ಸಂಗೀತಾ ಜೊತೆ ಸಪ್ತಪದಿ ತುಳಿದ ರವಿಚಂದ್ರನ್ ಪುತ್ರ ಮನೋರಂಜನ್.. ಮದುವೆಯ ಸಂಪೂರ್ಣ ಫೋಟೋಗಳು ನೋಡಿ..

ಕನ್ನಡದ ಶೋ ಮ್ಯಾನ್ ಸ್ಯಾಂಡಲ್ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರ ವಿವಾಹ ಮಹೋತ್ಸವ ಇಂದು ಅದ್ಧೂರಿಯಾಗಿ ನೆರವೇರಿದೆ.. ಹೌದು ಮನೋರಂಜನ್ ಹಾಗೂ ಸಂಗೀತಾ ಇಂದು ಸಪ್ತಪದಿ ತುಳಿದಿದ್ದು ನೂತನ ಜೀವನ ಆರಂಭಿಸಿದ್ದಾರೆ.. ಅದರಲ್ಲೂ ವಿವಾಹ ಸಮಾರಂಭಕ್ಕೆ ಈ ಹಿಂದೆ ಮಗಳ ಮದುವೆಯಲ್ಲಿ ತೆಗೆದುಕೊಂಡ ನಿರ್ಧಾರ ದಂತೆ ಮಗ ಮನೋರಂಜನ್ ಅವರ ಮದುವೆಯಲ್ಲಿಯೂ ಸಹ ಯಾವುದೇ ಮಾದ್ಯಮದವರಿಗೆ ಚಿತ್ರೀಕರಣ ಮಾಡಲು ಅವಕಾಶ ಇರಲಿಲ್ಲ.. ಕುಟುಂಬದವರೇ ವೀಡಿಯೋ ಫೋಟೋಗಳನ್ನು ಮಾದ್ಯಮಗಳಿಗೆ ನೀಡಿದ್ದು ಮದುವೆಗೆ ಬಂದ ಅತಿಥಿಗಳು ನೆಮ್ಮದಿಯಾಗಿ ಯಾವುದೇ ಗದ್ದಲವಿಲ್ಲದೇ ನೂತನ ಜೋಡಿಗೆ ಹರಸಲಿ ಎಂಬುದು ರವಿಚಂದ್ರನ್ ಹಾಗೂ ಕುಟುಂಬದ ಉದ್ದೇಶವಾಗಿತ್ತು..

ಇನ್ನು ಮದುವೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿದ್ದು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.. ಹೆಣ್ಣಿನ ಕುಟುಂಬಕ್ಕೆ ಸ್ಟಾರ್ ಕುಟುಂಬದ ಸಂಬಂಧದಿಂದ ಯಾವುದೇ ತೊಂದರೆ ಅಥವಾ ಹೊರೆ ಆಗಬಾರದೆಂಬ ಕಾರಣಕ್ಕೆ ಮದುವೆಯನ್ನು ಸರಳವಾಗು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ.. ನಿನ್ನೆ ಕುಟುಂಬಸ್ಥರಿಗಾಗಿ ಅರತಕ್ಷತೆ ಕಾರ್ಯಕ್ರಮ ನೆರವೇರಿದ್ದು ಇಂದು ಮದುವೆ ಸಮಾರಂಭ ನೆರವೇರಿದೆ.. ನಾಳೆ ಮತ್ತೊಮ್ಮೆ ಸಿನಿಮಾ ಮಂದಿಗಾಗಿ ಮತ್ತೊಂದು ಅರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ..

ಇನ್ನು ಈ‌ ಮದುವೆ ಸಂಪೂರ್ಣವಾಗಿ ಕುಟುಂಬಸ್ಥರು ನೋಡಿ ಮಾಡಿದ ಮದುವೆಯಾಗಿದೆ.. ಸಂಗೀತಾ ಮೂಲತಃ ಬೆಂಗಳೂರಿನವರೇ ಆಗಿದ್ದು ವೈದ್ಯಕೀಯ ಸಂಬಂಧಪಟ್ಟ ಪದವಿ ಪಡೆದು ಅದರಲ್ಲಿಯೇ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ..

ಇನ್ನು ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದ ರವಿಚಂದ್ರನ್ ಅವರು ಮಗನ ಮದುವೆಯನ್ನು ಸರಳವಾಗಿ ಮಾಡುವ ನಿರ್ಧಾರ ಮಾಡಿದ್ದರು.. ಮನೆಗೆ ಸಂಗೀತದ ಆಗಮನವಾಗುತ್ತಿರುವುದು ನಮಗೆಲ್ಲಾ ಸಂತೋಷ ಎಂದಿದ್ದರು.. ಇನ್ನು ಅಣ್ಣನ ಮದುವೆಗೆ ತಮ್ಮ ವಿಕ್ರಮ್ ತಂಬ್ಸ್ ಅಪ್ ಮಾಡುವ ಮೂಲಕ ಆಲ್ ದಿ ಬೆಸ್ಟ್ ಹೇಳಿದ್ದು.. ತಂಗಿ ಗೀತಾಂಜಲಿ ಹಾಗೂ ಬಾವ ಅಜಯ್ ಅವರು ಶಾಸ್ತ್ರಗಳನ್ನು ನೆರವೇರಿಸಿದ್ದಾರೆ..

ಇನ್ನು ನೂತನ ಜೋಡಿ ಸಂಗೀತಾ ಹಾಗೂ ಮನೋರಂಜನ್ ಅವರು ರವಿಚಂದ್ರನ್ ಹಾಗೂ ಸುಮತಿ ಅವರ ಮತ್ತು ಸಂಗೀತಾ ಅವರ ತಂದೆ ತಾಯಿಯ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದದ್ದು ವಿಶೇಷವಾಗಿತ್ತು.. ಇಂದು ಮದುವೆಗೆ ಶಿವಣ್ಣ, ರಮೇಶ್ ಅವರು, ಕಿಚ್ಚ ಸುದೀಪ್ ಶರಣ್, ಉಮಾಶ್ರೀ ಅವರು ಸೇರಿದಂತೆ ರವಿಚಂದ್ರನ್ ಅವರ ಆಪ್ತರು ಆಗಮಿಸಿ ಮನೋರಂಜನ್ ಹಾಗೂ ಸಂಗೀತಾಗೆ ಶುಭಾಶಯ ತಿಳಿಸಿದರು..

ಇನ್ನು ಇತ್ತ ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಮಾರಂಭದ ಫೋಟೋಗಳು ವೀಡಿಯೋಗಳು ವೈರಲ್ ಆಗಿದ್ದು ನೂತನ ಜೋಡಿಗೆ ಅಭಿಮಾನಿಗಳು ಸ್ನೇಹಿತರು ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸಿ ಶುಭ ಹಾರೈಸಿದ್ದಾರೆ.. ಒಟ್ಟಿನಲ್ಲಿ ಕ್ರೇಜಿಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು ಮಗಳು ಹಾಗೂ ಒಬ್ಬ ಮಗನ ಜವಾಬ್ದಾರಿಯನ್ನು ನಿಭಾಯಿಸಿದ್ದು ಇನ್ನು ಮುಂದಿನ ಸರದಿ ವಿಕ್ರಮ್ ರವಿಚಂದ್ರನ್ ಅವರದ್ದು ಎನ್ನಬಹುದು..

ಇನ್ನು ಇತ್ತ ಮನೋರಂಜನ್ ಅವರ ಮದುವೆ ಸಮಾರಂಭದಲ್ಲಿ ಎಲ್ಲಾ ಶಾಸ್ತ್ರಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದಲ್ಲದೇ ಸ್ನೇಹಿತರು ಕುಟುಂಬಕ್ಕಾಗಿ ಮೆಹಂದಿ ಸಂಗೀತ್ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದು ರವಿಚಂದ್ರನ್ ಅವರು ಡ್ಯಾನ್ಸ್ ಮಾಡುವ ಮೂಲಕ ಮಗನ ಮದುವೆಯನ್ನು ಎಂಜಾಯ್ ಮಾಡಿದ್ದಾರೆ.. ಒಟ್ಟಿನಲ್ಲಿ ಕ್ರೇಜಿ ಕುಟುಂಬದಲ್ಲಿ ಎರಡನೇ ಸಮಾರಂಭ ನೆರವೇರಿದ್ದು ಸ್ಯಾಂಡಲ್ವುಡ್ ನ ದಿಗ್ಗಜರು ಆ ಸಂತೋಷದಲ್ಲಿ ಭಾಗಿಯಾಗಿ ಹೊಸ ಜೋಡಿಗೆ ಹಾರೈಸಿದ್ದಾರೆ..