ಮೂರು ದಿನ ಇದನ್ನು ಕುಡಿದರೆ ಸಾಕು.. ದೇಹದಲ್ಲಿ ಎಂತಹ ಮ್ಯಾಜಿಕ್ ಆಗುವುದು ಗೊತ್ತಾ?

ಸ್ವಲ್ಪ ಕೆಲಸ ಮಾಡಿದರೂ ಸಾಕು ಸುಸ್ತಾಗತ್ತೇ, ಬೇರೆನೂ ಮಾಡಲು ಸಾಧ್ಯವೇ ಇಲ್ಲ ಎಂಬ ಸಮಸ್ಯೆಗಳಿದ್ದರೆ ಅದು ಯಾವುದೇ ಖಾಯಿಲೆಯಲ್ಲ. ಅದು ಕೇವಲ ನಮ್ಮ ದೇಹದಲ್ಲಿನ ನಿಶ್ಯಕ್ತಿ ಆಷ್ಟೇ. ದೇಹದಲ್ಲಿನ ಈ ವೀಕ್ ನೆಸ್ ನಮ್ಮ ಹಲವು ಆರೊಗ್ಯ ಸಮಸ್ಯೆಗೆ ಕಾರಣವಾಗುತ್ತೆ. ಆದರೆ ನಾವು ದಿನವೂ ಬಳಸಬಹುದಾದ ಕೊಬ್ಬರಿ, ನಿಮ್ಮ ನಿಶ್ಯಕ್ತಿ ದೂರ ಮಾಡುವುದು ಮಾತ್ರವಲ್ಲದೆ ಸೊಂಟ ನೋವು ಹಾಗೂ ಆಗಾಗ ಬರುವ ಕೀಲು ನೋವುಗಳನ್ನೂ ಸಹ ದೂರಮಾಡುತ್ತದೆ.

ಎಳನೀರು ಆರೋಗ್ಯಕ್ಕೆ ಎಷ್ಟು ಉತ್ತಮವೋ ಹಾಗೇ ತೆಂಗಿನ ಕಾಯಿ, ಕೊಬ್ಬರಿ ಎಲ್ಲವೂ ಆರೋಗ್ಯಕರ ಅಂಶಗಳ ಭಂಡಾರ. ಇದು ಕೇವಲ ನಿಶ್ಯಕ್ತಿಯನ್ನು ದೂರ ಮಾಡುವುದು ಮಾತ್ರವಲ್ಲದೆ ನಿದ್ರಾಹೀನತೆಯನ್ನೂ ಕೂಡ ಕಡಿಮೆ ಮಾಡಬಲ್ಲದು.

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು: ಕೊಬ್ಬರಿ – ಸ್ವಲ್ಪ
ಕಲ್ಲುಸಕ್ಕರೆ – ಒಂದು ಸಣ್ಣ ನಿಂಬೆ ಗಾತ್ರದ್ದುು.. ಬಿಳಿ ಎಳ್ಳು – ಅರ್ಧ ಚಮಚ.. ಹಾಲು – ಒಂದು ಲೋಟ.. ಸೋಂಪು – ಅರ್ಧ ಚಮಚ.. ಗಸಗಸೆ – ಅರ್ಧ ಚಮಚ..

ಮಾಡುವ ವಿಧಾನ: ಸ್ವಲ್ಪ ಕೊಬ್ಬರಿ ಚೂರುಗಳನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಬಿಳಿ ಎಳ್ಳು ಹಾಗೂ ಒಂದು ಸಣ್ಣ ನಿಂಬು ಗಾತ್ರದ ಕಲ್ಲುಸಕ್ಕರೆಯನ್ನು ಸೇರಿಸಿ. ಈ ಮೂರನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಒಂದು ವಾರಕ್ಕೆ ಸಾಕಾಗುವಷ್ಟು ಕೂಡ ತಯಾರಿಸಿ ಇಟ್ಟು ಕೊಳ್ಳಬಹುದು.

ಈ ಮಿಶ್ರಣವನ್ನು ಒಂದು ಲೋಟ ಹಾಲಿಗೆ ಹಾಕಿ ಕುದಿಸಿ. ನಂತರ ಕುದಿಯುತ್ತಿರುವ ಹಾಲಿಗೆ ಅರ್ಧ ಚಮಚ ಸೋಂಪು, ಅರ್ಧ ಚಮಚ ಗಸಗಸೆಯನ್ನು ಸೇರಿಸಿ. ನಂತರ ಹಾಲನ್ನು ಕಡಿಮೆ ಉರಿಯಲ್ಲಿಟ್ಟು ಚೆನ್ನಾಗಿ ಕುದಿಸಿ. ಈ ಕುದಿಸಿದ ಹಾಲನ್ನು ಹಾಗೆಯೇ ಬಿಸಿಯಾಗಿ ಸೇವಿಸಿ.
ಇದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುವುದು ಮಾತ್ರವಲ್ಲದೆ ಬೆಳಿಗ್ಗೆ ಎದ್ದಾಗಲೂ ಕೂಡ ಅಷ್ಟೇ ಚಟುವಟಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.