ದಾಂಪತ್ಯ ಜೀವನಕ್ಕೆ ಖ್ಯಾತ ನಿರೂಪಕಿ.. ಹಣದ ಮಹಿಮೆ ಎಂದ ಜನ.. ಈಕೆ ನಿಜಕ್ಕೂ ಯಾರು ಗೊತ್ತಾ..

ಮದುವೆ ಅನ್ನೋದು ಸ್ವರ್ಗದಲ್ಲಿ ಮೊದಲೇ ನಿಶ್ಚಯವಾಗಿ ಬಿಟ್ಟಿರುತ್ತದೆ.. ಯಾರಿಗೆ ಯಾರು ಜೋಡಿ ಎಂಬುದು ಪೂರ್ವ ನಿರ್ಣಯ ಅನ್ನೋ ಮಾತಿತ್ತು.. ಆದರೆ ಈಗ ದುಡ್ಡಿದ್ದರೆ ಯಾರು ಯಾರನ್ನು ಬೇಕಾದರೂ ಮದುವೆಯಾಗಬಹುದೆನ್ನುವ ಪರಿಸ್ಥಿತಿ ಬಂದಿದೆ. ಹೌದು ಇಂತಹದೊಂದು ಮಾತು ಕೇಳಿ ಬರಲು ಕಾರಣ ಖ್ಯಾತ ನಿರೂಪಕಿ ನಿರ್ಮಾಪಕರೊಬ್ಬರನ್ನು ಮದುವೆಯಾಗಿರೋದಕ್ಕೆ.. ಅಷ್ಟಕ್ಕೂ ಅಷ್ಟು ಸುಂದರವಾಗಿರುವ ನಿರೂಪಕಿ ದಡೂತಿಯಾಗಿರುವ ನಿರ್ಮಾಪಕನನ್ನು ಮದುವೆಯಾಗಲು ಕಾರಣವೇನು.. ಸಾಮಾಜಿಕ ಜಾಲತಾಣದಲ್ಲಿ ಹಣದ ಮಹಿಮೆ ಎಂದಿದ್ದೇಕೆ ಎಲ್ಲಾ ವಿಚಾರ ಇಲ್ಲಿದೆ‌.

ಹೌದು ಈಕೆ ಮತ್ಯಾರೂ ಅಲ್ಲ.. ತಮಿಳಿನ ಜನಪ್ರಿಯ ನಿರೂಪಕಿ ಹಾಗೂ ನಟಿಯೂ ಆಗಿರುವ ಮಹಾಲಕ್ಷ್ಮೀ.. ಮಹಾಲಕ್ಷ್ಮಿ ಅವರ ವಿವಾಹ ನಿನ್ನೆ ಅದ್ಧೂರಿಯಾಗಿ ನೆರವೇರಿದೆ‌. ಖ್ಯಾತ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್ ಅವರೊಂದಿಗೆ ಮಹಾಲಕ್ಷ್ಮೀ ಸಪ್ತಪದಿ ತುಳಿದಿದ್ದು, ಇವರಿಬ್ಬರ ಮದುವೆ ಫೋಟೋಗಳು ಸಖತ್ ವೈರಲ್ ಆಗಿವೆ. ಆದರೆ ಇವರಿಬ್ಬರಿಗೂ ಇದು ಮೊದಲ ಮದುವೆಯಲ್ಲ.. ಇಬ್ಬರಿಗೂ ಸಹ ಇದು ಎರಡನೇ ಮದುವೆ ಆಗಿದೆ. ತಿರುಪತಿಯಲ್ಲಿ ಇವರ ಈ ಮದುವೆ ನೆರವೇರಿದೆ..

ಮದುವೆ ಫೋಟೋಗಳನ್ನು ಇಬ್ಬರು ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮಹಾಲಕ್ಷ್ಮೀ ಅವರು, ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬ ಅದೃಷ್ಟ ಮಾಡಿದ್ದೇನೆ.. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ ಲವ್ ಯೂ ಅಮ್ಮು.. ಎಂದು ಬರೆದುಕೊಂಡಿದ್ದಾರೆ. ನಿರೂಪಕಿಯಾಗಿ ಮಾತ್ರವಲ್ಲದೆ, ನಟಿಯಾಗಿಯೂ ಕೂಡ ಮಹಾಲಕ್ಷ್ಮೀ ಅವರು ಗಮನಸೆಳೆದಿದ್ದಾರೆ.. ವಿಶೇಷವೆಂದರೆ, ರವೀಂದರ್‌ ಚಂದ್ರಶೇಖರ್ ನಿರ್ಮಿಸಿದ್ದ ವಿಡಿಯುಮ್‌ ವಾರೈ ಕಾಥಿರು ಸಿನಿಮಾದಲ್ಲೂ ಮಹಾಲಕ್ಷ್ಮೀ ನಟಿಸಿದ್ದರು. ಆ ಸಿನಿಮಾದಲ್ಲಿ ವಿದಾರ್ಥ್‌ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿದ್ದರು..

ಇನ್ನು ಧಾರಾವಾಹಿ ಕ್ಷೇತ್ರದಲ್ಲೂ ಮಹಾಲಕ್ಷ್ಮೀ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ..

ಹಾಗೆಯೇ, ರವೀಂದರ್‌ ಚಂದ್ರಶೇಖರನ್‌ ಅವರು ಕೂಡ ನಟ್ಪುನ ಎನ್ನಡು ಥೆರಿಯುಮ, ಮುರುಂಗೈಕೈ ಚಿಪ್ಸ್ ವಿಡಿಯುಮ್‌ ವಾರೈ ಕಾಥಿರು ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.. ಇದೀಗ ಈ ಜೋಡಿ ಎರಡನೇ ಮದುವೆಯ ಮೂಲಕ ಒಂದಾಗಿದ್ದು ಹೊಸ ಜೀವನ ಆರಂಭಿಸಿದ್ದಾರೆ.. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಜೋಡಿಯ ಬಗ್ಗೆ ಸಿಕ್ಕಾಪಟ್ಟೆ ಕಮೆಂಟ್ ಗಳು ಬರುತ್ತಿದ್ದು ಹಣವಿದ್ದರೆ ಯಾರು ಎಷ್ಟು ಕಪ್ಪಗಿದ್ದರೂ ದಪ್ಪಗಿದ್ದರೂ ತೆಳ್ಳಗೆ ಬೆಳ್ಳಗೆ ಇರೋ ಹುಡುಗಿಯನ್ನು ಮದುವೆಯಾಗಬಹುದು ಎಂದು ಕಮೆಂಟ್ ಮಾಡಿದ್ದು ಟ್ರೋಲ್ ಕೂಡ ಆಗುತ್ತಿದೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622