ಸಿನಿಮಾರಂಗದಲ್ಲಿ ಆದ ಅವಮಾನದ ಬಗ್ಗೆ ತಿಳಿಸಿದ ನಟಿ ಮಯೂರಿ..

ಚಿತ್ರರಂಗದಲ್ಲಿ ಲಿಂಗ ಬೇಧ, ಬಾಡಿ ಶೇಮಿಂಗ್ ಎನ್ನುವುದನ್ನು ಬಹುತೇಕ ಎಲ್ಲಾ ಕಲಾವಿದರು ಅನುಭವಿಸಿರುತ್ತಾರೆ. ಈಗೆಲ್ಲಾ ಬಾಡಿ ಸಾಮಾನ್ಯ ಜನರು ಸಹ ಬಾಡಿ ಶೇಮಿಂಗ್ ಅನುಭವಿಸಿರುವ ಘಟನೆಗಳು ನಡೆದಿವೆ. ಇದೀಗ ಮೂರ್ನಾಲ್ಕು ದಿನಗಳ ಹಿಂದೆ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಅವರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳುವ ಸಮಯದಲ್ಲಿ ವೈದ್ಯರಿಂದ ಆದ ಎಡವಟ್ಟಿನಿಂದ ಪ್ರಾಣ ಕಳೆದುಕೊಂಡರು. ಚೇತನಾ ರಾಜ್ ಅವರು ಇಲ್ಲವಾಗಿದ್ದು, ಅನೇಕ ಕಲಾವಿದೆಯರು ತಾವು ಅನುಭವಿಸಿದ ಬಾಡಿ ಶೇಮಿಂಗ್ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮಯೂರಿ ಅವರು ಬಾಡಿ ಶೇಮಿಂಗ್ ವಿಚಾರದಲ್ಲಿ ತಮಗಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

ನಟಿ ಮಯೂರಿ, ನಟನೆಯ ಜರ್ನಿ ಶುರು ಮಾಡಿದ್ದು ಕಿರುತೆರೆಯ ಮೂಲಕ, ಅಶ್ವಿನಿ ನಕ್ಷತ್ರ ಧಾರವಾಹಿಯ ಸಕ್ಸಸ್ ಇಂದ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು ಮಯೂರಿ. ಸಾಕಷ್ಟು ಸಿನಿಮಾಗಳ್ಲಲಿ ನಟಿಸಿ, ಮಯೂರಿ ಅವರು ಒಳ್ಳೆಯ ಹೆಸರು ಪಡೆದುಕೊಂಡರು. ಬಳಿಕ ಈಗ ಮದುವೆಯಾಗಿ, ಮಯೂರಿ ಅವರಿಗೆ ಒಂದು ಮಗು ಸಹ ಇದೆ. ಮಯೂರಿ ಅವರ ಮಗನ ಹೆಸರು ಆರವ್. ಚೇತನಾ ರಾಜ್ ಅವರ ಘಟನೆ ನಡೆದ ಬಳಿಕ ಮಯೂರಿ ಅವರು ಸಹ ಬಾಡಿ ಶೇಮಿಂಗ್ ವಿಚಾರದಲ್ಲಿ ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

“ಚಿತ್ರರಂಗದಲ್ಲಿರುವ ಬಹುತೇಕ ಎಲ್ಲರೂ ಸಹ, ಬಾಡಿ ಶೇಮಿಂಗ್ ಎದುರಿಸಿರುತ್ತಾರೆ. ಅವಮಾನ ಅನುಭವಿಸಿರುತ್ತಾರೆ..ಆದರೆ ನಮ್ಮನ್ನು ನಾವು ಇಷ್ಟಪಡಬೇಕು. ನಮ್ಮ ಮೇಲೆ ನಮಗೆ ಪ್ರೀತಿ ಇರಬೇಕು. ಮೊದಲು ನಮ್ಮನ್ನು ನಾವು ಒಪ್ಪಿಕೊಳ್ಳಬೇಕು, ಅದಷ್ಟು ಮಾಡಿದರೆ ಸಾಕು. ಕಲಾವಿದೆಯರು ಮಾತ್ರವಲ್ಲ, ಸಮಾಜದಲ್ಲಿ ಬಹುತೇಕ ಎಲ್ಲರೂ ಸಹ ಹೊರಗಿನ ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಈಗಿನ ಮಕ್ಕಳಲ್ಲಿ ಸಹ ಸಣ್ಣ ಇದ್ದರೆ ಚೆನ್ನಾಗಿ ಕಾಣಿಸುತ್ತಾರೆ ಎನ್ನುವ ಮನೋಭಾವ ಬೆಳೆದು ಬಂದಿದೆ. ಈ ರೀತಿಯ ಚಿಂತನೆಗಳು ಒತ್ತಡ ಹೆಚ್ಚಿಸುತ್ತದೆ. ಅದನ್ನು ಕಡಿಮೆ ಮಾಡಬೇಕು.

ನಾನು ಕೂಡ ಚಿತ್ರರಂಗಕ್ಕೆ ಬಂದಾಗ, ನೀನು ಒಬ್ಬ ನಟಿಯಾಗಿ, ಹೀರೋಯಿನ್ ಆಗಿ ಹೇಗಿರಬೇಕು ಎನ್ನುವುದನ್ನು ಕಳಿತುಕೊಳ್ಳಬೇಕು ಎಂದು ಹಲವರು ಹೇಳಿದ್ದಾರೆ. ಅದರಲ್ಲೂ ಒಬ್ಬ ನಿರ್ದೇಶಕರು, ನೀನು ಹೀರೋಯಿನ್ ಆಗಿ ಇರುವುದನ್ನು ಕಳಿತುಕೊಳ್ಳಿ ಎಂದು ಹೇಳಿದ್ದರು..”ಎಂದಿದ್ದಾರೆ ನಟಿ ಮಯೂರಿ. ಈ ಮೂಲಕ ತಾವು ಅನುಭವಿಸಿದ ಘಟನೆ ಹಂಚಿಕೊಂಡಿದ್ದಾರೆ. ಮದುವೆಯಾಗಿ ಮಗು ಹುಟ್ಟಿದ ಬಳಿಕ ಮಯೂರಿ ಅವರು ಸಿನಿಮಾದಲ್ಲಿ ನಟಿಸುವುದು ಸಹ ಕಡಿಮೆಯಾಗಿದೆ.

ಚೇತನಾ ಅವರ ಘಟನೆ ನಂತರ ಈ ವಿಚಾರಗಳ ಬಗ್ಗೆ ಚರ್ಚೆ ಹೆಚ್ಚಾಗಿದೆ. ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಮ್ಯಾ ಅವರು ಚೇತನಾ ರಾಜ್ ಅವರ ಘಟನೆ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸಿ, ಚಿತ್ರರಂಗದಲ್ಲಿ ವ್ಯವಸ್ಥೆ ಹೇಗಿದೆ ಎನ್ನುವ ಕರಾಳ ಸತ್ಯವನ್ನು ಇನ್ಸ್ಟಾಗ್ರಾಮ್ ಮೂಲಕ ವ್ಯಕ್ತಪಡಿಸಿದ್ದರು. ನಟರಿಗೆ ಯಾವುದೇ ಕಟ್ಟುಪಾಡು ಇಲ್ಲ, 60ನೇ ವಯಸ್ಸಿನಲ್ಲೂ, ಒಂದೊಂದು ಕೆನ್ನೆ 5ಕೆಜಿ ಇದ್ದರು ಸಹ ಅವರು ಹೀರೋ ಆಗಿ ನಟಿಸುತ್ತಾರೆ. ಆದರೆ ಹೀರೋಯಿನ್ ಗಳು ದಪ್ಪ ಆದ ತಕ್ಷಣ ಆಂಟಿ, ಬಡ್ಡಿ, ಅಜ್ಜಿ ಎಂದು ಕರೆಯುತ್ತಾರೆ ಎಂದು ಹೇಳಿದ್ದರು ನಟಿ ರಮ್ಯಾ.

ರಮ್ಯಾ ಅವರು ನೀಡಿದ ಈ ಹೇಳಿಕೆಗೆ ಸ್ಯಾಂಡಲ್ ವುಡ್ ನ ಸಾಕಷ್ಟು ನಟಿಯರು ಸಾಥ್ ನೀಡಿದರು. ಪ್ರಿಯಾಂಕ ಉಪೇಂದ್ರ ಅವರು ರಮ್ಯಾ ಅವರಿಗೆ ಸಾಥ್ ನೀಡಿ, ನನಗೂ ಸಹ ಸಾಕಷ್ಟು ದಪ್ಪ ಆಗಿದ್ದೀರಾ ಎಂದು ಕಮೆಂಟ್ ಮಾಡಿದ್ದರು, ಆ ರೀತಿಯ ಕಮೆಂಟ್ಸ್ ಗಳು ಒತ್ತಡ ತರುತ್ತದೆ, ಬಹುಶಃ ಚೇತನಾ ಅವರು ಸಹ ಅದೇ ಒತ್ತಡದಲ್ಲಿದ್ದರು ಅನ್ನಿಸುತ್ತದೆ. ಚೆನ್ನಾಗಿ ಕಾಣಿಸಿದರೆ, ಹೆಚ್ಚಿನ ಕೆಲಸ ಸಿಗಬಹುದು ಎಂದು ಅನ್ನಿಸಿ, ಆ ರೀತಿ ಮಾಡಿಕೊಂಡಿರಬಹುದು. ಮದುವೆಯಾಗಿ ಮಗುವಾಗ ಮೇಲೆ ಗ್ಲಾಮರ್ ಹೋಗುತ್ತದೆ ಎಂದು ಅವಕಾಶಗಳು ಕಡಿಮೆ ಆಗುತ್ತದೆ ಎಂದು ಈಗ ನಡೆಯುತ್ತಿರುವ ಬಗ್ಗೆ ಪ್ರಿಯಾಂಕ ಅವರು ಸಹ ಮಾತನಾಡಿದ್ದಾರೆ.