ಮುಂದಿನ ತಿಂಗಳೇ ಡಾಕ್ಟರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ರವಿಚಂದ್ರನ್ ಪುತ್ರ ಮನುರಂಜನ್.. ಹುಡುಗಿ ಯಾರು ಗೊತ್ತಾ..

ಸ್ಯಾಂಡಲ್ವುಡ್ ನ ಸ್ಟಾರ್ ನಟ ರವಿಚಂದ್ರನ್ ಅವರ ಮಗ ನಟ ಮನುರಂಜನ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ರವಿಚಂದ್ರನ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.. ಹೌದು ಈಗಾಗಲೇ ಮೂರು ವರ್ಷದ ಹಿಂದೆ ಮಗಳು ಗೀತಾಂಜಲಿ ಅವರ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಮುಗಿಸಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇದೀಗ ಹಿರಿಯ ಮಗ ಮನುರಂಜನ್ ಮದುವೆಗೂ ಸಕಲ ಸಿದ್ಧತೆ ನಡೆಸಿದ್ದಾರೆ..

ಮನುರಂಜನ್ ಅವರ ಮದುವೆಯನ್ನು ರವಿಚಂದ್ರನ್ ಅವರೆ ನಿಶ್ಚಯ ಮಾಡಿದ್ದು ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದೆ ಎಂದು ತಿಳಿದು ಬಂದಿದೆ.. ಸಿನಿಮಾರಂಗದಲ್ಲಿನ ಹುಡುಗಿಯನ್ನೇ ಸೊಸೆಯಾಗಿ ತರ್ತಾರೆ ಎನ್ನುವ ಮಾತುಗಳ ನಡುವೆ ಇದೀಗ ಸಿನಿಮಾ ಕುಟುಂಬಕ್ಕೆ ಸಂಬಂಧವೇ ಇಲ್ಲದ ಹುಡುಗಿಯನ್ನು ಮಗನಿಗೆ ಮದುವೆ ಮಾಡುತ್ತಿದ್ದಾರೆ.. ಹೌದು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಹುಡುಗಿಯನ್ನು ಮನೋರಂಜನ್ ಅವರಿಗೆ ನಿಶ್ಚಯ ಮಾಡಿದ್ದು.. ಮನುರಂಜನ್ ಡಾಕ್ಟರ್ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ..

ಸ್ವತಃ ರವಿಚಂದ್ರನ್ ಅವರೇ ಮಗನಿಗಾಗಿ ಹುಡುಗಿಯನ್ನು ಹುಡುಕಿದ್ದಾರಂತೆ. ಮುಂಬರುವ ದಿನಗಳಲ್ಲಿ ತಮ್ಮ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗಬೇಕಿರುವ ಕಾರಣ ರವಿಚಂದ್ರನ್ ಅವರೇ ಕಾಳಜಿ ವಹಿಸಿ ಸೊಸೆಯನ್ನು ಹುಡುಕಿದ್ದಾರೆ ಎನ್ನಲಾಗಿದೆ.. ಹೌದು ತಂದೆಯಂತೆಯೇ ಸಿನಿಮಾ ರಂಗದಲ್ಲೇ ಮುಂದುವರೆದಿರುವ ಮನೋರಂಜನ್, ಈಗಾಗಲೇ ಹಲವು ಚಿತ್ರಗಳ್ಲಲಿ ನಟಿಸಿದ್ದಾರೆ. ಒಂದು ದೊಡ್ಡ ಗೆಲುವಿಗಾಗಿ ಕಾಯುತ್ತಿದ್ದಾರೆ. ಈ ವೇಳೆಯೇ ಮಗನಿಗೆ ಮದುವೆ ಮಾಡಲು ರವಿಚಂದ್ರನ್ ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ನಿವಾಸಿ ಆಗಿರುವ ಹುಡುಗಿಯೊಂದಿಗೆ ಆಗಸ್ಟ್ 21 ಹಾಗೂ 22 ರಂದು ಬೆಂಗಳೂರಿನಲ್ಲೇ ಮನೋರಂಜನ್ ಸಪ್ತಪದಿ ತುಳಿಯಲಿದ್ದಾರೆ ಎನ್ನುತ್ತಿವೆ ಮೂಲಗಳು.

ರವಿಚಂದ್ರನ್ ಕುಟುಂಬದಲ್ಲಿ ಸದ್ದಿಲ್ಲದೇ ಮದುವೆ ಸಿದ್ಧತೆಗಳು ನಡೆದಿದ್ದು, ಕೆಲವೇ ದಿನಗಳಲ್ಲೇ ದಕ್ಷಿಣ ಭಾರತದ ಅನೇಕ ಗಣ್ಯರಿಗೆ ಮದುವೆ ಆಮಂತ್ರಣ ನೀಡಲಿದ್ದಾರಂತೆ ಕ್ರೇಜಿಸ್ಟಾರ್. ಮಗಳ ಮದುವೆಯನ್ನು ವಿಭಿನ್ನವಾಗಿ ಮಾಡಿದ್ದ ಕ್ರೇಜಿಸ್ಟಾರ್ ಮಗನ ಮದುವೆಗಾಗಿ ಇನ್ನೂ ಯಾವ ರೀತಿ ವಿಶೇಷವಾಗಿ ಮಾಡಬಹುದು ಎಂದು ಕುತೂಹಲ ಮೂಡಿರುವುದು ಸತ್ಯ..

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514