ನಿಂತು ಹೋಗುತ್ತಿರುವ ಮಗಳು ಜಾನಕಿ‌ ಧಾರಾವಾಹಿ ಪ್ರಿಯರಿಗೆ ಸಿಹಿ ಸುದ್ದಿ..

ಧಾರಾವಾಹಿಗಳು ಅನ್ನೋದು ಮಹಿಳೆಯರು ಮಾತ್ರವಲ್ಲದೇ ಎಲ್ಲರಿಗೂ ಮನರಂಜನೆಗೊಂದು ದಾರಿಯಾಗಿದೆ.. ಅದರಲ್ಲೂ ಕೆಲ ಧಾರಾವಾಹಿಗಳಂತು ಮನಸ್ಸಿಗೆ ಬಹಳ ಹತ್ತಿರವಾಗುತ್ತವೆ.. ಅಂತಹುದೇ ಒಂದು ಧಾರಾವಾಹಿ ಮಗಳು ಜಾನಕಿ.. ಸೀತಾರಾಮ್ ಅವರ ಧಾರಾವಾಹಿ ಎಂದ ಕೂಡಲೇ ಅಲ್ಲಿ ಕತೆಗೆ ಪಾತ್ರಗಳಿಗಷ್ಟೇ ಪ್ರಾಮುಖ್ಯತೆ.. ಬೇರೆ ಯಾವುದೇ ರೀತಿಯ ಅನಾವಶ್ಯಕ ಅದ್ಧೂರಿತನವಾಗಲಿ, ಬೇರೆ ಗಿಮಿಕ್ ಗಳಾಗಲಿ‌ ಇರುವುದಿಲ್ಲ..

ಅದೇ ರೀತಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮಗಳು ಜಾನಕಿ‌ ಮನೆಗಳಿಗಷ್ಟೇ ಅಲ್ಲದೇ ಎಲ್ಲರ ಮನಸ್ಸೊಳಗೂ ಬಂದಳು.. ಅಪಾರ ಅಭಿಮಾನಿಗಳಾದರು.. ರಾತ್ರಿ 9.30 ಆಯಿತೆಂದರೆ ಜಾನಕಿಗಾಗಿ ಕಾಯುತ್ತಿದ್ದರು.. ಆದರೆ ಕೊರೊನಾ ಬಂದು ಜಾನಕಿಯನ್ನು ನುಂಗಿ ಹಾಕಿದಂತಾಗಿ ಹೋಯ್ತು..

ಹೌದು ಕೊರೊನಾ ಬಂದ ನಂತರ ಆರ್ಥಿಕ ಪರಿಸ್ಥಿತಿ ಕುಸಿದ ಕಾರಣ ಕಲರ್ಸ್ ಸೂಪರ್ ವಾಹಿನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.. ಅದರಲ್ಲಿ ಬರುತ್ತಿದ್ದ ಎಲ್ಲಾ ಧಾರಾವಾಹಿಗಳು ನಿಂತವು.. ಮಗಳು ಜಾನಕಿ‌ ಕೂಡ ಬೇರೆ ದಾರಿ‌ ಇಲ್ಲದೇ ನಿಲ್ಲುವ ಪರಿಸ್ಥಿತಿ ಎದುರಾಯಿತು.. ಈಗಾಗಲೇ ಚಿತ್ರೀಕರಣ ಗೊಂಡಿರುವ ಎರಡು ವಾರಗಳಷ್ಟು ಎಪಿಸೋಡ್ ಗಳು ಜೂನ್ 1 ರಿಂದ ಎರಡು ವಾರ ಪ್ರಸಾರವಾಗುತ್ತಿದೆ.. ಅದಾದ ನಂತರ ಜಾನಕಿ ಜನರ ಮನಸ್ಸಿನಲ್ಲಿ ನೆನಪುಗಳ ಬಿಟ್ಟು‌ ಹೋಗಲೇ ಬೇಕಿದೆ..

ಆದರೀಗ ಮಗಳು ಜಾನಕಿ ಅಭಿಮಾನಿಗಳಿಗೆ ಸೀತಾರಾಮ್ ಅವರು ಸಿಹಿ ಸುದ್ದಿ ನೀಡಿದ್ದಾರೆ.. ಹೌದು ಸೀತಾರಾಮ್ ಅವರ ಭೂಮಿಕಾ ತಂಡದಿಂದ ಹೊಸದೊಂದು ಧಾರಾವಾಹಿ ತಯಾರಾಗುತ್ತಿದೆ.. ಈಗಾಗಲೇ ಕತೆ ಬರೆಯುವಲ್ಲಿ ತೊಡಗಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಹೊಸ ಧಾರಾವಾಹಿಯ ಪಾತ್ರಗಳಿಗೆ ಕಲಾವಿದರ ಆಯ್ಕೆಯೂ ನಡೆಯುತ್ತಿದೆ..

ಆದರೆ ಯಾವ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರ ವಾಗುವುದೋ ಕಾದು ನೋಡಬೇಕಿದೆ.. ಕಲರ್ಸ್ ಕನ್ನಡದಲ್ಲಿ‌ ಹೊಸ ಧಾರಾವಾಹಿಗೆ ಸ್ಲಾಟ್ ನೀಡುವರೋ ಅಥವಾ ಜೀ ಕನ್ನಡ ವಾಹಿನಿಗೆ ಸೀತಾರಾಮ್ ಅವರನ್ನು ಕರೆತರುವರೋ ಕಾದು ನೋಡಬೇಕಿದೆ..