ಕೊರೊನಾದಿಂದ ಜೀವ ಕಳೆದುಕೊಂಡು ಪುಟ್ಟ ಕಂದನನ್ನು ಬಿಟ್ಟು ಹೋದ ಈ ಯುವತಿ ಬಗ್ಗೆ ಮಾತನಾಡಿದ ಆನಂದ್ ಮಹೀಂದ್ರ ಅವರು.. ಕಾರಣವೇನು ಗೊತ್ತಾ?

ದೊಡ್ಡ ದೊಡ್ಡ ಉದ್ಯಮಿಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಜನ ಸಾಮಾನ್ಯರ ಜೊತೆ ಬೆರೆಯುವುದಿಲ್ಲ.. ಅದರಲ್ಲೂ ಜನರ ಅಭಿಪ್ರಾಯಗಳಿಗೆ ಖುದ್ದು ತಾವೇ ನಿಂತು ಪ್ರತಿಕ್ರಿಯೆ ನೀಡೋದು ಕನಸಿನ ಮಾತು.. ಆದರೆ ಈ ಮಾತನ್ನು ಉದ್ಯಮಿ ಆನಂದ್ ಮಹೀಂದ್ರ ಅವರು ಮಾತ್ರ ಸುಳ್ಳಾಗಿಸಿದ್ದಾರೆ.. ಹೌದು ಮೊದಲಿನಿಂದಲೂ ಸಹ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಆಕ್ಟೀವ್ ಇರುವ ಆನಂದ್ ಮಹೀಂದ್ರ ಅವರು ಆಗಾಗ ಜನ ಸಾಮಾನ್ಯರ ಹಾಗೂ ವಿಶೇಷ ವಿಚಾರಗಳ ಕುರಿತು ಪೋಸ್ಟ್ ಮಾಡುತ್ತಿರುತ್ತಾರೆ.. ಜೊತೆಗೆ ಅನೇಕರಿಗೆ ಉಡುಗೊರೆಗಳನ್ನು ನೀಡುತ್ತಿರುತ್ತಾರೆ.. ಅದೆಷ್ಟೋ ಸ್ವಾವಲಂಬಿ ಉದ್ಯಮಿಗಳಿಗೆ ತಮ್ಮ ಕಂಪನಿಯ ಕಾರ್ ಗಳನ್ನು ನೀಡಿದ್ದಾರೆ.. ಟೀಂ ಇಂಡಿಯಾ ಆಟಗಾರರಿಗೆ ಮೊನ್ನೆ ಮೊನ್ನೆಯಷ್ಟೇ ಮಹೀಂದ್ರಾ ಥಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು.. ಹೀಗೆ ಸದಾ ಸಾಮಾನ್ಯರಲ್ಲಿ ಒಬ್ಬರಾಗಿ ನಡೆದುಕೊಳ್ಳುವ ಆನಂದ್ ಮಹೀಂದ್ರಾ ಅವರು ಇದೀಗ ಕೊರೊನಾ ದಿಂದ ಕೆಲ ದಿನಗಳ ಹಿಂದೆ ಜೀವ ಕಳೆದುಕೊಂಡ ಆ ಗಟ್ಟಿಗಿತ್ತಿ ಹೆಣ್ಣು ಮಗಳ ಬಗ್ಗೆ ಮಾತನಾಡಿದ್ದಾರೆ..

ಹೌದು ಕೆಲ ದಿನದ ಹಿಂದೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಐಸಿಯು ಬೆಡ್ ಸಿಗದ ಕಾರಣ ಮೂವತ್ತು ವರ್ಷದ ಯುವತಿಯೊಬ್ಬರು ಆಕ್ಸಿಜನ್ ಸಹಾಯ ದಿಂದ ಉಸಿರಾಡುತ್ತಾ ನಾರ್ಮಲ್‌ ಬೆಡ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.. ಅವರು ತಮ್ಮ ಮನೋಸ್ಥೈರ್ಯದಿಂದ ಧೈರ್ಯವಾಗಿದ್ದರು.. ಅಷ್ಟೇ ಅಲ್ಲದೇ ವೈದ್ಯರ ಬಳಿ ಹಾಡನ್ನು ಹಾಕಲು ಹೇಳಿ ಹಾಡಿಗೆ ತಲೆದೂಗಿದ್ದರು.. ಈ ಕುರಿತು ವೈದ್ಯೆ ಸಾಮಾಜಿಕ ಜಾಲತಾಣದಲ್ಲಿ ಆ ಯುವತಿಯ ವೀಡಿಯೋವನ್ನು ಶೇರ್ ಮಾಡಿಕೊಂಡು ಆಕೆಯಗಟ್ಟಿತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.. ಕ್ಷಣಮಾತ್ರದಲ್ಲಿ ವೀಡಿಯೋ ವೈರಲ್ ಸಹ ಆಗಿತ್ತು..

ಎಲ್ಲರೂ ಆಕೆ ಬೇಗ ಗುಣಮುಖಳಾಗಲೆಂದು ಪ್ರಾರ್ಥಿಸಿದ್ದರು.. ಆ ಬಳಿಕ ಎರಡು ದಿನದ ನಂತರ ಆಕೆಗೆ ಐಸಿಯು ಬೆಡ್ ಸಿಕ್ಕಿತು.ಮ್ ಆದರೆ ಅಷ್ಟರಲ್ಲಿ ಆಕೆಯ ಸ್ಥಿತಿ ಗಂಭೀರವಾಗಿತ್ತು.. ಆಕೆಗಾಗಿ ಮನೆಯಲ್ಲಿ ಪುಟ್ಟ ಮಗುವೊಂದು ಕಾಯುತ್ತಿದೆ.. ದಯವಿಟ್ಟು ಈಕೆಗಾಗಿ ಪ್ರಾರ್ಥನೆ ಮಾಡಿ ಎಂದು ಅದೇ ವೈದ್ಯರು ಪೋಸ್ಟ್ ಮಾಡಿದ್ದರು.. ಲಕ್ಷಾಂತರ ಜನರು ಆ ಯುವತಿ ಬೇಗ ಗುಣಮುಖಳಾಗಲಿ ಎಂದು ಹಾರೈಸಿದ್ದರು.. ಆದರೆ ವಿಧಿಯಾಟ ಬೇರೆಯೇ ಇತ್ತು.. ಎರಡು ದಿನದ ಬಳಿಕ ಆ ಯುವತಿ ಕೊನೆಯುಸಿರೆಳೆದೇ ಬಿಟ್ಟಳು.. ಕೊರೊನಾದ ಆಟಕ್ಕೆ ಆ ಯುವತಿ ತನ್ನ ಪುಟ್ಟ ಕಂದನನ್ನು ಬಿಟ್ಟು ಹೋಗಿಯೇ ಬಿಟ್ಟಳು.. ಇದೀಗ ಆ ಯುವತಿಯ ಕುರಿತು ಆನಂದ್ ಮಹೀಂದ್ರಾ ಅವರು ಸಹ ಮಾತನಾಡಿದ್ದು “ನಿಜಕ್ಕೂ ಇದು ಕ್ರೂರತನ.. ಆ ಕ್ರೂರತನದ ಹೆಸರು ಕೋವಿಡ್.. ಕೊರೊನಾ ಇಂಥವರನ್ನು ಕಳೆದುಕೊಳ್ಳುವಂತೆ ಮಾಡಿದೆ.. ಆದರೆ ಈಕೆಯನ್ನು ನಾವು ಎಂದೂ ಮರೆಯುವುದಿಲ್ಲ.. ಈ ಯುವತಿಯನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಅಷ್ಟೇ ಅಲ್ಲದೇ ಆ ಯುವತಿಗೆ ಚಿಕಿತ್ಸೆ ನೀಡಿದ ವೈದ್ಯೆಯೂ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು ಕಂಬನಿ‌ ಮಿಡಿದಿದ್ದಾರೆ.. ನಾನೆಂದೂ ಇಂತಹ ಪೇಷೆಂಟ್ ಅನ್ನು ನೋಡಿರಲಿಲ್ಲ.. ಆ ಯುವತಿ ಮಾತ್ರವಲ್ಲ ಆಕೆಯ ಕುಟುಂಬದವರು ಸಹ ಧನಾತ್ಮಕ ಮನಸ್ಥಿತಿಯನ್ನು ಹೊಂದಿದ್ದರು.. ಐಸಿಯು ನಲ್ಲಿ ಇದ್ದಾಗ ಆಕೆಗಾಗಿ ಕುಟುಂಬದವರು ಆಡಿಯೋ ಮೆಸೆಜ್ ಗಳನ್ನು ಕಳುಹಿಸುತ್ತಿದ್ದರು.. ಶೃತಿ ಕುಟುಂಬಕ್ಕೆ ನಾನು ಹೆಚ್ಚು ಆಪ್ತಳಾಗಿಬಿಟ್ಟೆ ಎಂದು ಕಂಬನಿ ಮಿಡಿದಿದ್ದಾರೆ.. ಇನ್ನು ಅದೆಷ್ಟು ಜೀವಗಳು ಈ ಕೊರೊನಾ ಆಟಕ್ಕೆ ದೂರಾಗಬೇಕೋ.‌. ಇದರ ಅಂತ್ಯವಾದರೂ ಯಾವಾಗಲೋ.. ಭಗವಂತನೆ ಬಲ್ಲ.. ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ನೋವನ್ನು ತಡೆಯುವ ಶಕ್ತಿ ನಿಜಕ್ಕೂ ಯಾರೂ ನೀಡಲಾರರು.. ಬೇಡುವುದು ಸಹ ವ್ಯರ್ಥ..