ಕನ್ನಡದ ಹಾಸ್ಯ ನಟ ಮೈಕಲ್‌ ಮಧು ಇನ್ನಿಲ್ಲ.. ಏನಾಗಿತ್ತು ಗೊತ್ತಾ?

ಕನ್ನಡ ಚಿತ್ರರಂಗಕ್ಕೆ ಈ ವರ್ಷ ಆರಂಭದಲ್ಲಿಯೇ ಅತ್ಯಂತ ಕೆಟ್ಟ ವರ್ಷದಂತೆ ಕಾಣುತ್ತಿದೆ.. ಕೊರೊನಾ ದಿಂದಾಗಿ ಸಿನಿಮಾದ ಸಣ್ಣ ಪುಟ್ಟ ಕಲಾವಿದರು ದಿನಗೂಲಿ‌ ನೌಕರರು ಬೀದಿಗೆ ಬೀಳುವಂತಾಗಿದೆ.. ಇತ್ತ ಒಬ್ಬರ ಹಿಂದೆ ಒಬ್ಬರಂತೆ ದಿಗ್ಗಜ ಕಲಾವಿದರು ಇಲ್ಲವಾಗುತ್ತಿದ್ದಾರೆ..

ಹೌದು ಇಂದು ಕನ್ನಡದ ಪ್ರಖ್ಯಾತ ಹಾಸ್ಯ ನಟ ಮೈಕಲ್ ಮಧು ಅವರು ಸಾವನಪ್ಪಿದ್ದಾರೆ.ಮ್ ಸೂರ್ಯವಂಶ ಸಿನಿಮಾ ಮೂಲಕ ಪ್ರಖ್ಯಾತಿ ಪಡೆದಿದ್ದ ಅಧ್ಬುತ ಕಲಾವಿದ ಇಂದು ತಮ್ಮ ಜೀವನದ ಪಯಣವನ್ನು ಮುಗಿಸಿದ್ದಾರೆ.. ಮೊನ್ನೆ ಮೊನ್ನೆಯಷ್ಟೇ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಸಾವಿನ ಸುದ್ದಿಯನ್ನೇ ಇನ್ನೂ ಅರಗಿಸಿಕೊಳ್ಳದ ಚಿತ್ರರಂಗಕ್ಕೆ ಮತ್ತೊಂದು ಕಹಿ ಸುದ್ದಿ ಎದುರಾಗಿದೆ..

ಆದರೆ ಮೈಕಲ್‌ ಮಧು ಅವರು ಸಾವನಪ್ಪಿದ್ದೇ ಬಹಳ ವಿಚಿತ್ರ.. ನಿನ್ನೆಯವರೆಗೂ ಚೆನ್ನಾಗಿದ್ದ ನಟ ಇಂದು ಇಲ್ಲ.. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯೂ ಮೈಕಲ್‌ ಮಧು ಅವರಿಗೆ ಇರಲಿಲ್ಲ.. ಇಂದೂ ಕೂಡ ಬೆಳಿಗ್ಗೆ ಬಹಳ ಚೆನ್ನಾಗಿಯೇ ಇದ್ದರು.. ಆದರೆ ಮಧ್ಯಾಹ್ನದ ವೇಳೆ ಊಟ ಮುಗಿಸಿ ಕುಳಿತಿದ್ದ ಮೈಕಲ್ ಮಧು ಇದ್ದಕ್ಕಿಂದಂತೆ ಕುಸಿದು ಬಿದ್ದರು.. ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ..

ಮೈಕಲ್ ಮಧು ಅವರ ಸಾವಿಗೆ ಚಿತ್ರರಂಗದ ಗಣ್ಯರು, ಕಲಾವಿದರು, ಕನ್ನಡಿಗರು ಕಂಬನಿ‌ ಮಿಡಿದಿದ್ದಾರೆ.. ನಾಳೆ ಮೈಕಲ್ ಅವರ ಕುಟುಂಬದವರಿಗೆ ಆಸ್ಪತ್ರೆಯಿಂದ ಪಾರ್ಥೀವ ಶರೀರವನ್ನು ಹಸ್ತಾಂತರ ಮಾಡಲಿದ್ದು, ನಾಳೆಯೇ ಅಂತಿಮ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.. ತಮ್ಮ ಕಲೆಯ ಮೂಲಕ ಕನ್ನಡಿಗರ ರಂಜಿಸಿದ ಅದ್ಭುತ ನಟ.. ಮೈಕಲ್‌ ಮಧು ಅವರ ಆತ್ಮಕ್ಕೆ ಶಾಂತಿ ಸಿಗಲಿ..