ಜನರಿಂದ ಹಣದ ಸಹಾಯ ಕೇಳಿ ಕೈ ಮುಗಿದ ಮಂಜು ಪಾವಗಡ.. ಕಾರಣವೇನು ಗೊತ್ತಾ.. ಬಿಗ್ ಬಾಸ್ ನಿಂದ ಗೆದ್ದ ಹಣ ಏನಾಯ್ತು ಗೊತ್ತಾ..

ಬಿಗ್ ಬಾಸ್ ಸೀಸನ್ ಎಂಟರ ವಿನರ್ ಮಂಜು ಪಾವಗಡ ಸಧ್ಯ ಆಗಾಗ ಸುದ್ದಿಯಾಗುತ್ತಲೇ ಇದ್ದರು.. ಆದರೆ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಮಂಜು‌ ಪಾವಗಡ ಅವರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.. ಅದೂ ಸಹ ಜನರಿಂದ ಹಣದ ಸಹಾಯ ಕೇಳುವ ಸಲುವಾಗಿ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ ಎಂಟು ಅರ್ಧಕ್ಕೆ ನಿಂತಾಗ ಮಂಜು ಪಾವಗಡ ಸಾಕಷ್ಟು ಬೇಸರ ಮಾಡಿಕೊಂಡಿದ್ದರು.. ಆದರ ಅದೃಷ್ಟವೋ ಏನೋ ಎಂಬಂತೆ ಬಿಗ್ ಬಾಸ್ ಸೀಸನ್ ಎಂಟು ಮತ್ತೆ ಪ್ರಾರಂಭವಾಗಿ ಎರಡನೇ ಇನ್ನಿಂಗ್ಸ್ ಶುರುವಾಯಿತು.. ಮೊದಲ ಇನ್ನಿಂಗ್ಸ್ ನಲ್ಲಿ ಮಾಡಿದ ತಪ್ಪನ್ನು ತಿದ್ದುಕೊಂಡು ಎರಡನೇ ಇನ್ನಿಂಗ್ಸ್ ನಲ್ಲಿ ದಿವ್ಯಾ ಉರುಡುಗ ಜೊತೆ ಆತ್ಮೀಯತೆಯನ್ನು ಕಡಿಮೆ ಮಾಡಿಕೊಂಡು ಆಟದ ಕಡೆ ಹೆಚ್ಚು ಗಮನ ಕೊಟ್ಟು ಕೊನೆಗೂ ಬಿಗ್ ಬಾಸ್ ವಿನ್ನರ್ ಪಟ್ಟವನ್ನು ಪಡೆದುಕೊಂಡರು..

ಅಷ್ಟೇ ಅಲ್ಲದೇ ಟ್ರೋಫಿ ಜೊತೆಗೆ ಐವತ್ತ ಮೂರು ಲಕ್ಷ ರೂಪಾಯಿ ಬಹುಮಾನದ ಹಣವನ್ನು ಪಡೆದರು.. ಬಿಗ್ ಬಾಸ್ ಮುಗಿದ ಬಳಿಕ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿದ್ದ ಮಂಜು ಪಾವಗಡ ದಿವ್ಯಾರನ್ನು ಮದುವೆಯಾಗ್ತಾರೆ ಎನ್ನುವ ಸುದ್ದಿಯೂ ಸಹ ಹರಡಿತ್ತು.. ಸಾಲು ಸಾಲು ಕಾರ್ಯಕ್ರಮದಲ್ಲಿ ಹಾಗೂ ವೀಡಿಯೋ ರೀಲ್ಸ್ ಗಳಲ್ಲಿ ದಿವ್ಯಾ ಜೊತೆಗೆ ಕಾಣಿಸಿಕೊಂಡಿದ್ದ ಮಂಜು ಪಾವಗಡ ಅವರು ಈ ಬಾರಿಯ ಗಣೇಶ ಹಬ್ಬವನ್ನೂ ಸಹ ದಿವ್ಯಾ ಸುರೇಶ್ ಮನೆಯಲ್ಲಿಯೇ ಆಚರಿಸಿದ್ದು ವಿಶೇಷ.. ಇನ್ನು ದಿವ್ಯಾ ಸುರೇಶ್ ಮಂಜು ಅಪ್ಪ ಅಮ್ಮನ ಬಳಿ ಮಂಜು ಮದುವೆ ವಿಚಾರವನ್ನೂ ಸಹ ಮಾತನಾಡಿ ಆದಷ್ಟು ಬೇಗ ಮದುವೆ ಮಾಡಿ ಎಂದಿದ್ದು ಅವರೂ ಸಹ ಒಪ್ಪಿಗೆ ಸೂಚಿಸಿದ್ದು ಹುಡುಗಿ ಯಾರೆಂಬುದಷ್ಟೇ ಕುತೂಹಲ‌.. ಇನ್ನು ಇದೆಲ್ಲದರ ನಡುವೆ ಮಂಜು ಪಾವಗಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಣಕ್ಕಾಗಿ ಮನವಿ ಮಾಡಿಕೊಂಡಿದ್ದು ವೀಡಿಯೋ ಸಧ್ಯ ವೈರಲ್ ಆಗಿದೆ.. ಅಷ್ಟಕ್ಕೂ ಮಂಜು ಯಾಕೆ ಮನವಿ ಮಾಡಿದ್ರು ಸಂಪೂರ್ಣವಾಗಿ ನೋಡಿ..

ಹೌದು ಮಂಜು ಪಾವಗಡ ಅವರು ಅಷ್ಟೆಲ್ಲಾ ಹಣ ಬಹುಮಾನವನ್ನಾಗಿ ಪಡೆದುಕೊಂಡರೂ ಸಹ ಇದೀಗ ಜನರ ಬಳಿ ಹಣ ಕೇಳುತ್ತಿರುವುದು ಏತಕ್ಕೆ ಎಂದು ಕುತೂಹಲ ಮೂಡಬಹುದು.. ಆದರೆ ಮಂಜು ಪಾವಗಡ ಒಂದೊಳ್ಳೆ ಉದ್ದೇಶಕ್ಕಾಗಿ ಜನರ ಬಳಿ ಹಣ ಕೇಳುತ್ತಿದ್ದಾರೆ.. ಹೌದು ಒಂದು ಜೀವ ಉಳಿಸುವ ಸಲುವಾಗಿ ಮಂಜು ಪಾವಗಡ ಜನರ ಬಳಿ ಆರು ಕೋಟಿ ರೂಪಾಯಿ ಹಣವನ್ನು ಕೇಳುತ್ತಿದ್ದಾರೆ.. ಹೌದು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವೊಂದನ್ನು ಉಳಿಸಲು ಎಂಟು ಕೋಟಿ ಹಣದ ಸಹಾಯಕ್ಕೆ ಮನವಿ ಮಾಡಿದ್ದಾರೆ.. ಹೌದು ತಾವೂ ಸಹ ತಮ್ಮ ಕೈಲಾದ ಸಹಾಯ ಮಾಡಿದ್ದು ಇದೀಗ ಜನರ ಬಳಿ ನೆರವಿಗಾಗಿ ಕೈ ಮುಗಿದು ಬೇಡಿಕೊಂಡಿದ್ದಾರೆ..

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನವೀನ್ ಮತ್ತು ಜ್ಯೋತಿ ಎಂಬುವವರ ಪುಟ್ಟ ಕಂದನಿಗೆ ಈ ಅಪರೂಪದ ಕಾಯಿಲೆ ಬಂದಿದ್ದು ಮಗುವನ್ನು ಉಳಿಸಲು ಹದಿನಾರು ಕೋಟಿ ರೂಪಾಯಿಯ ಇಂಜೆಕ್ಷನ್ ಮಾಡಿಸಬೇಕಿದ್ದು ಈಗಾಗಲೇ ಜನರ ಬಳಿ ನೆರವು ಕೇಳಲಾಗಿ ಎಂಟು ಕೋಟಿ ರೂಪಾಯಿಗಳು ಸಂಗ್ರಹವಾಗಿದೆ‌.. ಆದರೆ ಚಿಕಿತ್ಸೆ ಕೊಡಿಸಲು ಇನ್ನು ಮೂರು ತಿಂಗಳು ಮಾತ್ರ ಬಾಕಿ ಉಳಿದಿರುವುದರಿಂದ ಉಳಿದ ಎಂಟು ಕೋಟಿ ರೂಪಾಯಿಯ ಸಹಾಯವನ್ನು ಜನರಿಂದ ಕೇಳಿದ್ದಾರೆ‌.

ಆ ಮಗುವಿನ ಪರಿಸ್ಥಿತಿ ನೋಡಲು ಆಗ್ತಿಲ್ಲ.. ದಯವಿಟ್ಟು ಒಬ್ಬೊಬ್ಬರು ನೂರು ರೂಪಾಯಿ ಹಾಕಿದರೂ ಸಹ ಎಂಟು ಲಕ್ಷ ಜನರು ಸಹಾಯ ಮಾಡಿದರೆ ಚಿಕಿತ್ಸೆ ಕೊಡಿಸಬಹುದು.. ನಮ್ಮ ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀಡೋಣ.. ಆ ಮಗುವನ್ನು ಉಳಿಸೋಣ.. ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ. ನೆರವು ನೀಡುವವರು ಮಂಜು ಪಾವಗಡ ಅವರ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಸಂಪೂರ್ಣ ವಿವರ ನೀಡಲಾಗಿದೆ.. ಆ ಮಗು ಆದಷ್ಟು ಬೇಗ ಗುಣಮುಖವಾಗಲೆಂದು ಹಾರೈಸೋಣ..