9 ವರ್ಷದ ನಂತರ ಹುಟ್ಟಿದ ಮಗು ಐದೇ ದಿನಕ್ಕೆ ಕೊರೊನಾದಿಂದ ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥವಾಯ್ತು.. ಮನಕಲಕುವ ಘಟನೆ.. ಈ ದಂಪತಿ ನಿಜಕ್ಕೂ ಯಾರು ಗೊತ್ತಾ?

9 ವರ್ಷದ ನಂತರ ಮಗು ಹುಟ್ಟಿತು.. ಆದರೆ ಹುಟ್ಟಿದ ಐದೇ ದಿನಕ್ಕೆ ಕೊರೊನಾದಿಂದ ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥವಾಯ್ತು.. ಮನಕಲಕುವ ಘಟನೆ.. ಈ ದಂಪತಿ ನಿಜಕ್ಕೂ ಯಾರು ಗೊತ್ತಾ? ಒಮ್ಮೊಮ್ಮೆ ಭಗವಂತ ಕಲ್ಲಾಗಿಬಿಡುವನು ಅನ್ನೋ ಮಾತು ಇಂತಹ ಘಟನೆಗಳು ನಡೆದಾಗ ಸತ್ಯ ಅನಿಸಿಬಿಡುತ್ತದೆ.. ಹೌದು ಆ ದಂಪತಿ ಮದುವೆಯಾಗಿ ಒಂಭತ್ತು ವರ್ಷವಾಗಿತ್ತು.. ಇರೋ ಬರೋ ದೇವರುಗಳನ್ನೆಲ್ಲಾ ಹರಕೆ ಹೊತ್ತರು.. ಆದರೆ ಮಗು ಆಗಿರಲಿಲ್ಲ.. ಒಂಭತ್ತು ವರ್ಷದ ಬಳಿಕ ಪತ್ನಿ ಗರ್ಭಿಣಿಯಾದಳು.. ದೇವರು ಕೊಟ್ಟ ಮಗು ಎಂದು ದಂಪತಿಯ ಆನಂದಕ್ಕೆ ಪಾರವೇ ಇರಲಿಲ್ಲ.. ಆದರೆ ಆ ದಂಪತಿ ಮಗುವಿನ ಸಂತೋಷ ಅನುಭವಿಸುವ ಭಾಗ್ಯವನ್ನು ಕೇಳಿಕೊಂಡು ಬಂದಿರಲಿಲ್ಲವೆನಿಸುತ್ತದೆ.. ಹೌದು ಮಗು ಹುಟ್ಟಿದ ಐದೇ ದಿನಕ್ಕೆ ಅಪ್ಪ ಅಮ್ಮ ಇಬ್ಬರನ್ನೂ ಸಹ ಕಳೆದುಕೊಂಡು ಮಗು ಈಗ ಅನಾಥವಾದ ಮನಕಲಕುವ ಘಟನೆ ನಡೆದಿದೆ..

ಹೌದು ಆತನ ಹೆಸರು ನಂಜುಂಡೇಗೌಡ ವಯಸ್ಸು 45.. ಹಾಗೂ ಪತ್ನಿಯ ಹೆಸರು ಮಮತಾ ವಯಸ್ಸು 31.. ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದ ನಿವಾಸಿಗಳು.. ನಂಜೇಗೌಡ ಅವರು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು.. ಕಳೆದ ತಿಂಗಳಿನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.. ಆದರೆ ನಂಜುಂಡೇಗೌಡ ಅವರು ಚಿಕಿತ್ಸೆ ಫಲಕಾರಿಯಾಹದೇ ಏಪ್ರಿಲ್ 30 ರಂದು ಕೊನೆಯುಸಿರೆಳೆದಿದ್ದರು.. ಇನ್ನು ಇತ್ತ ತುಂಬು ಗರ್ಭಿಣಿಯಾಗಿದ್ದ ನಂಜುಂಡೇಗೌಡ ಅವರ ಪತ್ನಿ ಮಮತಾಗೂ ಸೋಂಕು ದೃಢಪಟ್ಟಿತ್ತು..

ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್‍ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.. ಆದರೆ ಮಮತಾ ಅವರಿಗೆ ಉಸಿರಾಟದ ಸಮಸ್ಯೆ ಎದುರಾದಾಗ ಮಿಮ್ಸ್ ಗೆ ದಾಖಲು ಮಾಡಲಾಯಿತು.. ಮೇ.. 11ರಂದು ಮಮತಾ ಹೆಣ್ಣು ಮಗುವಿಗೆ ಜನ್ಮವನ್ನೂ ಸಹ ನೀಡಿದರು.. ಗಂಡ ಇಲ್ಲವಾದ ನೋವಿನ ನಡುವೆಯೂ ಮಗುವಿನ ಆಗಮನ ಕೊಂಚ ಸಮಾಧಾನ ತಂದಿತ್ತು.. ಆದರೆ ದುರ್ಧೈವ ಮಗು ಹುಟ್ಟಿದ ಐದೇ ದಿನಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮಮತಾ ಕೂಡ ಜೀವ ಕಳೆದುಕೊಂಡು ಬಿಟ್ಟರು… 9 ವರ್ಷದ ಬಳಿಕ ಮಗು ನೋಡುವ ನಿರೀಕ್ಷೆಯಲ್ಲಿದ್ದ ನಂಜುಂಡೇಗೌಡ ಅವರು ಮಗು ಜನಿಸುವ ಮೊದಲೇ ಇಹಲೋಕ ತ್ಯಜಿಸಿದರೆ ಇತ್ತ ಅವರ ಪತ್ನಿ ಮಮತಾ ಮಗುವಿಗೆ ಜನ್ಮ ನೀಡಿದ ನಾಲ್ಕೇ ದಿನಕ್ಕೆ ಕೊರೊನಾಗೆ ಬಲಿಯಾಗಿದ್ದಾರೆ..

ಕುಟುಂಬಸ್ಥರು ತಾವೇ ಮಗುವನ್ನು ಆರೈಕೆ ಮಾಡುವುದಾಗಿ ತಿಳಿಸಿದ್ದಾರೆ.. ಒಂಭತ್ತು ವರ್ಷದ ಬಳಿಕ ಮಗು ಜನಿಸಿದ ಸಂಭ್ರಮ ಮನೆ ಮಾಡಬೇಕಿದ್ದ ಕುಟುಂಬದಲ್ಲೀಗ ಬರೀ ಮೌನವಷ್ಟೇ.. ಆ ದಂಪತಿಯ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತು.. ಯಾವ ಶತ್ರುಗಳಿಗೂ ಬೇಡಪ್ಪಾ ಇಂತಹ ಶಿಕ್ಷೆ.. ಕುಟುಂಬದವರನ್ನು ಕಣ್ಣೆದುರೇ ಕಳೆದುಕೊಳ್ಳುವ ನೋವಿಗಿಂತ ಮಿಗಿಲಾದ ನೋವು ಬೇರೊಂದಿಲ್ಲ..