ಕಳೆದ ವಾರವಷ್ಟೇ ಎಲ್ಲರೂ ಮೆಚ್ಚಿಕೊಂಡಿದ್ದ ಮಾಸ್ಟರ್ ಆನಂದ್ ಮಗಳು.. ಆದರೆ ಈ ವಾರ ವಂಶಿ ಮಾಡಿದ ಕೆಲಸ ನೋಡಿ..

ಕನ್ನಡ ಕಿರುತೆರೆಯಲ್ಲಿ ಸಧ್ಯ ಸಾಲು ಸಾಲು ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು ವಾಹಿನಿಗಳು ಹೊಸತನಕ್ಕೆ ಮಣೆ ಹಾಕುತ್ತಿದ್ದಾರೆ.. ಅದರಲ್ಲೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಹಾಡಿನ ಶೋ ಹೊರತು ಪಡಿಸಿ ಗಂಡ ಹೆಂಡಿರ ರಾಜಾ ರಾಣಿ ಶೋ ಮಾಡಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿತ್ತು.. ಆ ಬಳಿಕ ರಾಜಾ ರಾಣಿ ಶೋ ಮುಗಿದ ನಂತರ ಮತ್ತೊಂದು ಹೊಸ ಶೋ ಆರಂಭಿಸಿದ್ದು ತಾಯಂದಿರನ್ನು ಸಂಭ್ರಮಿಸುವ ಸಲುವಾಗಿ ನನ್ನಮ್ಮ ಸೂಪರ್ ಸ್ಟಾರ್ ಶೋ ಆರಂಭಗೊಂಡಿದೆ.. ಕಳೆದ ಎರಡು ವಾರಗಳಿಂದ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಶೋ ನಲ್ಲಿ ಭಾಗವಹಿಸುತ್ತಿರುವ ಅಷ್ಟೂ ಅಮ್ಮ ಮಕ್ಕಳ ಜೋಡಿ ತಾವುಗಳು ಎಂಜಾಯ್ ಮಾಡುವುದರ ಜೊತೆಗೆ ಮನರಂಜನೆಯನ್ನೂ ಸಹ ನೀಡುತ್ತಿದ್ದಾರೆ..

ಇನ್ನು ಶೋ ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ದಂಪತಿಯ ಮಗಳು ವಂಶಿಕಾ ಅಂಜನಿ ಕಶ್ಯಪ.. ಹೌದು ಬಂದ ಮೊದಲ ವಾರದಲ್ಲಿಯೇ ತನ್ನ ಮಾತಿನ ಮೂಲಕವೇ ಮೋಡಿ ಮಾಡಿದ ವಂಶಿಕಾ ಅಂಜನಿ ಕಶ್ಯಪ ಅಪ್ಪ ಅಮ್ಮನ ಮೇಲೆ ಸಾಲು ಸಾಲು ದೂರುಗಳನ್ನು ಹೇಳಿದ್ದಳು.. ನನ್ನ ಹೆಸರು ವಂಶಿಕಾ ಅಂಜನಿ ಕಶ್ಯಪ ಆದರೆ ಎಲ್ಲರೂ ವಂಶಿ ವಂಶಿ ಅಂತಾರೆ.. ಈತರ ಕರೆಯೋದಕ್ಕೆ ಅಷ್ಟು ಉದ್ದದ ಹೆಸರು ಬೇಕಾ.. ಕೂದಲು ಮಾತ್ರ ಚಿಕ್ಕದು ಮಾಡ್ಸಿದ್ದಾರೆ.. ನಮ್ಮಪ್ಪ ಯಾವಾಗಲೂ ಅವರೇ ಮಾತಾಡ್ತಾರೆ.. ನಾವು ಮಾತನಾಡೋ ಹಾಗೆ ಇಲ್ಲ..

ಮನೆಗೆ ಯಾರೇ ಬಂದರೂ ವಂಶಿ ಎಬಿಸಿಡಿ ಹೇಳು ವಂಶಿ ಡ್ಯಾನ್ಸ್ ಮಾಡು ಅಂತಾರೆ.. ನನ್ನ ಫ್ರೆಣ್ಡ್ಸ್ ಬಂದರೆ ಅವರೂ ಕೂಡ ಎಬಿಸಿಡಿ ಹೇಳ್ತಾರಾ? ಅವರೂ ಕೂ‌ಡ ಡೈಲಾಗ್ ಹೇಳ್ತಾರಾ.. ಹೀಗೆ ಸಾಕಷ್ಟು ಚಿಟಪಟ ಚಿಟಪಟ ಎಂದಿದ್ದ ವಂಶಿ ಕನ್ನಡಿಗರ ಮನ ಗೆದ್ದಿದ್ದಳು.. ಆ ಪುಟ್ಟ ಕಂದನ ಪ್ರೋಮೋ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.. ಆದರೆ ಕಳೆದ ವಾರ ಬರಿ ದೂರುಗಳನ್ನೇ ಹೇಳುತ್ತಿದ್ದ ಈ ಪುಟ್ಟ ಹುಡುಗಿ ಈ ವಾರ ಮಾಡಿದ ಕೆಲಸ ನಿಜಕ್ಕೂ ಆ ಪುಟ್ಟ ಕಂದನ ದೊಡ್ಡತನವನ್ನು ತೋರಿತು..

ಹೌದು ಎಂದಿನಂತೆ ಒರತಿ ಸಂಚಿಕೆಗಳಲ್ಲಿಯೂ ಟಾಸ್ಕ್ ಗಳನ್ನು ನೀಡಲಾಗುತ್ತದೆ.. ಅದೇ ರೀತಿ ನಿನ್ನೆಯ ಸಂಚಿಕೆಯಲ್ಲಿಯೂ ಟಾಸ್ಕ್ ಇತ್ತು.. ವಂಶಿಕಾ ಹಾಗೂ ಯಶಸ್ವಿನಿ.. ಇತ್ತ ಆರ್ಯ ಮತ್ತು ಆಕೆಯ ತಾಯಿ ಎದುರಾದರು.. ಟಾಸ್ಕ್ ನಲ್ಲಿ ಸರಿ ಉತ್ತರ ಹೇಳಿದಾಗ ವಂಶಿಕಾ ಅವರ ತಾಯಿಗೆ ಚಾಕೋಲೇಟ್ ಬಾಕ್ಸ್ ಒಂದು ಉಡುಗೊರೆಯಾಗಿ ನೀಡಲಾಯಿತು.. ಆ ಸಮಯದಕ್ಕಿ ಎದುರಿನಲ್ಲಿದ್ದ ಆರ್ಯ ಬೇಸರ ಪಟ್ಟುಕೊಂಡು ಕಣ್ಣೀರಿಟ್ಟಳು.‌ ನನಗೂ ಸರ್ಪ್ರೈಸ್ ಬೇಕು.. ನನಗೂ ಚಾಕೋಲೇಟ್ ಬಾಕ್ಸ್ ಬೇಕು ಎಂದು ಮುಖ ಸಪ್ಪಗೆ ಮಾಡಿಕೊಂಡಳು.. ಇದನ್ನು ನೋಡಿದ ಆ ಪುಟ್ಟ ವಂಶಿಕಾ ತಕ್ಷಣ ಆರ್ಯಾಳ ಬಳಿ ಬಂದು ಈ ಬಾಕ್ಸ್ ನನ್ನದು ಮಾತ್ರ ಅಲ್ಲ.. ಇಬ್ಬರಿಗೂ ಸೇರಿಸಿ ಕೊಟ್ಟಿದ್ದಾರೆ.. ನಮ್ಮಿಬ್ಬರಿಗೂ ಅಂತಾನೇ ಅಮ್ಮ ಗೆದ್ದಿದ್ದು.. ಇಬ್ಬರೂ ತಿನ್ನೋಣ ಎಂದಳು..

ಆದರೂ ಸಹ ಆರ್ಯಳ ಬೇಸರ ಹೋಗದ ಕಾರಣ ತಕ್ಷಣ ತನ್ನ ಕೈಯಲ್ಲಿದ್ದ ಚಾಕೋಲೇಟ್ ಬಾಕ್ಸ್ ಅನ್ನು ಆರ್ಯಾಳಿಗೆ ಕೊಟ್ಟು ಇದು ನಿನ್ನದೇ ತಗೋ ಎಂದು ಕೊಟ್ಟುಬಿಟ್ಟಳು.. ನಿಜಕ್ಕೂ ಆ ಕ್ಷಣ ಯಾರೂ ಸಹ ಅವಳಿಗೆ ಏನೂ ಹೇಳಿಕೊಡದೇ ತಾನೇ ಈ ರೀತಿ ದೊಡ್ಡಗುಣ ತೋರಿದ್ದು ನಿಜಕ್ಕೂ ಅಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿತು.. ಆನಂದ್ ಹಾಗೂ ಯಶಸ್ವಿನಿ ಅವರು ಪುಟ್ಟ ಕಂದನಿಗೆ ಕಲಿಸಿರುವ ಈ ಸಂಸ್ಕಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದರು.. ಮಾಸ್ಟರ್ ಆನಂದ್ ನ ಕ್ಸೆರಾಕ್ಸ್ ಕಾಪಿಯಂತಿರುವ ವಂಶಿಕಾ ಮಾತಿನಲ್ಲಿ ಹಾಡು ಡ್ಯಾನ್ಸಿನಲ್ಲಿ ಮಾತ್ರವಲ್ಲ.. ಇಂತಹ ಒಳ್ಳೆಯ ಗುಣಗಳಲ್ಲಿಯೂ ತಂದೆಯನ್ನು ಮೀರಿಸಿ ಬಿಟ್ಟಳು.. ನಿಜಕ್ಕೂ ಮಕ್ಕಳಿಗೆ ಇಂತಹ ಗುಣವಿದ್ದಾಗ ನೋಡಲು ಏನೋ ಒಂದು ರೀತಿ ಆನಂದ ಎಂದರೆ ತಪ್ಪಾಗಲಾರದು..