ಬೇರೆ ಚಾನಲ್‌ ನಲ್ಲಿ ಮಗಳು ಜಾನಕಿ ಪ್ರಸಾರ.. ಸೀತಾರಾಮ್ ಅವರು ಹೇಳಿದ್ದೇನು?

ಸದ್ಯ ನಾಲ್ಕು ದಿನಗಳಿಂದ ಸಾಮಜಿಕ ಜಾಲತಾಣದಲ್ಲಿ‌ ಮಗಳು‌ ಜಾನಕಿಯದ್ದೇ ಮಾತು..‌ ಹೌದು ಕಾರಣಾಂತರಗಳಿಂದ ಕಲರ್ಸ್ ಸೂಪರ್ ವಾಹಿನಿಯನ್ನು ಸ್ಥಗಿತಗೊಳಿಸಲಾಗಿದೆ..‌ ಇದೇ ಕಾರಣಕ್ಕೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬರುತ್ತಿದ್ದ ಎಲ್ಲಾ ಧಾರಾವಾಹಿಗಳ ಪ್ರಸಾರವೂ ನಿಲ್ಲಲಿದೆ..

ಆದರೆ ಜನಮನ ಗೆದ್ದಿದ್ದ ಮಗಳು ಜಾನಕಿ ಧಾರಾವಾಹಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಸಾಮಾಜಿಕ ಜಾಲತಾಣದಲ್ಲೊ‌ ಅಭಿಯಾನ ಮಾಡಲಾಗುತ್ತಿದೆ.ಮ್ ಮಗಳು ಜಾನಕಿ “ಮರಳು ಜಾನಕಿ” ಎಂಬ ಅಭಿಯಾನ ನಡೆಯುತ್ತಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಾದರೂ ಧಾರಾವಾಹಿ ಪ್ರಸಾರ ಮಾಡುವಂತೆ ಮನವಿ‌ ಮಾಡಲಾಗುತ್ತಿದೆ..

ಆದರೆ ಅದಾಗಲೇ ನಿರ್ದೇಶಕರಾದ ಟಿ ಎನ್ ಸೀತಾರಾಂ ಅವರು ಬೇರೆ ಚಾನಲ್‌ನಲ್ಲಿ‌ ಪ್ರಸಾರ ಮಾಡುವುದು ಸಾಧ್ಯವಿಲ್ಲ ಎಂದಿದ್ದರು.. ಇದಕ್ಕೆ ಕಾರಣವೂ ಇದೆ.. ಹೌದು ಮೊನ್ನೆಯಷ್ಟೇ ಸೀತಾರಾಂ ಅವರು ಮಗಳು ಜಾನಕಿ‌ ಧಾರಾವಾಹಿ ನಿಲ್ಲುತ್ತಿರುವ ವಿಚಾರ ತಿಳಿಸುವ ಸಲುವಾಗಿ ಫೇಸ್ಬುಕ್ ನಲ್ಲಿ‌ “ಮಗಳು ಜಾನಕಿ ಯ ಆತ್ಮೀಯ ಬಂಧುಗಳಿಗೆ ನಮಸ್ಕಾರ.. ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ.

ಅದಕ್ಕೆ ಮುಂಚೆ ಜೂನ್ ಒಂದರಿಂದ ರಾತ್ರಿ 9.30 ಕ್ಕೆ ನಾವು ಹಿಂದೆ ಶೂಟಿಂಗ್ ಮುಗಿಸಿದ್ದ ಮಗಳು ಜಾನಕಿಯ ಹೊಸ ಎಪಿಸೋಡು ಗಳನ್ನು ಸುಮಾರು ಎರಡು ವಾರಗಳ ಕಾಲ ಪ್ರಸಾರ ಮಾಡುತ್ತಿದ್ದಾರೆ. ನೋಡಬೇಕಾಗಿ ಪ್ರಾರ್ಥನೆ.

ನೀವು ಮಗಳು ಜಾನಕಿಗೆ ತೋರಿದ ಪ್ರೀತಿ ಕಂಡು ನನ್ನ ಹೃದಯ ಆರ್ದ್ರ ಗೊಂಡಿದೆ.. ನಿಮಗೆಲ್ಲ ಧನ್ಯವಾದಗಳು.. ಮತ್ತೊಮ್ಮೆ ನಿಮ್ಮ ಜತೆ ಮಾತನಾಡುತ್ತೇನೆ. ಪ್ರೀತಿ ತುಂಬಿದ ನಮನಗಳು.. ಬೇರೆ ಚಾನಲ್ ಗಳಲ್ಲಿ ಮುಂದುವರೆಸ ಬೇಕೆಂದು ಅನೇಕರು ಕೇಳುತ್ತಿದ್ದೀರಿ.
ಕಾರಣಾಂತರಗಳಿಂದ ಅದು ಸಾಧ್ಯವಿಲ್ಲ” ಎಂದು ಬರೆದು ಪೋಸ್ಟ್ ಮಾಡಿದ್ದರು..

ಆದರೆ ಕಲರ್ಸ್ ಸಂಸ್ಥೆಯ ಮತ್ತೊಂದು ಚಾನಲ್‌ ಕಲರ್ಸ್ ಕನ್ನಡದಲ್ಲಿ ಧಾರಾವಾಹಿ‌ ಮುಂದುವರೆಸಿ ಎನ್ನುವುದು ಅಭಿಮಾನಿಗಳ ವಾದ.. ಆದರೆ ಇದಕ್ಕೆ ಹಕ್ಕುಸ್ವಾಮ್ಯದ ತೊಂದರೆ ಎದುರಾಗುತ್ತದೆ.. ಹೌದು ಸಂಸ್ಥೆ ಒಂದೇ ಆದರೂ ಅದರಲ್ಲಿ ಅದರದ್ದೇ ರೀತಿಯ ನೀತಿ‌ನಿಯಮಗಳು ಇರುತ್ತವೆ..‌ ಅದೇ ಕಾರಣಕ್ಕೆ ಮತ್ತೊಂದು ವಾಹಿನಿಯಲ್ಲಿ ಪ್ರಸಾರ ಮಾಡುವುದು ಸಾಧ್ಯವಿಲ್ಲ..

ಆದರೆ ಕಲರ್ಸ್ ಸಂಸ್ಥೆ ತನ್ನ ಮ್ಯಾನೇಜ್ಮೆಂಟ್ ನಲ್ಲಿ ತಮ್ಮ ನಿಯಮಗಳನ್ನು ಬದಲಿಸಿದರೆ ಅದು ಖಂಡಿತ ಸಾಧ್ಯ.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಗಳು ಜಾನಕಿಯನ್ನು ನೋಡಬಹುದು.ಮ್ ಆದರೆ ಮ್ಯಾನೇಜ್ಮೆಂಟ್ ಮನಸ್ಸು ಮಾಡಬೇಕಷ್ಟೇ.. ಈ ಹಿಂದೆ ಕಲರ್ಸ್ ಸೂಪರ್ ನಲ್ಲಿ‌ ಪ್ರಸಾರ ವಾಗುತ್ತಿದ್ದ ಬಿಗ್ ಬಾಸ್ ಅನ್ನು ಮತ್ತೆ ಕಲರ್ಸ್ ಕನ್ನಡಕ್ಕೆ ಹೇಗೆ ತಂದರೋ ಅದೇ ರೀತಿಯಲ್ಲಿ ಕಲರ್ಸ್ ಸೂಪರ್ ನಲ್ಲಿ‌ ಪ್ರಸಾರವಾಗುತ್ತಿದ್ದ ಮಗಳು ಜಾನಕಿಯನ್ನು‌ ಕಲರ್ಸ್ ಕನ್ನಡಕ್ಕೆ ವರ್ಗಾಯಿಸಲಿ.. ಮತ್ತೆ ಮಗಳು ಜಾನಕಿ‌ ಮರಳುವಂತಾಗಲಿ.. ಅರ್ಥವಿಲ್ಲದ 10 ಧಾರಾವಾಹಿ ಗಿಂತ ಅರ್ಥಪೂರ್ಣವಾದ ಮಗಳು ಜಾನಕಿ‌ ಒಂದು ಧಾರಾವಾಹಿ ಪ್ರಸಾರ ಮಾಡಿದರೆ ಎಷ್ಟೋ ಚೆನ್ನ.. ಇದು ಬಹುತೇಕ ಎಲ್ಲಾ ಕನ್ನಡ ಧಾರಾವಾಹಿ ಪ್ರಿಯರ ಅಭಿಪ್ರಾಯವಾಗಿದೆ..