ಮೈಸೂರಿನ ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ನಿಜ ಜೇವನದಲ್ಲಿ ಹೇಗಿರ್ತಾರೆ ಗೊತ್ತಾ? ಶಾಕ್‌ ಆಗ್ತೀರಾ..

ಅರಮನೆ ನಗರಿ ಮೈಸೂರಿನಲ್ಲಿ ಆಕರ್ಷಣೆಗಳು ಹಲವಾರು. ಮೈಸೂರಿನ ಪ್ರಮುಖ ಆಕರ್ಷಣೆ ಅಂದರೆ ಅಲ್ಲಿನ ಅರಮನೆ ಮತ್ತು ರಾಜಮನೆತನ. ಈಗಲೂ ರಾಜಮನೆತನದವರು ಮೈಸೂರಿನಲ್ಲಿ ವಾಸ ಮಾಡುಟ್ಟಿದ್ದಾರೆ. ಆಧುನಿಕ ಜಗತ್ತಿನಲ್ಲಿ, ರಾಜಮನೆತನದ ಗೌರವವನ್ನು ಉಳಿಸಿಕೊಂಡು ಹೋಗುವುದು ಸ್ವಲ್ಪ ಕಷ್ಟವೇ, ಆದರೆ ಮೈಸೂರಿನ ಈಗಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಹಾರಾಣಿ ತ್ರಿಷಿಕ ಕುಮಾರಿ ಒಡೆಯರ್ ಇಬ್ಬರು ಸಹ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಮೈಸೂರಿನ ಮಹಾರಾಣಿ ತ್ರಿಷಿಕಾ ಅವರು ಮೂಲತಃ ಗುಜರಾತ್ ನ ಯುವರಾಣಿಯಾಗಿ ಬೆಳೆದವರು. ಇವರ ಜೀವನ ಶೈಲಿ ಮೈಸೂರಿನಲ್ಲಿ ಹೇಗಿರುತ್ತೆ ಗೊತ್ತಾ.. ಇಂದು ತಿಳಿಸುತ್ತೇವೆ ನೋಡಿ..

ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ರಾಜಸ್ಥಾನದ ದುಂಗರ್ ಪುರ್ ಅರಮನೆಯಲ್ಲಿ ಹುಟ್ಟಿ ಬೆಳೆದವರು. ಹಾಗಾಗಿ ರಾಜಮನೆತನದ ಆಚಾರ ವಿಚಾರಗಳು ಇವರಿಗೆ ಚೆನ್ನಾಗಿ ಗೊತ್ತಿತ್ತು. ಮೈಸೂರು ಸಂಸ್ಥಾನಕ್ಕೆ ಸೊಸೆಯಾಗಿ ಬಂದ ತ್ರಿಷಿಕಾ ಅವರು ಇಂದು ಮೈಸೂರಿನ ಮಹಾರಾಣಿಯ ಸ್ಥಾನವನ್ನು ಅಲಂಕರಿಸಿದ್ದಾರೆ. ತ್ರಿಷಿಕಾ ಅವರು ಮಹಾರಾಣಿ ಆಗಿದ್ದರು ಸಹ ಅವರ ದಿನನಿತ್ಯದ ಚಟುವಟಿಕೆಗಳು ಸಹ ಬಹುತೇಕ ಸಾಮಾನ್ಯ ಜನರ ಹಾಗೆಯೇ ಇರುತ್ತದೆ. ಹಬ್ಬ ಹರಿದಿನಗಳನ್ನು ಹೊರತುಪಡಿಸಿ, ಬೆಳಗ್ಗೆ ಬೇಗ ಏಳುವುದು, ಯೋಗ ಮಾಡುವುದು, ಮಗನನ್ನು ರೆಡಿ ಮಾಡಿ, ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದು.

ನಂತರ ಮನೆಗೆ ಬಂದು, ತಮ್ಮನ್ನು ಭೇಟಿ ಮಾಡಲು ಕಾಯುತ್ತಿರುವವರನ್ನು ಭೇಟಿ ಮಾಡುವುದು. ನಂತರ ಮಗನನ್ನು ಕರೆದುಕೊಂಡು ಶಾಲೆಯಿಂದ ಕರೆದುಕೊಂಡು ಬಂದು ಮಗನ ಯೋಗಕ್ಷೇಮ ನೋಡಿಕೊಳ್ಳುವುದು. ಸಂಜೆ ಮತ್ತೊಮ್ಮೆ ಅತಿಥಿಗಳು ಬಂದಿದ್ದರೆ ಅವರುಗಳನ್ನು ಭೇಟಿ ಮಾಡುವುದು, ನಂತರ ಬಿಡುವಿದ್ದರೆ, ರಾತ್ರಿಯ ಅಡುಗೆಯನ್ನು ತ್ರಿಷಿಕಾ ಅವರೇ ಮಾಡುತ್ತಾರೆ. ತ್ರಿಷಿಕಾ ಅವರಿಗೆ ಅಡುಗೆಯಲ್ಲಿ ತುಂಬಾ ಆಸಕ್ತಿ ಇದೆ. ಅವರ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಡುಗೆ ಮಾಡುವ, ಬೇಕಿಂಗ್ ಮಾಡುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

ಇದಲ್ಲದೆ ತ್ರಿಷಿಕಾ ಅವರು ತಮ್ಮದೇ ಆದ ಒಂದು ಉದ್ಯಮವನ್ನು ಸಹ ಶುರು ಮಾಡಿದ್ದಾರೆ. ಅದರ ಹೆಸರು ದಿ ಲಿಟ್ಲ್ ಬಂಟಿಂಗ್ಸ್, ಇದೊಂದು ಹೊಸದಾಗಿ ಶುರುವಾಗಿರುವ ಸ್ಟಾರ್ಟಪ್ ಆಗಿದ್ದು, ಮಕ್ಕಳ ಆಟಿಕೆಗಳನ್ನು ಎಕೋ ಫ್ರೆಂಡ್ಲಿಯಾಗಿ ತಯಾರು ಮಾಡಲಾಗುತ್ತದೆ. ಆನ್ ಲೈನ್ ಮೂಲಕ ಶಿಪಿಂಗ್ ಸಹ ಮಾಡಲಾಗುತ್ತದೆ. ಭಾರತದ ಎಲ್ಲಾ ಊರುಗಳಿಗೂ ಇವರ ದಿ ಲಿಟ್ಲ್ ಬಂಟಿಂಗ್ಸ್ ಸಂಸ್ಥೆ ಆಟಿಕೆಗಳನ್ನು ಕಳಿಸಿಕೊಡುತ್ತದೆ. ಈ ವ್ಯವಹಾರವನ್ನು ಪೂರ್ತಿಯಾಗಿ ತ್ರಿಷಿಕಾ ಅವರೇ ನೋಡಿಕೊಳ್ಳುತ್ತಾರೆ ಎನ್ನಲಾಗಿದೆ. ಇದಲ್ಲದೆ ಅವರದ್ದೇ ಆದ ಇನ್ನು ಕೆಲವು ವ್ಯವಹಾರಗಳು ಇರುತ್ತದೆ.

ಇವುಗಳ ಜೊತೆಗೆ ತ್ರಿಷಿಕಾ ಅವರಿಗೆ ಟ್ರಾವೆಲ್ಲಿಂಗ್ ಅಂದ್ರೆ ತುಂಬಾ ಇಷ್ಟ. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ, ಪತಿ ಮತ್ತು ಮಗನ ಜೊತೆ ಜೊತೆ ನಾಗರಹೊಳೆ, ಕಬಿನಿ ಇಂತಹ ಫಾರೆಸ್ಟ್ ಜಾಗಗಳಿಗೆ ಭೇಟಿ ನೀಡಿ, ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡುತ್ತಾರೆ ತ್ರಿಷಿಕಾ. ಸ್ಪೋರ್ಟ್ಸ್ ಮತ್ತು ಡ್ಯಾನ್ಸ್ ನಲ್ಲಿ ಸಹ ತ್ರಿಷಿಕಾ ಅವರಿಗೆ ಆಸಕ್ತಿ ಇದೆ. ಬಾಸ್ಕೆಟ್ ಬಾಲ್ ಮತ್ತು ಟೆನ್ನಿಸ್ ಅನ್ನು ಚಿಕ್ಕ ವಯಸ್ಸಿನಿಂದಲೂ ಇಷ್ಟಪಡುತ್ತಾರೆ. ಹಾಗೆಯೇ ಭರತನಾಟ್ಯಮ್ ಮತ್ತು ಝಾಸ್ ನೃತ್ಯಶೈಲಿಗಳನ್ನು ಸಹ ಕಲಿತಿದ್ದಾರೆ ಮೈಸೂರಿನ ಮಹಾರಾಣಿ.

ಮಹಾರಾಣಿಯಾಗಿ ತ್ರಿಷಿಕಾ ಅವರು ಸರಳವಾದ ಸ್ವಭಾವ ಮತ್ತು ವ್ಯಕ್ತಿತ್ವ ಹೊಂದಿರುವವರು, ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಎಲ್ಲರ ಜೊತೆ ಒಳ್ಳೆಯ ರೀತಿಯಲ್ಲಿ ನಗುನಗುತ್ತಾ ಮಾತನಾಡುತ್ತಾರೆ. ಅಲ್ಲದೆ, ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ತಿನ್ನಲು ಸಹ ಏನು ಇಲ್ಲದೆ ಇದ್ದಾಗ, ತ್ರಿಷಿಕಾ ಅವರು ತಾವೇ ಅಡುಗೆ ಮಾಡಿ, ಒಂದಷ್ಟು ಜನರಿಗೆ ಆಹಾರ ಒದಗಿಸುತ್ತಿದ್ದರು. ಮೈಸೂರಿನ ಜನರ ಪ್ರೀತಿ, ಎಲ್ಲಾ ಜವಾಬ್ದಾರಿಯನ್ನು ಸುಲಭ ಆಗುವ ಹಾಗೆ ಮಾಡಿದೆ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು ತ್ರಿಷಿಕಾ ದೇವಿ ಅವರು.. ನಮ್ಮ ರಾಜಮನೆತನಗಳು ನಮ್ಮ ಹೆಮ್ಮೆ.. ನೂರ್ಕಾಲ ಸುಖವಾಗಿರಲಿ..