ ಅಪ್ಪ ಅಮ್ಮ ಮದುವೆಗೆ ಬಂದದ್ದು ಆಶ್ಚರ್ಯ.. ಆದರೆ ಅಷ್ಟು ವಯಸ್ಸಾಗಿದ್ದರೂ ಆ ಸಮಯದಲ್ಲಿ ಮಯೂರಿ ಅವರ ಮದುವೆಗೆ ಬರಲು ಕಾರಣವಿದೆ..

ಹೌದು ಮಯೂರಿ ಅವರ ಮದುವೆಯಲ್ಲಿ ಮಯೂರಿ ಅವರನ್ನು ಕನ್ಯಾದಾನ ಮಾಡಿದ್ದು ಮತ್ಯಾರೂ ಅಲ್ಲ.. ಜೆಕೆ ಅವರ ಅಪ್ಪ ಅಮ್ಮನೇ.. ಹೌದು ಜೆಕೆ ಹಾಗೂ ಮಯೂರಿ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಸ್ನೇಹಿತರು.. ಇಬ್ಬರಿಗೂ ಆ ಧಾರಾವಾಹಿ ದೊಡ್ಡ ಬ್ರೇಕ್ ನೀಡಿತ್ತು.. ಆನಂತರ ಇಬ್ಬರೂ ತಮ್ಮದೇ ಆದ ಕೆರಿಯರ್ ರೂಪಿಸಿಕೊಂಡರು.. ಧಾರಾವಾಹಿ‌ ನಿಂತರೂ ಕೂಡ ಇವರಿಬ್ಬರ ಸ್ನೇಹ ಮುಂದುವರೆದಿತ್ತು.. ಇನ್ನು ಮಯೂರಿ ಅವರಿಗೆ ತಂದೆ ಇಲ್ಲ.. ಇಷ್ಟಕಾಮ್ಯ ಸಿನಿಮಾ ಸಮಯದಲ್ಲಿ ಮಯೂರಿ ಅವರ ತಂದೆ ತೀರಿಕೊಂಡಿದ್ದರು..

ಇದೀಗ ಮದುವೆ ಸಮಯದಲ್ಲಿ ಕನ್ಯಾದಾನ ಯಾರು ಮಾಡುವರು ಎಂದು ಚಿಂತಿಸುತ್ತಿದ್ದರು.. ಮಯೂರಿ ಅವರ ಸಂಬಂಧಿಕರೆಲ್ಲಾ ಇರುವುದು ಹುಬ್ಬಳ್ಳಿಯಲ್ಲಿ.. ಲಾಕ್ ಡೌನ್ ಇದ್ದ ಕಾರಣ ಮದುವೆಗೆ ಯಾರನ್ನೂ ಆಹ್ವಾನ ಮಾಡಿರಲಿಲ್ಲ.. ಅಪ್ಪನಿರಬೇಕಿತ್ತು ಎಂದು ಕಣ್ಣೀರು ಹಾಕಿದ್ದರಂತೆ ಮಯೂರಿ.. ಅದೇ ಸಮಯದಲ್ಲಿ ಜೆಕೆ ಫೋನ್ ಮಾಡಿದ್ದರು.. ಆದರೆ ಮಯೂರಿ ಅವರ ಮಾತಿನಲ್ಲಿ‌ ಬೇಸರವಿದ್ದದ್ದನ್ನು ಅರ್ಥ ಮಾಡಿಕೊಂಡು ವಿಷಯ ಏನೆಂದು ಕೇಳಿ ತಿಳಿದುಕೊಂಡಿದ್ದಾರೆ.. ಆತಕ್ಷಣ ಮತ್ತೇನು ಯೋಚಿಸದೆ ನಮ್ಮ ಅಪ್ಪ ಅಮ್ಮನಿಗೆ ನೀನು ಸಹ ಮಗಳೇ ಎಂದು ತಕ್ಷಣ ಅಮ್ಮನ ಕೈಗೆ ಫೋನ್ ಕೊಟ್ಟರಂತೆ.. ನಾವಿರುವಾಗ ನೀನ್ಯಾಕೆ ಯೋಚನೆ ಮಾಡ್ತೀಯಾ? ನಾವೇ ಧಾರೆ ಎರೆದು ಕೊಡ್ತೀವಿ, ಚಿಂತೆ ಮಾಡ್ಬೇಡ ಎಂದರಂತೆ ಜೆಕೆ ಅವರ ಅಮ್ಮ..

ಅದೇ ರೀತಿ ಮದುವೆಯದ ದಿನ ಮಧ್ಯರಾತ್ರಿ 1 ಗಂಟೆಗೆ ದೇವಸ್ಥಾನದಲ್ಲಿ ಜೆಕೆ ಹಾಗೂ ಅವರ ತಂದೆ ತಾಯಿ ಆಗಮಿಸಿ ಎಲ್ಲಾ ಶಾಸ್ತ್ರಗಳನ್ನು ಮುಂದೆ ನಿಂತು ನೆರವೇರಿಸಿ, ಕನ್ಯಾದಾನ ಮಾಡಿ ಕೊಟ್ಟಿದ್ದಾರೆ.. ಅಷ್ಟೇ ಅಲ್ಲದೇ ಮುಂಜಾನೆ 6 ರವರೆಗೂ ಇದ್ದು ಎಲ್ಲಾ ಶಾಸ್ತ್ರಗಳನ್ನು ಖುದ್ದು ಅವರೇ ಮಾಡಿದರು..

ಕೆಲವೊಮ್ಮೆ ಕಷ್ಟದ ಸಮಯದಲ್ಲಿ ಸಂಬಂಧಿಕರು ಆಡಿಕೊಳ್ಳುವ ಮನಸ್ಸಿನವರಾದರೂ.. ನಮ್ಮಗಳ ಕೈ ಹಿಡಿಯಲು ಸ್ನೇಹಿತರು ಇದ್ದೇ ಇರ್ತಾರೆ ಎನ್ನುವುದಕ್ಕೆ ಜೆಕೆ ಹಾಗೂ ಮಯೂರಿಯೇ ಸಾಕ್ಷಿ.. ಇವರ ಸ್ನೇಹ ಸದಾಕಾಲ ಹೀಗೆ ಇರಲಿ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಯೂರಿ ಹಾಗೂ ಅರುಣ್ ಅವರಿಗೆ ಶುಭಾಶಯಗಳು..