ಮಂಗಳ ಗೌರಿ‌ ಮದುವೆಯಲ್ಲಿ ಅಭಿನಯಿಸಿದ್ದ ಈ ನಟಿ ಏನಾದರು ಗೊತ್ತಾ.. ಶಾಕ್ ಆಗ್ತೀರಾ..

ಕಿರುತೆರೆಯಿಂದ ಜರ್ನಿ ಶುರುಮಾಡಿ ಬೆಳ್ಳಿತೆರೆಯ ವರೆಗೂ ಬಂದು, ಸಾಧನೆ ಮಾಡಿರುವ ಸಾಕಷ್ಟು ಜನ ಕಲಾವಿದರಿದ್ದಾರೆ. ನಾಯಕರು, ನಾಯಕಿಯರು ಹಾಗೂ ಪೋಷಕ ಪಾತ್ರದಲ್ಲಿ, ಹಾಸ್ಯ ಪಾತ್ರಗಳಲ್ಲಿ ನಟಿಸುವ ಸಾಕಷ್ಟು ಕಲಾವಿದರು ತಮ್ಮ ಪ್ರತಿಭೆಯಿಂದ ಮುಂದಕ್ಕೆ ಸಾಗಿದ್ದಾರೆ. ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದೆ. ಹೀಗೆ ಧಾರವಾಹಿ ಮೂಲಕ ಬೆಳ್ಳಿತೆರೆಗು ಎಂಟ್ರಿ ಕೊಟ್ಟು, ಫೇಮಸ್ ಆಗಿರುವ ನಟಿಯ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ. ಆ ನಟಿ ಮತ್ಯಾರು ಅಲ್ಲ, ಮಂಗಳಗೌರಿ ಮದುವೆ ಧಾರವಾಹಿ ಮೂಲಕ ಖ್ಯಾತಿ ಪಡೆದಿರುವ ಬೆಳ್ಳಿ ಪಾತ್ರದ ನಟಿ ಕೃತಿ ಬೆಟ್ಟದ್ ಅವರು.

ಈ ನಟಿಯನ್ನು ನೀವು ಬೆಳ್ಳಿ ಪಾತ್ರದಲ್ಲಿ ಬಹಳ ತಮಾಷೆ ಮಾಡುವ ಹಾಗೆ ನೋಡಿರುತ್ತೀರಿ. ಆ ಹಾಸ್ಯದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು ನಟಿ ಕೃತಿ. ಈ ನಟಿ ಹಾಸ್ಯಪಾತ್ರದಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇವರಿಗೆ ನಟನೆಯ ಆಸಕ್ತಿ ಹುಟ್ಟಿದಾಗಿನಿಂದಲೇ ಇದೆ ಎಂದರೆ ತಪ್ಪಲ್ಲ. ಯಾಕೆಂದರೆ ಇವರ ತಂದೆ ತಾಯಿ ಇಬ್ಬರು ಸಹ ರಂಗಭೂಮಿಯಲ್ಲಿ ನಿರತರಾಗಿದ್ದವರು. ಹಾಗಾಗಿ ಚಿಕ್ಕ ವಯಸ್ಸಿನಿಂದಲೂ ಇವರಿಗೆ ನಟನೆಯಲ್ಲಿ ಆಸಕ್ತಿ ಇತ್ತು. ಮೂರು ವರ್ಷವಿದ್ದಾಗಲೇ ಕೃತಿ ಅವರು ನಾಟಕಗಳಲ್ಲಿ ನಟಿಸಿ ನಟನೆಯಲ್ಲಿ ಸೈ ಎನ್ನಿಸಿಕೊಂಡಿದ್ದರು. ನಾಟಕಗಳಲ್ಲಿ ನಟಿಸುತ್ತಲೇ ಬಂದ ಕೃತಿ ಅವರು, ಉತ್ತಮವಾದ ನಟನೆಯಿಂದ ಸಾಕಷ್ಟು ಪ್ರಶಸ್ತಿಗಳನ್ನು ವಾಹ ಪಡೆದುಕೊಂಡಿದ್ದಾರೆ…

ಚೆನ್ನಾಗೂ ಓದಿ, ಬಿಬಿಎಂ ಮಾಡಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು ಕೃತಿ. ಆದರೆ ನಟನೆಯ ಮೇಲಿನ ಆಸಕ್ತಿಯಿಂದ ಬಣ್ಣದ ಪ್ರಪಂಚಕ್ಕೆ ಬಂದರು. ನಾಟಕಗಳಿಂದಲೇ ಇವರಿಗೆ ಈಗ ಕೃತಿ ಅವರು ಕನ್ನಡ ಕಿರುತೆರೆ, ಬೆಳ್ಳಿತೆರೆ ಗಾಗು ಬಾಲಿವುಡ್ ನಲ್ಲಿ ಸಹ ಸಿನಿಮಾ ಮಾಡಿ, ಬಹಳ ಜನಪ್ರಿಯತೆ ಹಾಗೂ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ. ಬ್ಯಾಂಕ್ ಕೆಲಸವನ್ನು ಬಿಟ್ಟು ಕೃತಿ ಅವರು ನಟನೆಗೆ ಬಂದರು. ಇವರು ಮೊದಲಿಗೆ ನಟಿಸಿದ್ದು, ರಾಧಾ ಎನ್ನುವ ಧಾರವಾಹಿಯಲ್ಲಿ. ಈ ಧಾರವಾಹಿಯಲ್ಲಿ ಇವರು ನಟಿಸಿದ್ದು, ಡಾನ್ ಪಾತ್ರದಲ್ಲಿ.

ಈ ಪಾತ್ರದಲ್ಲಿ ಚೆನ್ನಾಗಿ ನಟಿಸಿದ ಕಾರಣ, ಕೃತಿ ಅವರಿಗೆ, ಕಲ್ಯಾಣ ರೇಖೆ ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇದೇ ರೀತಿ ಒಂದಾದ ಮೇಲೆ ಮತ್ತೊಂದು ಧಾರವಾಹಿಯಲ್ಲಿ ಕೃತಿ ಅವರು ಕಾಣಿಸಿಕೊಳ್ಳಲು ಶುರು ಮಾಡಿದರು, ಇವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು, ಮಂಗಳಗೌರಿ ಮದುವೆ ಧಾರವಾಹಿಯ ಬೆಳ್ಳಿ ಪಾತ್ರ. ಈ ಪಾತ್ರದ ಮೂಲಕ ಹೆಚ್ಚಿನ ಕೃತಿ ಅವರು ಇಷ್ಟವಾಗಿದ್ದಾರೆ. ಮಂಗಳಗೌರಿ ಮದುವೆ ಇವರಿಗೆ ದೊಡ್ಡ ಬ್ರೇಕ್ ತಂದುಕೊಟ್ಟಿತು ಎಂದರೆ ತಪ್ಪಾಗುವುದಿಲ್ಲ. ಧಾರವಾಹಿಗಳು ಮಾತ್ರವಲ್ಲದೆ, ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.

ಕನ್ನಡದಲ್ಲಿ ಮೈಲಾರಿ, ಜೂಮ್, ಡೆಡ್ಲಿ2, ಜೂಮ್, ಕೂಲ್, ಡ್ರಾಮಾ, ವಿಕ್ಟರಿ2 ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಚಾರ್ಲಿ ಸಿನಿಮಾದಲ್ಲಿ ಸಹ ಕೃತಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ, ಅವರ ಅದ್ಭುತವಾದ ಅಭಿನಯದಿಂದ ಬಾಲಿವುಡ್ ನಲ್ಲಿ ಸಹ ಅವಕಾಶ ಸಿಕ್ಕಿದ್ದು, ಜೋ ಭಿ ಕರ್ ವಾಲೇ ಸಿನಿಮಾ ಮೂಲಕ ಬಾಲಿವುಡ್ ಗು ಎಂಟ್ರಿ ಕೊಟ್ಟಿದ್ದಾರೆ. ಈ ನಟಿಯ ಅಭಿನಯ ಬಾಲಿವುಡ್ ವರೆಗೂ ತಲುಪಿರುವುದು ಕನ್ನಡಿಗರಿಗೆ ನಿಜಕ್ಕೂ ಸಂತೋಷದ ವಿಚಾರ.

ಕಷ್ಟಪಟ್ಟು, ಮಾಡುವ ಕೆಲಸದಲ್ಲಿ ಶ್ರದ್ಧೆ ಇಟ್ಟು, ಕೆಲಸ ಮಾಡಿದರೆ, ಪ್ರತಿಭೆ ಒಳ್ಳೆಯ ಹೆಸರನ್ನು ತಂದು ಕೊಡುತ್ತದೆ ಎನ್ನುವುದಕ್ಕೆ ಕೃತಿ ಬೆಟ್ಟದ್ ಅವರು ಉತ್ತಮವಾದ ಉದಾಹರಣೆ ಆಗಿದ್ದಾರೆ. ಕೃತಿ ಬೆಟ್ಟದ್ ಅವರಿಗೆ ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಅವಕಾಶಗಳು ಚೆನ್ನಾಗಿ ಸಿಗಲಿ ಎಂದು ಹಾರೈಸೋಣ.